ಬೆಳಗಾವಿ: ಯಾರಾದರೂ ಸತ್ತರೆ ಉಚಿತ ಅಂತ್ಯಕ್ರಿಯೆ ಮಾಡುವ ಕುರಿತು ಬಿಜೆಪಿ ತನ್ನ ಪ್ರಣಾಳಿಕೆಯಲ್ಲಿ ಉಲ್ಲೇಖಿಸಿತ್ತು. ಪ್ರಣಾಳಿಕೆಯಲ್ಲಿ ಈ ಅಂಶ ಸೇರಿಸಿದ ಹಿನ್ನೆಲೆ ಎಲ್ಲೆಡೆ ತೀವ್ರ ವಿರೋಧ, ಆಕ್ರೋಷ ವ್ಯಕ್ತವಾಗಿತ್ತು.
ಇಂದು ಬೆಳಗಾವಿ ಬಿಜೆಪಿ ಪಕ್ಷದ ಕಚೇರಿಯಲ್ಲಿ ಸಚಿವ ಗೋವಿಂದ ಕಾರಜೋಳ ಸುದ್ದಿಗೋಷ್ಠಿ ನಡೆಸಿ ಈ ಬಗ್ಗೆ ಸ್ಪಷ್ಟನೆ ನೀಡುವ ಜೊತೆಗೆ ಕ್ಷಮೆ ಕೇಳಿದ್ದಾರೆ.
ಅಚಾತುರ್ಯದಿಂದ ಪ್ರಣಾಳಿಕೆಯಲ್ಲಿ ಈ ವಿಚಾರ ಸೇರ್ಪಡೆಯಾಗಿದ್ದಕ್ಕೆ ಕ್ಷೇಮಾಪಣೆ ಕೇಳುತ್ತಿದ್ದೇನೆ. ಬಡ ಜನರಿಗೆ ಅನುಕೂಲ ಕಲ್ಪಿಸುವ ನಿಟ್ಟಿನಲ್ಲಿ ಈ ವಿಚಾರ ಸೇರ್ಪಡೆ ಮಾಡಲಾಗಿತ್ತು. ಜನರ ಮನಸ್ಸಿಗೆ ಇದರಿಂದ ನೋವಾಗಿದ್ದರೆ ವಿಷಾಧಿಸುತ್ತೇವೆ. ಪ್ರಣಾಳಿಕೆಯಲ್ಲಿ ಈ ವಿಚಾರ ಕೈ ಬಿಡುವುದಾಗಿ ಭರವಸೆ ನೀಡುತ್ತೇನೆ ಎಂದಿದ್ದಾರೆ.
ಪ್ರಣಾಳಿಕೆ ವಿಚಾರದ ಬಗ್ಗೆ ಕಾಂಗ್ರೆಸ್, ಆಪ್ ಸೇರಿ ಸಾರ್ವಜನಿಕ ವಲಯದಲ್ಲಿ ತೀವ್ರ ವಿರೋಧ ವ್ಯಕ್ತವಾಗಿತ್ತು.
Comments are closed.