ಮಂಗಳೂರು : ಗಣೇಶ ಚತುರ್ಥಿ ಹಬ್ಬಗಳ ಆಚರಣೆಯ ಸಂದರ್ಭ ಧಾರ್ಮಿಕ ವಿಧಿ ವಿಧಾನಗಳಿಗೆ ಚುತಿ ಬಾರದಂತೆ ಮಾರ್ಗದರ್ಶಿ ಸೂತ್ರಗಳನ್ನು ತಕ್ಷಣ ಬಿಡುಗಡೆಗೊಳಿಸಲು ವಿಶ್ವ ಹಿಂದು ಪರಿಷತ್ ಮನವಿ ಮಾಡಿದೆ.
ಗಣೇಶ ಚತುರ್ಥಿ ಹಬ್ಬ ದೇವಸ್ಥಾನಗಳಲ್ಲಿ, ಸಾರ್ವಜನಿಕವಾಗಿ ನಡೆಸುವ ಆಚರಣೆಗಳನ್ನು ಧಾರ್ಮಿಕ ವಿಧಿ ವಿಧಾನಗಳಿಗೆ ಚುತಿ ಬಾರದಂತೆ ತಕ್ಷಣ ಮಾರ್ಗದರ್ಶಿ ಸೂತ್ರಗಳನ್ನು ಬಿಡುಗಡೆ ಮಾಡಬೇಕೆಂದು ವಿಶ್ವಹಿಂದೂ ಪರಿಷದ್ ಎಲ್ಲಾ ಸಮಿತಿಗಳ ಪರವಾಗಿ ವಿನಂತಿಸುತ್ತೇವೆ.
ದಕ್ಷಿಣ ಕನ್ನಡ ಜಿಲ್ಲೆ, ಉಡುಪಿ ಜಿಲ್ಲೆ ಸಹಿತ ರಾಜ್ಯದಲ್ಲಿ ಸಾವಿರಾರು ಗಣೇಶೋತ್ಸವ ಸಮಿತಿಗಳಿದ್ದು ಈ ಬಾರಿ ಕೊರೋನಾ ಮಹಾಮಾರಿಯ ಈ ಸಂಧರ್ಭದಲ್ಲಿ ಆಚರಿಸಬೇಕಾದ ನಿಯಮಾವಳಿಗಳನ್ನು ತಕ್ಷಣ ಪ್ರಕಟಿಸಿದಲ್ಲಿ ಅನುಕೂಲವಾಗುತ್ತದೆ. ಧಾರ್ಮಿಕ ಕಾರ್ಯಕ್ರಮಗಳ ಬಗ್ಗೆ ಕೋವಿಡ್ ನಿಯಮಾವಳಿ ಪ್ರಕಟಿಸಿದಲ್ಲಿ ಅದ್ಕಕೆ ತಕ್ಕಂತೆ ಎಲ್ಲಾ ಕಾರ್ಯಕ್ರಮಗಳನ್ನು ಶಿಸ್ತು ಭದ್ದವಾಗಿ ಆಚರಿಸಲಾಗುವುದು.
ದೇವರ ಪೂಜೆಗಳನ್ನು ವಿಧಿವತ್ತಾಗಿ ನಡೆಸುವುದರಿಂದ ಕೊರೋನಾ ಸಾಂಕ್ರಾಮಿಕ ರೋಗವು ದುರ್ಭಲವಾಗಿ, ದೇವರ ಅನುಗ್ರಹದಿಂದ ಲೋಕದಲ್ಲಿ ಸುಭಿಕ್ಷೆ ನೆಲೆಸುವುದೆಂದು ನಂಬಿಕೆ ಸಾರ್ವಜನಿಕರಲ್ಲಿ ಇರುವುದರಿಂದ ಅಂತಹ ಹಬ್ಬಗಳನ್ನು ವಿಧಿವತ್ತಾಗಿ ನಡೆಸಲು ಅನುಮತಿ ಕೊಡಬೇಕೆಂದು ಪತ್ರಿಕಾ ಪ್ರಕಟಣೆಯ ಮೂಲಕ ವಿಶ್ವ ಹಿಂದು ಪರಿಷತ್ ಜಿಲ್ಲಾ ಕಾರ್ಯದರ್ಶಿ ಶಿವಾನಂದ್ ಮೆಂಡನ್ ಜಿಲ್ಲಾಡಳಿತವನ್ನು ವಿನಂತಿಸಿದ್ದಾರೆ.
Comments are closed.