ಕುಂದಾಪುರ: ಪ್ರಸ್ತುತ ಕರ್ನಾಟಕ ಉಚ್ಚ ನ್ಯಾಯಾಲಯದಲ್ಲಿ ಕಾನೂನು ಸಮನ್ವಯ ಅಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿರುವ ವಕೀಲರಾದ ವನಿತಾ ಪ್ರಶಾಂತ್ ದೇವಾಡಿಗ ಅವರಿಗೆ ಗೌರವ ಡಾಕ್ಟರೇಟ್ ನೀಡಲಾಗಿದೆ.
ಉಡುಪಿ ಜಿಲ್ಲೆ ಬೈಂದೂರು ತಾಲೂಕಿನ ನಾಗೂರು ಮೂಲದ ವನೀತಾ ಪ್ರಶಾಂತ್ ದೇವಾಡಿಗ ಅವರಿಗೆ ಸಾಮಾಜಿಕ ರಂಗದ ಅನುಪಮ ಸೇವೆಯನ್ನು ಗುರುತಿಸಿ ‘ಸಮಾಜ ಸೇವೆ’ ಕ್ಷೇತ್ರದಲ್ಲಿ ಇಂಡಿಯನ್ ಎಂಪೈರ್ ಯೂನಿವರ್ಸಿಟಿ ಗೌರವ ಡಾಕ್ಟರೇಟ್ ನೀಡಿದೆ.
ಮುಂದಿನ ತಿಂಗಳು (ಅಕ್ಟೋಬರ್ 2) ರಂದು ತಮಿಳು ನಾಡಿನ ಹೊಸೂರಿನಲ್ಲಿ ಗೌರವ ಡಾಕ್ಟರೇಟ್ ಪದವಿ ನೀಡಲಾಗುತ್ತದೆ ಎಂದು ಇಂಡಿಯನ್ ಎಂಪೈರ್ ವಿಶ್ವವಿದ್ಯಾನಿಲಯದ ಹಾಗೂ ಯೂನಿವರ್ಸಲ್ ಡೆವಲಪ್ಮೆಂಟ್ ಕೌನ್ಸಿಲ್ ನ ಉಪಾಧ್ಯಕ್ಷರಾದ ಡಾ.ಕೆ.ಪ್ರಭಾಕರ್ ರವರು ಪತ್ರದ ಮೂಲಕ ತಿಳಿಸಿದ್ದಾರೆ.
Comments are closed.