ಕರಾವಳಿ

ಕೊರಗಜ್ಜನ ಕಟ್ಟೆ ಅಪವಿತ್ರ ಪ್ರಕರಣ :ಕ್ರೈಸ್ತ ಮಿಷನರಿಗಳ ಕೈವಾಡ ಆರೋಪ -ಉನ್ನತ ಮಟ್ಟದ ತನಿಖೆಗೆ ಆಗ್ರಹ

Pinterest LinkedIn Tumblr

ಬಂಧಿತ ಆರೋಪಿ

ಮಂಗಳೂರು : ಮಂಗಳೂರಿನ ಮಾರ್ನಮಿಕಟ್ಟೆ ಬಳಿಯ ಕೊರಗಜ್ಜನ ಕಟ್ಟೆಗೆ ಉಪಯೋಗಿಸಿದ ಕಾಂಡೋಮ್ ಹಾಕಿದ ದುರುಳನ ಬಂಧನ -ಇದರ ಹಿಂದೆ ಇರುವ ಕ್ರೈಸ್ತ ಮಿಷನರಿಗಳ ಕೈವಾಡದ ಶಂಕೆ ಇದೆ. ಈ ಬಗ್ಗೆ ಉನ್ನತ ಮಟ್ಟದ ತನಿಖೆ ನಡೆಸಬೇಕು ಎಂದು ವಿಶ್ವ ಹಿಂದೂ ಪರಿಷತ್ ಆಗ್ರಹಿಸಿದೆ.

ಕಳೆದ ಕಳವರು ತಿಂಗಳುಗಳಿಂದ ದೇವಸ್ಥಾನ, ದೈವಸ್ಥಾನಗಳ ಕಾಣಿಕೆ ಹುಂಡಿಗೆ ಬೇಡದ ವಸ್ತುಗಳನ್ನು ಹಾಕಿ ಅಪವಿತ್ರಗೊಳಿಸಿದ ದುರುಳನನ್ನು ಪೊಲೀಸ್ ಇಲಾಖೆಗೆ ಬಂಧಿಸಿದ್ದನ್ನು ವಿಶ್ವ ಹಿಂದೂ ಪರಿಷತ್ ಸ್ವಾಗತ ಮಾಡುತ್ತದೆ.

ಆರೋಪಿಯ ಹೇಳಿಕೆಯನ್ನು ನೋಡಿದಾಗ ಹಿಂದೂ ಧರ್ಮದಿಂದ ಕ್ರೈಸ್ತ ಮತಕ್ಕೆ ಮತಾಂತರ ಗೊಂಡಿರುವುದು  ಸಾಬೀತಾಗಿದೆ. ಸ್ವಾಮಿ ವಿವೇಕಾನಂದರ ವಾಣಿಯಂತೆ “ಒಬ್ಬ ಹಿಂದೂ ಮತಾಂತರವಾದರೆ ಒಂದು ಸಂಖ್ಯೆ ಕಡಿಮೆಯಾಯಿತೆಂದಲ್ಲ ಒಬ್ಬ ಶತ್ರು ಹೆಚ್ಚಾದಂತೆ” ಎಂಬಂತೆ ಮಾತಂತ್ರವಾದ ಈ ಆರೋಪಿ ಹಿಂದೂ ವಿರೋಧಿ ಕೃತ್ಯವೆಸಗಿರುತ್ತಾನೆ.

ಇವನಿಗೆ ಕುಮ್ಮಕ್ಕು ನೀಡಿ ಹಿಂದುಗಳನ್ನು ಮತಾಂತರ ಮಾಡುವ ಕ್ರೈಸ್ತ ಮಿಷನರಿಗಳ ಕೈವಾಡವಿರುವ ಶಂಕೆ ಇದ್ದು ಉನ್ನತ ತನಿಖೆ ನಡೆಸಿ ಹಿಂದಿರುವ ಜಾಲವನ್ನು ಪತ್ತೆ ಹಚ್ಚಿ ಸೂಕ್ತ ಕಾನೂನು ಕ್ರಮ ಕೈಗೊಳ್ಳಲು ವಿಶ್ವ ಹಿಂದೂ ಪರಿಷತ್ ಪೊಲೀಸ್ ಕಮಿಷನರಿಗೆ ಆಗ್ರಹಿಸುತ್ತದೆ ಎಂದು ಜಿಲ್ಲಾ ಕಾರ್ಯದರ್ಶಿ ಶಿವಾನಂದ್ ಮೆಂಡನ್ ಪತ್ರಿಕಾ ಹೇಳಿಕೆ ನೀಡಿದ್ದಾರೆ.

Comments are closed.