ಮಂಗಳೂರು : ಬಿಜೆಪಿಯ ರಾಜ್ಯ ಅಧ್ಯಕ್ಷರಾಗಿ ಎರಡು ವರ್ಷ ಪೂರ್ತಿಗೊಳಿಸಿದ ಮಂಗಳೂರು ಸಂಸದ ನಳಿನ್ ಕುಮಾರ್ ಕಟೀಲ್ ಅವರಿಗೆ ಕುಲಾಲ ಸಮಾಜದ ವತಿಯಿಂದ ಗೌರವಿಸಲಾಯಿತು.
ಜಿಲ್ಲೆಯ ಸಂಸದರಾಗಿ ಕರ್ನಾಟಕ ರಾಜ್ಯ ಗುರುತಿಸಿಕೊಂಡಿರುವ ಅಪೂರ್ವ ಸಂಘಟಕ, ಬಿಜೆಪಿಯ ರಾಜ್ಯ ಅಧ್ಯಕ್ಷರಾಗಿ ಎರಡು ವರ್ಷ ಪೂರ್ತಿಗೊಳಿಸಿದ ಸಂಸದ ನಳಿನ್ ಕುಮಾರ್ ಕಟೀಲ್ ಅವರನ್ನುದಕ್ಷಿಣ ಕನ್ನಡ ಜಿಲ್ಲಾ ಮೂಲ್ಯರ ಯಾನೆ ಕುಲಾಲರ ಸಂಘದ ಅಧ್ಯಕ್ಷರಾದ ಶ್ರೀ ಮಯೂರ್ ಉಳ್ಳಾಲ್, ಶ್ರೀ ವೀರನಾರಾಯಣ ದೇವಸ್ಥಾನದ ಆಡಳಿತ ಮೊಕ್ತೇಸರ ಪುರುಷೋತ್ತಮ ಕುಲಾಲ್ ಕಲ್ಬಾವಿ, ಜೀರ್ಣೋದ್ಧಾರ ಸಮಿತಿ ಅಧ್ಯಕ್ಷರಾದ ದಾಮೋದರ್, ,ಭಾರತೀಯ ಜನತಾ ಪಕ್ಷದ ಮಂಗಳೂರು ನಗರದಕ್ಷಿಣ ದ ಪ್ರಧಾನ ಕಾರ್ಯದರ್ಶಿ ಶ್ರೀಮತಿ ರೂಪಾ ಡಿ ಬಂಗೇರ ,ಶ್ರೀ ವೀರನಾರಾಯಣ ಸೇವಾ ಟ್ರಸ್ಟ್ ಅಧ್ಯಕ್ಷರಾದ ಬಿ ಪ್ರೇಮಾನಂದ ಕುಲಾಲ್, ಜಿಲ್ಲಾ ಸಂಘದ ಉಪಾಧ್ಯಕ್ಷರುಗಳಾದ ಜಯರಾಜ್ ಪ್ರಕಾಶ್ , ದಯಾನಂದ ಅಡ್ಯಾರ್, ಹಾಗೂ ಎಂ ಪಿ ಬಂಗೇರ, ನ್ಯಾಯವಾದಿ ರವೀಂದ್ರ,,ಕುಶಾಲಪ್ಪ, ,ಗಿರಿಧರ್ ಜೆ ಮೂಲ್ಯ ,ಕೃಷ್ಣ ಬಂಗೇರ ,ಮಧುಸೂದನ್ ಅತ್ತಾವರ ,ಧನುಷ್ ರಾಜ್ ,, ಉಪಸ್ಥಿತರಿದ್ದು ಶ್ರೀ ವೀರನಾರಾಯಣ ದೇವರ ಫೋಟೋ ,ಶಾಲು ನೀಡಿ ಗೌರವಿಸಲಾಯಿತು, ಕುಲಾಲ ಸಮಾಜ ಬಂಧುಗಳ ಪ್ರೀತಿ ಗೌರವಕ್ಕೆ ಮೆಚ್ಚುಗೆ ಮಾತುಗಳನ್ನಾಡಿ, ಕುಲಾಲ ಸಮಾಜದ ಅಭಿವೃದ್ಧಿಯ ಸೇವಾಕಾರ್ಯಗಳಿಗೆ ಸದಾ ನನ್ನ ಬೆಂಬಲವಿದೆ ಎಂದು ಸಂತಸ ವ್ಯಕ್ತಪಡಿಸಿದರು.
Comments are closed.