ಕರಾವಳಿ

ಫಾರ್ಮ್‌ ಹೌಸ್‌ನ ಕೆರೆಯಲ್ಲಿ ಮುಳುಗಿ ಯುವ ವೈದ್ಯೆ ಮೃತ್ಯು

Pinterest LinkedIn Tumblr

ಮಂಗಳೂರು: ಫಾರ್ಮ್‌ ಹೌಸ್‌ ನ ಕೆರೆಯಲ್ಲಿ ಈಜಲು ಹೋಗಿ ಮಹಿಳೆಯೊಬ್ಬರು ನೀರಿನಲ್ಲಿ ಮುಳುಗಿ ಮೃತಪಟ್ಟ ಘಟನೆ ಬಂಟ್ವಾಳ ತಾಲೂಕು ಕೇಪು ಗ್ರಾಮದ ವಾರಣಾಸಿ ಎಂಬಲ್ಲಿ ಬಳಿ ಸಂಭವಿಸಿದೆ.

ಮೃತರನ್ನು ಮೈಜಿ ಕೆರೋಲ್‌ ಫೆರ್ನಾಂಡಿಸ್‌ (31) ಎಂದು ಗುರುತಿಸಲಾಗಿದೆ.

ಮೈಜಿ ಕೆರೋಲ್‌ ಫೆರ್ನಾಂಡಿಸ್‌ ವೈದ್ಯಕೀಯ ವಿಭಾಗದಲ್ಲಿ ವ್ಯಾಸಂಗ ಮಾಡಿ ಕೃಷಿ ಅಧ್ಯಯನದ ಬಗ್ಗೆ ಆಸಕ್ತಿಯನ್ನು ಹೊಂದಿ ಬಂಟ್ವಾಳ ತಾಲೂಕು ಕೇಪು ಗ್ರಾಮದ ವಾರಣಾಸಿ ಪಾರ್ಮ್ ಹೌಸ್‌ನಲ್ಲಿ ಸೆಪ್ಟೆಂಬರ್‌ 12 ರಿಂದ ಅಧ್ಯಯನ ಮಾಡುತ್ತಿದ್ದು ಸೆ. 14 ರಂದು ಸಂಜೆ ಪಾರ್ಮ ಹೌಸನಲ್ಲಿದ್ದ ಕೆರೆಯಲ್ಲಿ ಈಜಲು ಹೋಗಿದವರು ಆಕಸ್ಮಿಕವಾಗಿ ನೀರಿನಲ್ಲಿ ಮುಳುಗಿದ್ದು, ಕೂಡಲೇ ವಿಟ್ಲ ಸಮುದಾಯ ಆರೋಗ್ಯ ಕೇಂದ್ರಕ್ಕೆ ಕರೆದುಕೊಂಡು ಬಂದು ಮಂಗಳೂರಿನ ಪಾದರ್‌ ಮುಲ್ಲರ್ ಆಸ್ವತ್ರೆಗೆ ಕರೆದುಕೊಂಡು ಹೋದಾಗ ಮೃತಪಟ್ಟಿರುವುದಾಗಿ ವೈದ್ಯರು ತಿಳಿಸಿದ್ದಾರೆ.

ವಿಟ್ಲ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Comments are closed.