ಉತ್ತರಕನ್ನಡ: ಯಲ್ಲಾಪುರ ತಾಲ್ಲೂಕಿನ ಶಿರಸಿ ರಸ್ತೆಯ ಗಡಿ ಭಾಗ ತುಡುಗುಣಿಯಲ್ಲಿ ಮಹಿಳೆಯೊಬ್ಬರನ್ನು ಗುರುವಾರ ರಾತ್ರಿ ಚೂರಿಯಿಂದ ಇರಿದು ಕೊಲೆ ಮಾಡಲಾಗಿದೆ.
ಅಂಗನವಾಡಿ ಸಹಾಯಕಿಯಾಗಿ ಕೆಲಸ ಮಾಡುತ್ತಿದ್ದ ಸರೋಜಿನಿ ನಾಯರ್ (45) ಕೊಲೆಯಾದವರು.
(ಸಾಂದರ್ಭಿಕ ಚಿತ್ರ)
ಸರೋಜಿನಿ ಮನೆಯಲ್ಲಿ ಅವರು ತಂಗಿ, ತಾಯಿ ಹಾಗೂ ತಂಗಿಯ ಮಗನ ಜೊತೆ ಇರುತ್ತಿದ್ದರು. ಅವರ ತಂಗಿಯನ್ನು ಗುರಿಯಾಗಿಸಿಕೊಂಡು ಕೊಲೆಗಾರ ಬಂದಿದ್ದ ಎಂದು ಪ್ರಾಥಮಿಕ ತನಿಖೆ ವೇಳೆ ತಿಳಿದುಬಂದಿದೆ. ಕೊಲೆ ನಡೆಯುವ ವೇಳೆ ಅವರ ತಂಗಿ ಎಲ್ಲಿಯೋ ಹೋಗಿದ್ದರು ಎನ್ನಲಾಗಿದೆ.
(ಕೊಲೆಯಾದ ಮಹಿಳೆ)
ಗುರುವಾರ ರಾತ್ರಿ ಇವರ ಮನೆಗೆ ಬಂದ ಆರೋಪಿ ತಂಗಿ ಇಲ್ಲದ್ದನ್ನು ನೋಡಿದ್ದು, ಸರೋಜಿನಿ ಜೊತೆ ಮಾತಿನ ಚಕಮಕಿ ನಡೆಸಿದ್ದಾನೆ. ಸಿಟ್ಟಿಗೆದ್ದ ಆರೋಪಿ ಈಕೆಗೆ ಚಾಕುವಿನಿಂದ ಇರಿದು ಕೊಲೆ ಮಾಡಿದ ಬಳಿಕ ನಂತರ ತಂಗಿಯ ಮಗನನ್ನು ಚಾಕು ಹಿಡಿದು ಹೆದರಿಸಿ ತನ್ನ ಜೊತೆ ಕರೆದೊಯ್ದಿದ್ದಾನೆ. ಆರೋಪಿಯನ್ನು ಚವತ್ತಿ ಬಳಿಯಲ್ಲಿ ಪೊಲೀಸರು ಬಂಧಿಸಿದ್ದು, ಸರೋಜಿನಿಯ ತಂಗಿಯ ಮಗನನ್ನು ರಕ್ಷಿಸಿರುವ ಮಾಹಿತಿಯಿದೆ.
ಯಲ್ಲಾಪುರ ಪೊಲೀಸರು ಘಟನಾ ಸ್ಥಳಕ್ಕೆ ಭೇಟಿ ನೀಡಿದ್ದು ಕಾರವಾರದಿಂದ ಶ್ವಾನದಳ ಮತ್ತು ಬೆರಳಚ್ಚು ತಜ್ಞರು ಆಗಮಿಸಿ ಪರಿಶೀಲಿಸಿದ್ದಾರೆ.
Comments are closed.