ಕರಾವಳಿ

ರಾಷ್ಟೀಯ ಹೆದ್ದಾರಿ 66, 169ಎ ಸಮಸ್ಯೆ ಪರಿಹರಿಹಾರಕ್ಕಾಗಿ ಅಧಿಕಾರಿಗಳಿಂದ ಸಭೆ

Pinterest LinkedIn Tumblr

ಉಡುಪಿ: ರಾಷ್ಟೀಯ ಹೆದ್ದಾರಿ 66 ಮತ್ತು 169ಎ ಯ ಸಮಸ್ಯೆಗಳು ಪರಿಹರಿಸುವ ನಿಟ್ಟಿನಲ್ಲಿ ಸಭೆಯನ್ನು ನಡೆಸಲಾಯಿತು. ಈ ಸಭೆಯಲ್ಲಿ ರಾಷ್ಟೀಯ ಹೆದ್ದಾರಿ 66ರ ಕುಂದಾಪುರದ ಸಂಗಮ್ ಹತ್ತಿರ ಮಳೆಯ ನೀರು ನಿಂತು ವಾಹನ ಸಂಚಾರಕ್ಕೆ ತೊಂದರೆಯಾಗುತ್ತಿರುವುದನ್ನು ಸರಿಪಡಿಸುವಂತೆ ತಿಳಿಸಲಾಯಿತು.

ಸಭೆಯಲ್ಲಿ ಡಿಸಿ ಕೂರ್ಮಾರಾವ್ ಎಂ, ಎಸ್ಪಿ ವಿಷ್ಣುವರ್ಧನ್ ಹಾಗೂ ಇತರ ಅಧಿಕಾರಿಗಳಿದ್ದರು.

ಕುಂದಾಪುರದ ಫ್ಲೈ ಓವರ್ ಹತ್ತಿರ ಬಾಕಿ ಉಳಿದಿರುವ ರಸ್ತೆಯ ಡಾಂಬರೀಕರಣ ಮತ್ತು ಪ್ಲೈ ಓವರ್‌ ತೆರೆಯುವ ಬಗ್ಗೆ ಚರ್ಚಿಸಲಾಯಿತು. ಪರ್ಕಳದಿಂದ ಮಣಿಪಾಲದವರೆಗಿನ ರಸ್ತೆ ಅಗಲೀಕರಣದ ಸಂಬಂಧ ಉಚ್ಛನ್ಯಾಯಾಲಯದಲ್ಲಿ ಹೂಡಿರುವ ದಾವೆಯನ್ನು ಶೀಘ್ರದಲ್ಲಿಯೇ ಇತ್ಯರ್ಥ ಪಡಿಸಲು ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಚರ್ಚಿಸಲಾಯಿತು. ಇಂದ್ರಾಳಿಯ ರೈಲ್ವೆ ಮೇಲ್ಸೇತುವೆ ಕಾಮಗಾರಿ ಕೈಗೊಂಡಿರುವ ಹಿನ್ನೆಲೆಯಲ್ಲಿ ತಾತ್ಕಾಲಿಕ ರಸ್ತೆ ದುರಸ್ಥಿ ಕೈಗೊಳ್ಳಬೇಕೆಂದು ಹಾಗೂ ಕರಾವಳಿ ಜಂಕ್ಷನ್ನಿಂದ ಮಲ್ಪೆ ಬಂದರಿನವರೆಗೆ ರಸ್ತೆ ಕಾಮಗಾರಿಯನ್ನು ಕೈಗೊಳ್ಳಲು ಅಗತ್ಯವಿರುವ ಪೂರ್ವ ತಯಾರಿಯನ್ನು ಮಾಡಿಕೊಳ್ಳುವಂತೆ ತಿಳಿಸಲಾಯಿತು. ಹೆಬ್ರಿ, ಸೋಮೆಶ್ವರ ಒಳಗೊಂಡಂತೆ ಆಗುಂಬೆವರೆಗಿನ ರಸ್ತೆಯ ಡಾಂಬರೀಕರಣ ಕಾಮಗಾರಿಯ ಟೆಂಡರ್ ಪ್ರಕ್ರಿಯೆಯನ್ನು ಶೀಘ್ರದಲ್ಲೆಯೇ ಪೂರ್ಣಗೋಳಿಸಿ ಕಾಮಗಾರಿಯನ್ನು ಪ್ರಾರಂಭಿಸುವಂತೆ ಸಹ ಸೂಚಿಸಲಾಯಿತು.

Comments are closed.