ಕರಾವಳಿ

ಯುವತಿಗೆ ಮನಸ್ಸೋಇಚ್ಚೆ ಚೂರಿಯಿಂದ ಇರಿದು ತಾನೂ ಆತ್ಮಹತ್ಯೆಗೆ ಯತ್ನಿಸಿದ ಯುವಕ | ಉಡುಪಿಯಲ್ಲಿ ಆತಂಕದ ಘಟನೆ

Pinterest LinkedIn Tumblr

ಉಡುಪಿ: ಸ್ಕೂಟಿಯಲ್ಲಿ ತೆರಳುತ್ತಿದ್ದ ಯುವತಿಗೆ ಯುವಕನೋರ್ವ ಮನಬಂದಂತೆ ಚೂರಿಯಿಂದ ಇರಿದು ಬಳಿಕ ತಾನೂ ಆತ್ಮಹತ್ಯೆಗೆ ಯತ್ನಿಸಿದ ಘಟನೆ ಉಡುಪಿ‌ ಸಮೀಪದ ರೋಬೋ ಸಾಫ್ಟ್ ಮುಂಭಾಗದ ರಾಷ್ಟ್ರೀಯ ಹೆದ್ದಾರಿ ಬಳಿ ಸೋಮವಾರ ಸಂಜೆ ನಡೆದಿದೆ.

 

ಸ್ಕೂಟಿಯಲ್ಲಿ ಬರುತ್ತಿದ್ದ ಅಂಬಾಗಿಲು ನಿವಾಸಿ ಎನ್ನಲಾದ ಯುವತಿಯನ್ನು ತಡೆದು ನಿಲ್ಲಿಸಿದ ಯುವಕ ಮನಬಂದಂತೆ ಚಾಕುವಿನಿಂದ ಇರಿದಿದ್ದು ಆಕೆ ಕುಸಿದು ಬೀಳುತ್ತಿದ್ದಂತೆಯೇ ತಾನೂ ಚಾಕುವಿನಿಂದ‌ ಇರಿದುಕೊಂಡು ಆತ್ಮಹತ್ಯೆಗೆ ಮುಂದಾಗಿದ್ದಾನೆ. ಘಟನಾ ಸ್ಥಳದಲ್ಲಿ ಚಾಕು ಪತ್ತೆಯಾಗಿದೆ.

ಗಾಯಾಳು ಯುವಕ-ಯುವತಿಯ ಆರೋಗ್ಯ ಸ್ಥಿತಿ ಗಂಭೀರವಾಗಿದ್ದು ಇಬ್ಬರನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಹೆಚ್ಚಿನ ಮಾಹಿತಿ ಇನ್ನಷ್ಟೇ ತಿಳಿದುಬರಬೇಕಿದೆ.

 

Comments are closed.