ಕರಾವಳಿ

ಜನರು ತೋರಿಸಿದ ಪ್ರೀತಿ,ವಿಶ್ವಾಸಕ್ಕೆ ನಾನು ಸದಾ ಖುಣಿ : ಪದ್ಮಶ್ರೀ ಹರೇಕಳ ಹಾಜಬ್ಬ

Pinterest LinkedIn Tumblr

ಮಂಗಳೂರು / ಕಡಬ ( ಪಿಜಕ್ಕಳ ) : ಜನರು ತೋರಿಸಿದ ಪ್ರೀತಿ,ವಿಶ್ವಾಸಕ್ಕೆ ನಾನು ಸದಾ ಖುಣಿಯಾ ಗಿದ್ದೇನೆ ಎಂದು ಪದ್ಮಶ್ರೀ ವಿಜೇತ ಹರೇಕಳ ಹಾಜಬ್ಬ ತಿಳಿಸಿದ್ದಾರೆ.

ದಕ್ಷಿಣ ಕನ್ನಡ ಜಿಲ್ಲಾ ಕಾರ್ಯನಿರತ ಪತ್ರಕರ್ತ ಸಂಘ ,ಕಡಬ ತಾಲೂಕು ಪತ್ರಕರ್ತ ಸಂಘ ,ಎಸ್.ಡಿ. ಎಂ.ಸಿ.ದ.ಕ.ಜಿ.ಪಂ. ಕಿರಿಯ ಪ್ರಾಥಮಿಕ ಶಾಲೆ ಪಿಜಕ್ಕಳಮತ್ತು ವಿವಿಧ ಸಂಘ ಸಂಸ್ಥೆಗಳ ಸಹಭಾಗಿತ್ವದ ಲ್ಲಿಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಶಿಕ್ಷಣ ಸಂತ ಹರೇಕಳ ಹಾಜಬ್ಬ ಅವರಿಗೆ ಸನ್ಮಾನ ಮತ್ತು ಸಂವಾದ ಕಾರ್ಯಕ್ರಮ ,ಪಿಜಕಳ ಶಾಲೆಯ ಮಕ್ಕಳಿಗೆ ಕುದುರೆಮುಖ ಕಬ್ಬಿಣ ಹಾಗೂ ಅದಿರು ಕಂಪೆನಿಯ ಸಿಎಸ್‌ಆರ್ ನಿಧಿಯಿಂದ ಕೊಡಮಾಡಿದ ಬರೆಯುವ ಪುಸ್ತಕ ವಿತರ ಣೆ.ಭಾರತ್ ಸೌಟ್ಸ್ ಮತ್ತು ಗೈಡ್ಸ್‌ನ ಕಬ್-ಬುಲ್ ಬುಲ್ ವಿಭಾಗದ ಲ್ಲಿರಾಷ್ಟ್ರೀಯ ಮಟ್ಟದ ಗೋಲ್ಡನ್‌ ಆ್ಯರೋ ಪ್ರಶಸ್ತಿ ಪಡೆದ ವಿದ್ಯಾರ್ಥಿಗಳಿಗೆ ಗೌರವಾ ರ್ಪಣೆ ಕಾರ್ಯ ಕ್ರಮವನ್ನು ದ್ದೇಶಿ ಮಾತ ನಾ ಡುತ್ತಿದ್ದರು.

ನಾನು ಹಣ ,ಸಂಪತ್ತು ಇಲ್ಲದ ಸಾಮಾನ್ಯ ಮನುಷ್ಯನನ್ನು ರಾಷ್ಟ,ಪತಿ ,ಪ್ರಧಾನ ಮಂತ್ರಿ ಗುರು ತಿಸಿ ಗೌರವಿಸಲು ಕಾರಣರಾದ ಎಲ್ಲರಿಗೂ ಕ್ರತಜ್ಞ ತೆ ಸಲ್ಲಿಸುವುದಾಗಿ ಹಾಜಬ್ಬ ತಿಳಿಸಿದ್ದಾರೆ.

ನಾನು ಒಂದು ರೂಪಾಯಿ ಗೂ ಬೆಲೆ ಇಲ್ಲದ ಮನುಷ್ಯ ನಾಗಿರುವ ನನಗೆ ಬಾಲ್ಯ ದಲ್ಲಿ ಶಾಲೆ ಗೆ ಹೋಗುವ ಅವಕಾಶ ‌ಸಿಗಲಿಲ್ಲ.ಕಿತ್ತಳೆ ಹಣ್ಣು ಮಾರಾಟ ಮಾಡುತ್ತಿದ್ದಾಗ ನನಗೆ ಉತ್ತರಿಸಲು ಸಾಧ್ಯ ವಾಗುತ್ತಿರಲಿಲ್ಲ.ಈ ರೀತಿಯ ಪರಿಸ್ಥಿತಿ ನಮ್ಮ ಮಕ್ಕಳಿಗೆ ಬರಬಾರದು ನಮ್ಮ ಊರಿಗೂ ಒಂದು ಶಾಲೆ ಬೇಕು ಎಂದು ಮ‍ನಸ್ಸಿ ನಲ್ಲಿ ಹುಟ್ಟಿದ ಆಸೆ ಶಾಲೆ ಆರಂಭಕ್ಕಾಗಿ ನಾನು ಅಲೆದಾಟ ಮಾಡಿ ದೆ ಎಂದು ಹಾಜಬ್ಬ ವಿದ್ಯಾರ್ಥಿಗಳ ಜೊತೆ ತಮ್ಮ ಅನುಭವ ಹಂಚಿಕೊಂಡರು.

ಸಮಾರಂಭದ ಅಧ್ಯಕ್ಷತೆ ಯನ್ನು ದಕ್ಷಿಣ ಕನ್ನಡ ಜಿಲ್ಲಾ ಕಾರ್ಯನಿರತ ಪತ್ರಕರ್ತ ಸಂಘ ದ ಅಧ್ಯಕ್ಷ ಶ್ರೀ ನಿವಾಸ ನಾಯಕ್ ಇಂದಾಜೆ ವಹಿಸಿದ್ದರು.ಮುಖ್ಯ ಅತಿಥಿಗಳಾಗಿ ಕಡಬ ತಾಲೂಕು ಉಪತಹಶೀಲ್ದಾರ್ ಕೆ.ಟಿ.ಮನೋ ಹರ,ದ.ಕ ಜಿಲ್ಲಾ ವಾರ್ತಾ ಮತ್ತು ಸಾರ್ವಜ ನಿಕ ಸಂಪರ್ಕ ಇಲಾಖೆ ಯ ಹಿರಿಯ ಸಹಾ ಯಕ ನಿರ್ದೇಶಕ ರವಿರಾಜ್,ಶ್ರೀಕ್ಷೇತ್ರ ಧ.ಗ್ರಾ.ಯೋಜನೆಯ ಕಡಬ ತಾಲೂಕಿನ ಯೋಜನಾಧಿಕಾರಿ ಮೇದಪ್ಪ ಗೌಡ ನಾವೂರು,ನಿವೃತ್ತ ಶಿಕ್ಷಕ ಸಾಂತಪ್ಪ ಗೌಡ, ಕಡಬ ತಾಲೂಕು ಪತ್ರಕರ್ತರ ಸಂಘದ ಅಧ್ಯಕ್ಷ ನಾಗರಾಜ್ ಎನ್.ಕೆ.,ದ.ಕ.ಜಿಲ್ಲಾ ಕಾರ್ಯ ನಿರತ ಪತ್ರ ಕರ್ತರ ಸಂಘದ ಕಾರ್ಯದರ್ಶಿ ಇಬ್ರಾಹಿಂ ಆಡ್ಕಸ್ಥಳ, ಕೋಶಾಧಿಕಾರಿ ಪುಷ್ಪ ರಾಜ್ ಬಿ.ಎನ್, ಗ್ರಾಮೀಣ ಕಾರ್ಯದರ್ಶಿ ಸಿದ್ಧೀಕ್ ನೀರಾಜೆ,ಕಾರ್ಯ ಕಾರಿ ಸಮಿತಿ ಸದಸ್ಯ ಭಾಸ್ಕರ ರೈ ಕಟ್ಟ, ಪಿಜಕ್ಕಳ ಶಾಲೆಯ ಎಸ್ ಡಿಎಂಸಿ ಅಧ್ಯಕ್ಷ ಸುಂದರ ಪಾಲೋಳಿ ಉಪಸ್ಥಿತರಿದ್ದರು.

ಬಾಲಕೃಷ್ಣ ಕೊಯಿಲ ಕಾರ್ಯಕ್ರಮ ನಿರೂಪಿಸಿದರು.ವಿಜಯ ಕುಮಾರ್ ವಂದಿಸಿದರು.

Comments are closed.