ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ ಇಂದಿನಿಂದ (ಡಿ.27 ಸೋಮವಾರ) ಇಲೆಕ್ಟ್ರಿಕ್ ಹಾಗೂ ಬಿಎಸ್-6 ಬಸ್ ಸಂಚಾರ ಆರಂಭವಾಗಿದೆ.
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ವಿಧಾನಸೌಧದಲ್ಲಿ ಬಸ್ ಸಂಚಾರಕ್ಕೆ ಚಾಲನೆ ನೀಡಿದ್ದಾರೆ. 90 ಇಲೆಕ್ಟ್ರಿಕ್ ಹಾಗೂ 265 ಬಿಎಸ್-6 ಬಸ್ ಇಂದಿನಿಂದ ಸಂಚರಿಸುತ್ತಿವೆ. ಒಂದೂವರೆ ಗಂಟೆ ಚಾರ್ಜ್ ಮಾಡಿದರೆ 180 ಕಿಲೋಮೀಟರ್ ವರೆಗೆ ಬಸ್ ಸಂಚರಿಸುತ್ತದೆ. ಧ್ವನಿವರ್ದಕ, ಸಿಸಿಟಿವಿ ವ್ಯವಸ್ಥೆಯನ್ನೂ ಬಸ್ ಹೊಂದಿದೆ.
ಮಾಲಿನ್ಯ ಸಮಸ್ಯೆ ಕಡಿವಾಣ ಹಾಕಲು ಇಲೆಕ್ಟ್ರಿಕ್ ಬಸ್ಸಂಚಾರಕ್ಕೆ ಚಾಲನೆ ನೀಡಲಾಗಿದೆ. ಮೆಟ್ರೋ ಫೀಡರ್ ಸೇರಿದಂತೆ ಕೆಂಗೇರಿ, ಯಶವಂತಪುರ, ಕೆ.ಆರ್ ಪುರಂ ಘಟಕದಲ್ಲಿ ಬಸ್ ಸಂಚಾರ ಆರಂಭವಾಗಿದೆ. ಬಿಎಸ್-6 ಡೀಸೆಲ್ ಬಸ್ ರಾಜ್ಯಕ್ಕೆ ಇದೇ ಮೊದಲ ಬಾರಿಗೆ ಪರಿಚಯಿಸಲಾಗಿದ್ದು, ಬಸ್ ಅತಿ ಕಡಿಮೆ ಹೊಗೆ ಹೊರಸೂಸಲಿದ್ದು ವಾಯು ಮಾಲಿನ್ಯ ನಿಯಂತ್ರಣ ಈ ಯೋಜನೆ ಉದ್ದೇಶ.
ಬಿಎಂಟಿಸಿಯ ಬಹು ವರ್ಷಗಳ ಕನಸು ಇದಾಗಿದ್ದು, ಈ ಮೂಲಕ ನಗರದ ಮಾಲಿನ್ಯ ನಿಯಂತ್ರಣಕ್ಕೆ ಬಿಎಂಟಿಸಿ ಕೊಡುಗೆ ನೀಡಿದೆ. ಈ ಹಿಂದೆ ಸರ್ಕಾರ ಬಜೆಟ್ನಲ್ಲಿ ನೀಡಿದ್ದ ಅನುದಾನದಲ್ಲಿ 535 ಬಿಎಸ್- 6 ಡೀಸೆಲ್ ಬಸ್ ಖರೀದಿ ಮಾಡಲಾಗಿತ್ತು. ಈಗಾಗಲೇ 40 ಎಲೆಕ್ಟ್ರಿಕ್, 150 ಬಿಎಸ್- 6 ಡೀಸೆಲ್ ಬಸ್ಗಳು ಬಿಎಂಟಿಸಿ ಸಂಸ್ಥೆ ಸೇರಿವೆ. ಫೆಬ್ರವರಿ ವೇಳೆಗೆ ಉಳಿದ ಎಲ್ಲಾ ಹೊಸ ಬಸ್‌ಗಳು ಸಂಚಾರ ನಡೆಸಲಿವೆ.
ಇಲೆಕ್ಟ್ರಿಕ್ ಬಸ್ ಸಂಚಾರಕ್ಕೆ ಚಾಲನೆ ನೀಡಿದ ಬೊಮ್ಮಾಯಿ ಬಳಿಕ ಇಲೆಕ್ಟ್ರಿಕ್ ಬಸ್ಸಿನಲ್ಲಿ ಸಂಚಾರ ಮಾಡಿದರು. ಈ ವೇಳೆ ಸಚಿವರಾದ ಶ್ರೀರಾಮುಲು, ಎಸ್.ಟಿ.ಸೋಮಶೇಖರ್, ಬಿ.ಎಂ.ಟಿ.ಸಿ ಅಧ್ಯಕ್ಷ ನಂದೀಶ್ ರೆಡ್ಡಿ, ಸಂಸದ ಪಿ.ಸಿ.ಮೋಹನ್, ಶಾಸಕರು, ಸಾರಿಗೆ ಇಲಾಖೆ ಅಧಿಕಾರಿಗಳು ಉಪಸ್ಥಿತರಿದ್ದರು.
Comments are closed.