UAE

ಖ್ಯಾತ ಉದ್ಯಮಿ ಹರೀಶ್ ಶೇರಿಗಾರ್, ಕುಟುಂಬಕ್ಕೆ ದುಬೈ ಗೋಲ್ಡನ್ ವೀಸಾ

Pinterest LinkedIn Tumblr

ದುಬೈ: ದುಬೈನಲ್ಲಿ ಉದ್ಯಮ ಹೊಂದಿರುವ ಖ್ಯಾತ ಉದ್ಯಮಿ, ಅನಿವಾಸಿ ಭಾರತೀಯ ಹರೀಶ್ ಶೇರಿಗಾರ್ ಮತ್ತು‌ ಕುಟುಂಬದವರಿಗೆ ಯುಎಇ ಗೋಲ್ಡನ್ ವೀಸಾ ಸಿಕ್ಕಿದೆ.

ಹರೀಶ್ ಶೇರಿಗಾರ್ ಅವರ ಬಗ್ಗೆ…
ಉದ್ಯಮಿ, ಚಲನಚಿತ್ರ ನಿರ್ಮಾಪಕರಾಗಿ ಗುರುತಿಸಿಕೊಂಡ ಮಂಗಳೂರು ಮೂಲದ ಹರೀಶ್ ಶೇರಿಗಾರ್ ಅವರು ಕೊಡುಗೈ ದಾನಿಯಾಗಿದ್ದಾರೆ. ಪತ್ನಿ ಶರ್ಮಿಳಾ ಹರೀಶ್ ಶೇರಿಗಾರ್, ಪುತ್ರಿ ಅಕ್ಷತಾ, ಪುತ್ರ ಅಂಶುಲ್ ಜೊತೆಗೆ ದುಬೈನಲ್ಲಿ ವಾಸವಿದ್ದಾರೆ. ಕಳೆದ 30 ವರ್ಷಗಳಿಂದ ದುಬೈನಲ್ಲಿ ನೆಲೆಸಿ 22 ವರ್ಷಗಳಿಂದ ‘ಆಕ್ಮೆ’ ಸಂಸ್ಥೆ ನಡೆಸುತ್ತಿದ್ದು ನೂರಾರು ಮಂದಿಗೆ ಉದ್ಯೋಗದಾತರಾಗಿದ್ದಾರೆ. ದುಬೈನಲ್ಲಿ‌ 2 ಶಾಖೆ, ಮಸ್ಕತ್ ನಲ್ಲಿ, ರಾಸ್ ಅಲ್ ಕೈಮಾದಲ್ಲಿ ‘ಆಕ್ಮೆ’ ಸಂಸ್ಥೆಯ ಒಂದೊಂದು ಶಾಖೆಯಿದೆ. ಹರಿಶ್ ಶೇರಿಗಾರ್ ಒಬ್ಬ ಸಕ್ರಿಯ ಸಮಾಜ ಸೇವಾ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡವರು. ಹಲವಾರು ಮಾನವೀಯ ಯೋಜನೆಗಳು ಮತ್ತು ದತ್ತಿಗಳಿಗೆ ಧನಸಹಾಯ ನೀಡುತ್ತಾ ಬಂದಿದ್ದು ದಾನ-ಧರ್ಮದ ವಿಚಾರ ಪ್ರಚಾರವಾಗದಿರಲು ಬಯಸುತ್ತಾರೆ. ವಿಶೇಷ ಮಕ್ಕಳು, ರೋಗಿಗಳು ಮತ್ತು ವೃದ್ಧಾಪ್ಯದ ಜನರು, ಬಡವರಿಗಾಗಿ ದತ್ತಿಗಳು ಸಹಕಾರಿಯಾಗಿದೆ ಮಾತ್ರವಲ್ಲದೇ ಬಡವರ ಮನೆಗಳ ನಿರ್ಮಾಣಕ್ಕೆ ಸಹಾಯ, ದೇವಾಡಿಗ ಸಮುದಾಯದ ಶಿಕ್ಷಣ ನಿಧಿಗೆ ಸಹಾಯವಾಗಿದೆ. ಹರೀಶ್ ಶೇರಿಗಾರ್ ಅವರ ದಾನವು ಯಾವುದೇ ಒಂದು ಪ್ರದೇಶ ಅಥವಾ ಸಮುದಾಯಕ್ಕೆ ಸೀಮಿತವಾಗಿಲ್ಲ ಎನ್ನುವುದು ಇಲ್ಲಿ ಅಭಿನಂದನಾರ್ಹ. ಪ್ರತಿವರ್ಷ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಸ್ಕಾಲರ್ ಶಿಪ್ ನೀಡುತ್ತಿದ್ದು ಉತ್ತಮ‌ಅಂಕ ಪಡೆದ ಓರ್ವ ವಿದ್ಯಾರ್ಥಿಗೆ ತನ್ನ ವೈಯಕ್ತಿಕ ನೆಲೆಯಲ್ಲಿ ಲ್ಯಾಪ್ ಟಾಪ್ ನೀಡುತ್ತಾರೆ.

ಸಿನಿಮಾ ಕ್ಷೇತ್ರದಲ್ಲೂ ಗುರುತಿಸಿಕೊಂಡಿರುವ ಹರೀಶ್ ಶೇರಿಗಾರ್ ಅವರು‌ ‘ಮಾರ್ಚ್ 22’ ಕನ್ನಡ ಚಲನಚಿತ್ರ ಹಾಗೂ ‘ಇಂಗ್ಲೀಷ್’ ತುಳು ಚಿತ್ರ ನಿರ್ಮಿಸಿದ್ದಾರೆ. ಮಾರ್ಚ್ 22 ಚಿತ್ರಕ್ಕೆ ರಾಷ್ಟ್ರ ಹಾಗೂ ರಾಜ್ಯ ಪ್ರಶಸ್ತಿ ಲಭಿಸಿದೆ. ಮಾತ್ರವಲ್ಲದೇ ಕನ್ನಡದ ‘ಯಾನ’ ಹಾಗೂ ‘ಹೊಟ್ಟೆಗಾಗಿ ಗೇಣು ಬಟ್ಟೆಗಾಗಿ’ ಚಿತ್ರ ನಿರ್ಮಿಸಿದ್ದಾರೆ.

ಗೋಲ್ಡನ್ ವೀಸಾ….
2019ರಿಂದ ದುಬೈನಲ್ಲಿ ಗೋಲ್ಡನ್ ವೀಸಾ ಪದ್ಧತಿ ಜಾರಿಗೆ ಬಂದಿದ್ದು, ಹೂಡಿಕೆದಾರರು (10 ಮಿಲಿಯನ್ ಅಧಿಕ ಎಇಡಿ), ಉದ್ಯಮಿಗಳು, ವೃತ್ತಿಪರರು ಮತ್ತು ವಿಜ್ಞಾನ, ಜ್ಞಾನ ಮತ್ತು ಕ್ರೀಡಾ ಕ್ಷೇತ್ರದಂತಹ ವಿಶೇಷ ಪ್ರತಿಭೆಗಳಿಗೆ ಅರ್ಜಿ ಸಲ್ಲಿಸಲು ಅವಕಾಶ ಮಾಡಿಕೊಟ್ಟಿದೆ. ಈ ಗೋಲ್ಡನ್ ವೀಸಾಗಳನ್ನು 5 ಅಥವಾ 10 ವರ್ಷಗಳ ಅವಧಿಗೆ ನೀಡಲಾಗುತ್ತದೆ ಮತ್ತು ಅವುಗಳನ್ನು ಸ್ವಯಂಚಾಲಿತವಾಗಿ ನವೀಕರಿಸಲಾಗುತ್ತದೆ.

ಈ ಹಿಂದೆ ದುಬೈನಿಂದ ಚಿತ್ರನಟರು, ಉದ್ಯಮಿಗಳು ಗೋಲ್ಡನ್ ವೀಸಾ ಪಡೆದಿದ್ದಾರೆ.

Comments are closed.