ಮಂಗಳೂರು : ದಕ್ಷಿಣ ಕನ್ನಡ ನೋಟರಿ ಅಸೋಸಿಯೇಷನ್ ವತಿಯಿಂದ ಸನ್ಮಾನ್ಯ ಶ್ರೀ ತೇಜಸ್ವಿ ಸೂರ್ಯ, ಲೋಕಸಭಾ ಸದಸ್ಯರು ಬೆಂಗಳೂರು ಇವರನ್ನು ನೋಟರಿ ಸಂಘದ ಪದಾಧಿಕಾರಿಗಳು ಹಾಗು ಸದಸ್ಯರು ಭೇಟಿಮಾಡಿ, ನೋಟರಿ ಕಾಯ್ದೆ (ತಿದ್ದುಪಡಿ) 2021 ಜಾರಿಮಾಡಲು ಹೊರಡಿಸಿದ್ದು, ಈ ಬಗ್ಗೆ ಈಗಾಗಲೇ ಭಾರತ ಆದ್ಯಂತ ವಿರೋಧ ವ್ಯಕ್ತ ಪಡಿಸಲಾಗಿದ್ದು ಮತ್ತು ನೋಟರಿ ವಕೀಲರಿಗೆ ಮತ್ತು ಅವರ ಕುಟುಂಬಕ್ಕೆ ಬಹಳ ತೊಂದರೆ ಉಂಟಾಗುತ್ತದೆ ಎಂದು ಮನವರಿಕೆ ಮಾಡಲಾಯಿತು.
ಅನುಭವಿ ನುರಿತ ಕಾನೂನು ತಜ್ಞರ ಸೇವೆಯು ಸಮಾಜಕ್ಕೆ ಅಗತ್ಯವಾಗಿರುತ್ತದೆ. ಆದುದರಿಂದ ಕಾನೂನನ್ನು ಯಾವುದೇ ರೀತಿಯ ತಿದ್ದುಪಡಿ ಮಾಡಬಾರದು ಎಂದು ಮನವಿ ಮಾಡಲಾಯಿತು.
ಅದಕ್ಕೆ ಸನ್ಮಾನ್ಯ ಶ್ರೀ ತೇಜಸ್ವಿ ಸೂರ್ಯರವರು ಈ ಬಗ್ಗೆ ಭಾರತ ಸರಕಾರ ಜೊತೆ ಚರ್ಚಿಸಿ ಯಾವುದೇ ತಿದ್ದುಪಡಿ ಆಗದಂತೆ ಈ ಬಗ್ಗೆ ಚರ್ಚಿಸಿ ತಮಗೆ ತಿಳಿಸಲಾಗುವುದೆಂದು ಹೇಳಿ ಆಶ್ವಾಸನೆ ನೀಡಿರುತ್ತಾರೆ ಎಂದು ಸಂಘದ ಪ್ರಮುಖರು ತಿಳಿಸಿದ್ದಾರೆ.
ಈ ಸಂದರ್ಭದಲ್ಲಿ ನೋಟರಿಗಳಾದ, ಶ್ರೀ ಈಶ್ವರ್ ಪೂಜಾರಿ ,ಶ್ರೀ ಸುಜಯ್ ಶೆಟ್ಟಿ ,ಶ್ರೀ ಪಿ. ಪ್ರಕಾಶ್ , ಶ್ರೀಮತಿ ದೀಪಿಕಾ ಶೆಟ್ಟಿ, ಶ್ರೀ ಪ್ರೇಮಾನಂದ ಅಂಚನ್, ಶ್ರೀ ಶ್ರೀಧರ್ ಎಣ್ಮಕಜೆ, ಶ್ರೀ ಪ್ರವೀಣ್ ಆದ್ಯಪಾಡಿ , ಶ್ರೀ ರವಿ ಉಳ್ಳಾಲ್ ,ಶ್ರೀ ಆರಿಲ್ ಕೆ.ಯಸ್ , ಶ್ರೀನಿತೇಶ್ , ಶ್ರೀಕೇಶವ ನಂದೋಡಿ, ಗ್ರೇಸಿ ವಿಜಿತಾ, ಶ್ರೀಮತಿಮಲ್ಲಿಕಾ ಪೂಜಾರಿ ಮತ್ತು ಶ್ರೀ ಶ್ರೀಕುಮಾರ್ ಹಾಗು ಶ್ರೀ ರಾಘವೇಂದ್ರ ರಾವ್ ಉಪಸ್ಥಿತಿ ಇದ್ದರು.
Comments are closed.