ಕಲಬುರಗಿ: ಕಲಬುರಗಿಯಲ್ಲಿ ಮಹಿಳಾ ಪೋಲಿಸ್ ಅಧಿಕಾರಿಯೊಬ್ಬರು ತಾವು ಸಲುಹಿದ ಹೆಣ್ಣು ಕರುವಿಗೆ ನಾಮಕರಣ ಮಾಡುವ ಮೂಲಕ ಗೋ ಪ್ರೇಮ ಮೆರೆದಿದ್ದಾರೆ.
ರಾಜಾಪುರ ಬಡಾವಣೆ ನಿವಾಸಿ, ನಗರದ ವಿಶ್ವವಿದ್ಯಾಲಯ ಪೊಲೀಸ್ ಠಾಣೆಯ ಪಿಎಸ್ಐ ಯಶೋಧಾ ಕಟಕೆ ಅವರು ಇತ್ತೀಚೆಗೆ ರಕ್ಷಿಸಿ ಗೋಶಾಲೆಗೆ ಬಿಟ್ಟ ಹಸು ಹೆಣ್ಣು ಕರುವಿಗೆ ಜನ್ಮ ನೀಡಿದೆ. ತಮ್ಮ ಮನೆಯ ಮಗುವಿನಂತೆ ಕರುವಿಗೆ ರಾಧಾ ಎಂದು ನಾಮಕರಣ ಮಾಡಿದ್ದಾರೆ.
ಪೊಲೀಸ್ ಇಲಾಖೆಯಲ್ಲಿದ್ದುಕೊಂಡು ತಮ್ಮ ವೃತ್ತಿ ಜೊತೆ ಪ್ರಾಣಿ-ಪಕ್ಷಿಗಳ ಪಾಲನೆ ಮಾಡುವುದು ಯಶೋಧಾ ಅವರ ಹವ್ಯಾಸ. ಯಶೋಧಾ ಅವರು ಪೊಲೀಸ್ ಇಲಾಖೆಗೆ ಸೇರಿದ ಮೇಲೆ ಜನಸ್ನೇಹಿ ಪೊಲೀಸ್ ಎಂದು ಖ್ಯಾತರಾಗಿದ್ದಾರೆ. ಇದೀಗ ತೊಟ್ಟಿಲು ಕಾರ್ಯಕ್ರಮದಲ್ಲಿ ಮಂಗಳಮುಖಿಯರನ್ನು ಕರೆಸಿ ಅರಿಶಿಣ, ಕುಂಕುಮ ಕೊಟ್ಟು ಗೌರವಿಸಿದ್ದಾರೆ. ತೊಟ್ಟಿಲು ಶಾಸ್ತ್ರದಲ್ಲಿ ಪಾಲ್ಘೊಂಡವರಿಗೆ ಭೋಜನ ವ್ಯವಸ್ಥೆಯನ್ನು ಮಾಡಲಾಗಿತ್ತು.
Comments are closed.