ಬೆಂಗಳೂರು: ನಗರದಲ್ಲಿ ನಾಳೆ (ಡಿ.28) ರಾತ್ರಿ 10 ಗಂಟೆಯಿಂದ ನೈಟ್ ಕರ್ಫ್ಯೂ ಜಾರಿ ಹಿನ್ನೆಲೆ ರಾತ್ರಿ 10 ಗಂಟೆಯ ನಂತರ ಮೆಟ್ರೋ ರೈಲು ಕಾರ್ಯಚರಣೆಯಲ್ಲಿ ರೈಲುಗಳ ಓಡಾಟ ಕಡಿಮೆ ಮಾಡುವುದಾಗಿ ಬೆಂಗಳೂರು ಮೆಟ್ರೋ ರೈಲು ನಿಗಮ ನಿಯಮಿತ ಪ್ರಾಧಿಕಾರ (ಬಿ.ಎಂ.ಆರ್.ಸಿ.ಎಲ್.) ತಿಳಿಸಿದೆ.
ಈ ಕುರಿತು ಮಾಧ್ಯಮ ಪ್ರಕಟಣೆ ಹೊರಡಿಸಿದ ಬಿ.ಎಂ.ಆರ್.ಸಿ.ಎಲ್ ಅವರು ನೈಟ್ ಕರ್ಫ್ಯೂ ಹಿನ್ನೆಲೆ ಪ್ರಯಾಣಿಕರು ಸಂಖ್ಯೆಯಲ್ಲಿ ಗಣನೀಯ ಪ್ರಮಾಣದ ಇಳಿಕೆಯಾಗುತ್ತದೆ. ಹೀಗಾಗಿ ಮೆಟ್ರೋ ಕಾರ್ಯಚರಣೆ ಅವಧಿಯಲ್ಲಿ ಯಾವುದೇ ಬದಲಾವಣೆ ಇಲ್ಲ. ಆದರೆ 10 ಗಂಟೆಯ ನಂತರ ಸಂಚಾರ ಮಾಡುವ ರೈಲುಗಳ ಸಂಖ್ಯೆಯಲ್ಲಿ ಇಳಿಕೆ ಮಾಡಲಾಗುವುದು ಎಂದು ಮಾಹಿತಿ ನೀಡಿದೆ.
Comments are closed.