ಕರ್ನಾಟಕ

ಜಿಲ್ಲೆಗೊಂದು ಮಹಿಳಾ ಠಾಣೆ ನಿರ್ಮಾಣದ ಗುರಿ: ಮೈಸೂರಿನಲ್ಲಿ ಗೃಹ ಸಚಿವ ಆರಗ ಜ್ಞಾನೇಂದ್ರ

Pinterest LinkedIn Tumblr

ಮೈಸೂರು: ಮೈಸೂರು ಜಿಲ್ಲೆಯ ಜ್ಯೋತಿನಗರದ ಡಿಎ‌ಆರ್ ಪೊಲೀಸ್ ಕವಾಯತು ಮೈದಾನದಲ್ಲಿ ನಡೆಯುತ್ತಿರುವ ಮಹಿಳಾ ಪೊಲೀಸ್ ಕಾನ್ಸ್​ಟೇಬಲ್​ ಪ್ರಶಿಕ್ಷಣರ್ಥಿಗಳ ನಿರ್ಗಮನ ಪಥಸಂಚಲನ ಕಾರ್ಯಕ್ರಮದಲ್ಲಿ ಗೃಹ ಸಚಿವ ಆರಗ ಜ್ಞಾನೇಂದ್ರ ಭಾಗಿಯಾಗಿದ್ದಾರೆ.

ಮಹಿಳಾ ಪೊಲೀಸ್ ಕಾನ್ಸ್​ಟೇಬಲ್ ಆಗಲು 242 ಅಭ್ಯರ್ಥಿಗಳಲ್ಲಿ 21 ಅಭ್ಯರ್ಥಿಗಳು ಪಿಯುಸಿ ಮತ್ತು ಉಳಿದ ಎಲ್ಲರೂ ಪದವಿ ಸ್ನಾತಕೋತ್ತರ ಪದವಿ ಹಾಗೂ ಡಿಪ್ಲೊಮಾ ಪೂರೈಸಿದವರು.

ಮಹಿಳಾ ಪೊಲೀಸ್ ವ್ಯವಸ್ಥೆ ಕುರಿತು ಮಾತನಾಡಿದ ಸಚಿವ ಆರಗ, ಮಹಿಳೆಯರು ನಾನು ಅಬಲೆ ಅಲ್ಲ ಸಬಲೆ. ನನ್ನನ್ನು ಮಾತ್ರವಲ್ಲ ಸಮಾಜವನ್ನು ರಕ್ಷಣೆ ಮಾಡುತ್ತೇನೆ ಎನ್ನುವುದನ್ನು ಮಹಿಳೆಯರು ತೋರಿಸಿದ್ದಾರೆ ಎಂದು ಹೇಳಿದರು.

ವಿದೇಶದಿಂದ ಬರುವ ಶತ್ರುಗಳನ್ನು ಎದುರಿಸಲು ಸೈನಿಕರಿದ್ದಾರೆ. ನಮಗೆ ಸವಾಲಾಗಿರುವುದು 125 ಕೋಟಿ ಈ ದೇಶದ ಮಂದಿಯ ರಕ್ಷಣೆ. ಇದನ್ನು ಸೈನಿಕರು ಮಾಡಲು ಸಾಧ್ಯವಿಲ್ಲ. ಇದನ್ನು ಮಾಡುತ್ತಿರುವುದು ಪೊಲೀಸರು. ಶಾಂತಿ ಸುವ್ಯವಸ್ಥೆ ಕಾಪಾಡುವ ಹೊಣೆಗಾರಿಕೆ ಉತ್ತಮವಾಗಿ ನಿರ್ವಹಿಸುತ್ತಿದೆ. ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ತಿಳಿಸಿದ್ದಾರೆ.

ಪೊಲೀಸ್ ಕಾನ್ಸ್​ಟೇಬಲ್ ವಿದ್ಯಾರ್ಹತೆ ಪಿಯುಸಿ. ಆದರೆ ನಿಮ್ಮ ವಿದ್ಯಾರ್ಹತೆ ಪದವಿ ಸ್ನಾತಕೋತ್ತರ ಪದವಿ ಇದೆ. 242 ಜನರಲ್ಲಿ ಹೆಚ್ಚು ಅಭ್ಯರ್ಥಿಗಳು ಪದವಿ ಪಡೆದಿದ್ದೀರಿ. ಇದರಿಂದ ಪೊಲೀಸ್ ಇಲಾಖೆಯ ಶಿಸ್ತು ಸಂಯಮ ಇರಬೇಕು. ಪೊಲೀಸರ ಬಗ್ಗೆ ಜನರಿಗೆ ಭಯ ಇರಬಾರದು. ಅಪರಾಧಿಗಳಿಗೆ ದರೋಡೆಕೋರರು, ಕ್ರಿಮಿನಲ್‌ಗಳಿಗೆ ಟೆರರ್ ಆಗಿರಬೇಕು. ಪೊಲೀಸ್ ಠಾಣೆಗೆ ಬರುವವರನ್ನು ಗೌರವಿಸಬೇಕು ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಹೇಳಿದ್ದಾರೆ.

ಇತ್ತೀಚಿಗೆ ಮಹಿಳೆಯರು ಹಾಗೂ ಮಕ್ಕಳ ಮೇಲಿನ ದೌರ್ಜನ್ಯ ಪ್ರಕರಣ ಹೆಚ್ಚುತ್ತಿದೆ. ಮಹಿಳೆ ಎಲ್ಲವನ್ನು ಪುರುಷ ಅಧಿಕಾರಿ ಬಳಿ ಹೇಳಲು ಸಾಧ್ಯವಿಲ್ಲ. ಎಲ್ಲಾ ಪೊಲೀಸ್ ಠಾಣೆಯಲ್ಲಿ ಕನಿಷ್ಠ ಮೂವರು ಮಹಿಳಾ ಸಿಬ್ಬಂದಿ‌ ಇರಬೇಕು. ಜಿಲ್ಲೆಗೊಂದು ಮಹಿಳಾ ಪೊಲೀಸ್ ಠಾಣೆಯನ್ನು ತೆರೆಯುವ ಗುರಿ ಇದೆ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಹೇಳಿದ್ದಾರೆ.

ಈ ಸಂದರ್ಭದಲ್ಲಿ ಎಡಿಜಿಪಿ ಅಲೋಕ್ ಕುಮಾರ್, ನಗರ ಪೋಲಿಸ್ ಆಯುಕ್ತ ಡಾ. ಚಂದ್ರಗುಪ್ತ, ಎಸ್​ಪಿ ಚೇತನ್ ಸೇರಿದಂತೆ ಇತರರು ಉಪಸ್ಥಿತರಿದ್ದರು

Comments are closed.