ಕರಾವಳಿ

ವಿಭಾ ಶ್ರೀನಿವಾಸ್ ನಾಯಕ್‌ರವರ ಭಕ್ತಿ ಗೀತೆಗಳ ಆಲ್ಬಮ್ ‘ರಂಗಾ ನಿನ್ನ’.. ಬಿಡುಗಡೆ

Pinterest LinkedIn Tumblr

ಮಂಗಳೂರು,ಆ30: ಮಂಗಳೂರಿನ ಕಲಾ ಸಾಧನ ಮ್ಯೂಸಿಕ್ ಸ್ಕೂಲ್ ವತಿಯಿಂದ ಸಂಗೀತ ವಿದುಷಿ ವಿಭಾ ಶ್ರೀನಿವಾಸ್ ನಾಯಕ್ ಅವರ ಸಂಗೀತ ಸುಧೆಯ ‘ರಂಗಾ ನಿನ್ನ’.. ಭಕ್ತಿ ಗೀತೆಗಳ ಆಲ್ಬಮ್ ಸಾಂಗ್ ಬಿಡುಗಡೆ ಕಾರ್ಯಕ್ರಮ ಮಂಗಳೂರು ಪ್ರೆಸ್ ಕ್ಲಬ್ ನಲ್ಲಿಂದು ಜರಗಿತು.

ಸಂಗೀತ ಸುಧೆಯ ‘ರಂಗಾ ನಿನ್ನ’.. ಭಕ್ತಿ ಗೀತೆಗಳ ಆಲ್ಬಮ್ ಸಾಂಗ್ ಅನ್ನು ಮಂಗಳೂರು ನಗರ ಪೊಲೀಸ್ ಆಯುಕ್ತರಾದ ಶಶಿ ಕುಮಾರ್ ಅವರು ಬಿಡುಗಡೆ ಮಾಡಿ, ಸ್ಥಳೀಯ ಕಲಾ ಪ್ರತಿಭೆಗಳು ಬೆಳಕಿಗೆ ತರುವ ಮತ್ತು ಕಲಾವಿದರಿಗೆ ಪೋತ್ಸಾಹ ನೀಡುವ ನಿಟ್ಟಿನಲ್ಲಿ ಅಲ್ಭಂ ಬಿಡುಗಡೆ ಮಹತ್ವ ಪಡೆದಿದೆ ಎಂದು ಶುಭ ಹಾರೈಸಿದರು.

ಕಾರ್ಯಕ್ರಮದಲ್ಲಿ ಬೈಕಂಪಾಡಿಯ ಅನಘ ರಿಫೈನರೀಸ್ ಇದರ ಆಡಳಿತ ನಿರ್ದೇಶಕ ಸಾಂಬ ಶಿವರಾವ್, ಮಂಗಳೂರಿನ ಡಿಂಕಿ ಡೈನ್ ಇದರ ಆಡಳಿತ ನಿರ್ದೇಶಕರಾದ ಸ್ವರ್ಣ ಸುಂದರ್ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಶುಭ ಹಾರೈಸಿದರು.

ದ.ಕ.ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶ್ರೀನಿವಾಸ ನಾಯಕ್ ಇಂದಾಜೆ ಸ್ವಾಗತಿಸಿದರು. ಕಲಾ ಸಾಧನ ಮ್ಯೂಸಿಕ್ ಸ್ಕೂಲ್ ನ ನಿರ್ದೇಶಕಿ ವಿಭಾ ಶ್ರೀ ನಿವಾಸ ನಾಯಕ್ ಅಲ್ಭಂ ನ ಪರಿಚಯ ಮಾಡಿದ್ದಾರೆ. ಪತ್ರಕರ್ತರಾದ ಪುಷ್ಪರಾಜ್. ಬಿ.ಎನ್ ಕಾರ್ಯಕ್ರಮ ನಿರೂಪಿಸಿದರು. ಭಾಸ್ಕರ ರೈ ಕಟ್ಟ ವಂದಿಸಿದರು.

Comments are closed.