ಕರಾವಳಿ

ಸಕಲ ಸರ್ಕಾರಿ ಗೌರವದೊಂದಿಗೆ ‘ದೊಡ್ಮನೆ ಹುಡುಗ’ ಪುನೀತ್ ಅಂತ್ಯಕ್ರಿಯೆ | ಈ ಬಗ್ಗೆ ಸಚಿವ ಆರ್. ಅಶೋಕ್ ಹೇಳಿದ್ದೇನು?

Pinterest LinkedIn Tumblr

ಬೆಂಗಳೂರು: ಹೃದಯಾಘಾತದಿಂದ ನಿಧನರಾದ ‘ಪವರ್ ಸ್ಟಾರ್’ ಪುನೀತ್ ರಾಜ್‌ಕುಮಾರ್ ಅಂತ್ಯಕ್ರಿಯೆ ನಾಳೆ (ಅ.30) ನಡೆಯಲಿದೆ. ಅಂತ್ಯಕ್ರಿಯೆಯ ಎಲ್ಲಾ ನಿರ್ಧಾರಗಳನ್ನು ರಾಜ್‌ಕುಮಾರ್ ಕುಟುಂಬಸ್ಥರು ತೆಗೆದುಕೊಳ್ಳುತ್ತಾರೆ ಎಂದು ಕಂದಾಯ ಸಚಿವ ಆರ್ ಅಶೋಕ್ ಮಾಧ್ಯಮಕ್ಕೆ ಹೇಳಿಕೆ ನೀಡಿದ್ದಾರೆ.

ಬೆಂಗಳೂರಿನ ಸದಾಶಿವನಗರದಲ್ಲಿರುವ ಪುನೀತ್ ರಾಜ್‌ಕುಮಾರ್ ಮನೆಗೆ ಅವರ ಪಾರ್ಥಿವ ಶರೀರ ತೆಗೆದುಕೊಂಡು ಹೋಗಲಾಗುವುದು. ಈಗಾಗಲೇ ಪುನೀತ್ ಮನೆಯತ್ತ ಅಪ್ಪು ಪಾರ್ಥಿವ ಶರೀರವಿರುವ ಆಂಬುಲೆನ್ಸ್ ಹೊರಟಿದೆ. ಪುನೀತ್ ನಿವಾಸದಲ್ಲಿಯೂ ಕೂಡ ಕೆಲ ಶಾಸ್ತ್ರಗಳು ನಡೆಯಲಿದೆ. ಬಳಿಕ ಕಂಠೀರವ ಸ್ಟುಡಿಯೋದಲ್ಲಿ ಪಾರ್ಥಿವ ಶರೀರದ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ.

ಅಂತ್ಯಕ್ರಿಯೆ ಬಗ್ಗೆ ಆರ್ ಅಶೋಕ್ ಹೇಳಿಕೆ…
ನಟ ಪುನೀತ್ ಅವರಿಗೆ ಸಾಯುವ ವಯಸ್ಸಾಗಿರಲಿಲ್ಲ. ಜಿಮ್ ಮುಗಿಸಿ ಬಂದನಂತರದಲ್ಲಿ ಅವರಿಗೆ ಎದೆನೋವು ಕಾಣಿಸಿಕೊಂಡಿದೆ. ಬಳಿಕ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ.ಈ ವಿಷಯ ಕೇಳಿ ಎಲ್ಲರೂ ಬೇಸರದಲ್ಲಿದ್ದಾರೆ. ಪುನೀತ್ ಅಂತ್ಯಕ್ರಿಯೆ ಎಲ್ಲಿ ಎಂಬ ಬಗ್ಗೆ ಇನ್ನೂ ನಿರ್ಧಾರವಾಗಿಲ್ಲ. ಅದು ಕುಟುಂಬದ ನಿರ್ಧಾರ. ಸಕಲ ಸರ್ಕಾರಿ ಗೌರವದೊಂದಿಗೆ ಪುನೀತ್ ಅಂತ್ಯಕ್ರಿಯೆ ನಡೆಯಲಿದೆ ಎಂದು ಆರ್. ಅಶೋಕ್ ಹೇಳಿದ್ದಾರೆ.

ದೊಡ್ಮನೆ ಕುಟುಂಬದಲ್ಲಿ ಹಾಗೂ ಪ್ರೀತಿಯಿಂದ ಅಭಿಮಾನಿಗಳು ಅವರನ್ನು ಅಪ್ಪು ಎಂದು ಕರೆಯುತ್ತಿದ್ದರು. ಪುನೀತ್ ರಾಜ್‌ಕುಮಾರ್‌ ಪತ್ನಿ ಅಶ್ವಿನಿ, ಮಕ್ಕಳಾದ ವಂದಿತಾ, ಧೃತಿ ಹಾಗೂ ಇಡೀ ದೊಡ್ಮನೆ ಕುಟುಂಬ, ಅಭಿಮಾನಿ ಬಳಗವನ್ನು ಅವರು ಅಗಲಿದ್ದಾರೆ. ನಟನೆ ಜೊತೆಗೆ ನಿರ್ಮಾಣಕ್ಕೂ ಇಳಿದಿದ್ದ ಪುನೀತ್ ಅವರ ಹೋಮ್ ಬ್ಯಾನರ್‌ನಲ್ಲಿ ಈಗಾಗಲೇ ಕೆಲ ಸಿನಿಮಾಗಳನ್ನು ನಿರ್ಮಾಣ ಮಾಡಿದ್ದು, ಇನ್ನೂ ಕೆಲ ಸಿನಿಮಾಗಳು ನಿರ್ಮಾಣ ಹಂತದಲ್ಲಿದ್ದವು.

Comments are closed.