ಕರ್ನಾಟಕ

ವಿದೇಶಕ್ಕೆ ಎಸ್ಕೇಪ್ ಆದ ಓಮಿಕ್ರಾನ್ ಸೋಂಕಿತ ಆಫ್ರಿಕನ್ ಪ್ರಜೆ; ಬೆಂಗಳೂರಿನ ಶಾಂಗ್ರಿ-ಲಾ ಹೋಟೆಲ್ ಮೇಲೆ ಎಫ್ಐಆರ್

Pinterest LinkedIn Tumblr

ಬೆಂಗಳೂರು: ರಾತ್ರೋರಾತ್ರಿ ಓಮಿಕ್ರಾನ್​​ ಸೋಂಕಿತ​ ಹೋಟೆಲ್​​​ನಿಂದ ಎಸ್ಕೇಪ್​ ಆಗಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ, ಸೋಂಕಿತ ಕ್ವಾರಂಟೈನ್​ ಆಗಿದ್ದ‌ ಬೆಂಗಳೂರಿನ ಶಾಂಗ್ರಿಲಾ ಹೋಟೆಲ್​​ ಮೇಲೆ ಎಫ್.ಐ.ಆರ್ ದಾಖಲಾಗಿದೆ.

ಹೋಟೆಲ್​​​ನಿಂದ ರಾತ್ರೋರಾತ್ರಿ ಆಫ್ರಿಕಾ ಪ್ರಜೆ ಎಸ್ಕೇಪ್​ ಆಗಿದ್ದು ಈ ಪ್ರಕರಣದಲ್ಲಿ ಸೋಂಕಿತನ ಮೇಲೆ ಎಫ್​ಐಆರ್​​ ದಾಖಲಾಗಿದ್ದು, ಶಾಂಗ್ರಿಲಾ ಹೋಟೆಲ್​​ ಆಡಳಿತ ಮಂಡಳಿ ವಿರುದ್ದವೂ ಹೈಗ್ರೌಂಡ್ಸ್ ಪೊಲೀಸ್ ಠಾಣೆಯಲ್ಲಿ ಐಪಿಸಿ ಸೆಕ್ಷನ್ 269, 271,114 ಹಾಗೂ ಕರ್ನಾಟಕ ಎಪಿಡಮಿಕ್ ಡಿಸೀಸ್ ಆಕ್ಟ್ ಅಡಿ FIR ದಾಖಲಾಗಿದೆ.

ಬಿಬಿಎಂಪಿ ಆರೋಗ್ಯ ಅಧಿಕಾರಿ ಡಾ. ನವೀನ್ ಎಂಬುವವರು ದೂರು ನೀಡಿದ್ದು, ನವೆಂಬರ್​​ 20ರಂದು ಬೆಂಗಳೂರಿಗೆ ಆಫ್ರಿಕಾ ಪ್ರಜೆ ಬಂದಿದ್ದರು. ಏರ್ ಪೋರ್ಟ್ ನಲ್ಲಿ ಪರೀಕ್ಷೆ ನಡೆಸಿದಾಗ ಆತನಿಗೆ ಕೊರೋನಾ ಇರೋದು ಪತ್ತೆಯಾಗಿತ್ತು, ಜಿನೋಮ್​ ಟೆಸ್ಟ್​ ರಿಪೋರ್ಟ್​ ಬರೋ ಮುನ್ನವೇ ನವೆಂಬರ್​​​​​​ 27ರಂದು ಆಫ್ರಿಕಾ ಪ್ರಜೆ ಕೊರೋನಾ ನೆಗೆಟಿವ್​ ವರದಿ ತೋರಿಸಿ ರಾತ್ರೋರಾತ್ರಿ ಎಸ್ಕೇಪ್​ ಆಗಿದ್ದಾನೆ. ಆಫ್ರಿಕಾ ಪ್ರಜೆಯನ್ನು ಶಾಂಗ್ರಿಲಾ ಹೋಟೆಲ್​​ನಲ್ಲಿ 14 ದಿನಗಳ ಕ್ವಾರಂಟೈನ್ ಮಾಡಲಾಗಿತ್ತು, ಸ್ಥಳೀಯ ಆರೋಗ್ಯ ಅಧಿಕಾರಿಗಳಿಗೆ ಶಾಂಗ್ರಿಲಾ ಹೋಟೆಲ್​ ಮಾಹಿತಿ ನೀಡದ ಹಿನ್ನೆಲೆ ಹೋಟೆಲ್​ ಮೇಲೆ ಕೇಸು ದಾಖಲಿಸಲಾಗಿದೆ.

Comments are closed.