ಮಂಗಳೂರು/ಉಡುಪಿ: ಕೊರೊನಾ ಸೋಂಕು ಪ್ರಸರಣ ತಡೆಗೆ ರಾಜ್ಯ ಸರಕಾರ ವೀಕೆಂಡ್ ಕರ್ಫ್ಯೂ ಘೋಷಿಸಿದೆ. ಈ ಹಿನ್ನೆಲೆಯಲ್ಲಿ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯಲ್ಲಿ ವಾರಾಂತ್ಯ ಕರ್ಫ್ಯೂ ಶುಕ್ರವಾರ ರಾತ್ರಿ 10ರಿಂದ ಆರಂಭವಾಗಿದ್ದು ಸೋಮವಾರ ಬೆಳಗ್ಗೆ 5ರ ತನಕ ಜಾರಿಯಲ್ಲಿರಲಿದೆ. ವಿರಳ ಸಂಖ್ಯೆಯಲ್ಲಿ ಖಾಸಗಿ ಬಸ್ಸುಗಳು ಶನಿವಾರ ಬೀದಿಗಿಳಿದಿದೆ. ಸರಕಾರು ಬಸ್ ಸಂಚಾರವೂ ಬೆಳಿಗ್ಗೆ ಇದ್ದಿತ್ತು. ಅಂದಾಜು 9 ಗಂಟೆ ಬಳಿಕ ವೀಕೆಂಡ್ ಕರ್ಫ್ಯೂ ಚಿತ್ರಣ ಸಿಗಲಿದೆ.
ಜಿಲ್ಲೆ ಮತ್ತು ತಾಲೂಕು ಕೇಂದ್ರಗಳು, ಗ್ರಾಮಾಂತರ ಪ್ರದೇಶಗಳಲ್ಲಿ ಶುಕ್ರವಾರ ರಾತ್ರಿ 8ರ ಬಳಿಕ ಜನಸಂದಣಿ ಕಡಿಮೆಯಾಗಿದೆ. ರಾತ್ರಿ ಹತ್ತು ಗಂಟೆಯ ಬಳಿಕ ಜನಜೀವನ, ಸಂಚಾರ ಬಹುತೇಕ ಸ್ತಬ್ಧಗೊಂಡಿದ್ದು ಶನಿವಾರ ಮುಂಜಾನೆಯಿಂದ ಜನರು ವಿರಳ ಸಂಖ್ಯೆಯಲ್ಲಿ ಅಗತ್ಯ ಕಾರ್ಯಕ್ಕೆ ತೆರಳುತ್ತಿದ್ದಾರೆ. ಹಲವೆಡೆ ಬ್ಯಾರಿಕೇಡ್ ಗಳನ್ನು ಹಾಕಿ ಬಂದೋಬಸ್ತ್ ಮಾಡಲಾಗಿದೆ.
ಶುಕ್ರವಾರ ಉಡುಪಿ ಬಸ್ ಸ್ಟಾಂಡ್, ಮಂಗಳೂರು ಬಸ್ ಸ್ಟಾಂಡ್ ಸೇರಿದಂತೆ ಎಲ್ಲ ಪ್ರಮುಖ ಸ್ಥಳಗಳು ಖಾಲಿ ಹೊಡೆಯುತ್ತಿದ್ದವು. ಕುಂದಾಪುರ, ಕಾರ್ಕಳ, ಸುಳ್ಯ, ಪುತ್ತೂರು, ಬೆಳ್ತಂಗಡಿ, ಬಂಟ್ವಾಳ ಸೇರಿದಂತೆ ತಾಲೂಕು ಕೇಂದ್ರಗಳಲ್ಲೂ ವೀಕೆಂಡ್ ಕರ್ಫ್ಯೂ ಅನುಭವಕ್ಕೆ ಬಂದಿತ್ತು. ರಾತ್ರಿಯಿಂದಲೇ ಪೊಲೀಸರು ವಾಹನದಲ್ಲಿ ಗಸ್ತು ತಿರುಗುತ್ತಿದ್ದಾರೆ.
ವೀಕೆಂಡ್ ಕರ್ಫ್ಯೂ ಹಿನ್ನೆಲೆ ಸೋಮವಾರ ಬೆಳಗ್ಗೆ 5ರ ವರೆಗೆ ಉಭಯ ಜಿಲ್ಲೆಗಳಲ್ಲಿ ತುರ್ತು ಸೇವೆ, ದಿನಸಿ, ಆಹಾರ ವಸ್ತುಗಳ ಮಾರಾಟ, ಹೊಟೇಲ್‌ಗಳಲ್ಲಿ ಪಾರ್ಸೆಲ್ ಮತ್ತು ಅಗತ್ಯ ಸೇವೆಗಳು ಹೊರತುಪಡಿಸಿ ಬೇರೆ ಯಾವುದೇ ಸೇವೆಗಳು ಇರುವುದಿಲ್ಲ. ತುರ್ತು ಸೇವೆ ಒದಗಿಸುವ ಸರಕಾರಿ, ಅರೆ ಸರಕಾರಿ, ನಿಗಮ ಮಂಡಳಿಗಳ ಕಚೇರಿಗಳು ಕಾರ್ಯನಿರ್ವಹಿಸಲಿವೆ. ವಕೀಲರಿಗೆ ಶೇ. 50 ರಷ್ಟು ಸಿಬಂದಿ ನಿಯಮದಡಿ ಕಚೇರಿಗಳಲ್ಲಿ ಸೇವೆ ಸಲ್ಲಿಸಲು ಅವಕಾಶವಿದೆ. ಪೂರ್ವ ನಿಗದಿತ ಕಾರ್ಯಕ್ರಮಕ್ಕೆ ಅವಕಾಶ
ಶನಿವಾರ ಶಾಲಾ ಕಾಲೇಜುಗಳಿಗೆ ರಜಾ ನೀಡಲಾಗಿದ್ದು, ಪರೀಕ್ಷೆ ನಡೆಸಲು ಮಾತ್ರವೇ ಅವಕಾಶ ಕಲ್ಪಿಸಲಾಗಿದೆ. ಉಭಯ ಜಿಲ್ಲೆಗಳ ಗಡಿ ಭಾಗದಲ್ಲಿರುವ ಚೆಕ್‌ಪೋಸ್ಟ್‌ಗಳಲ್ಲೂ ತಪಾಸಣೆ ಕಾರ್ಯ ಮತ್ತಷ್ಟು ಬಿಗಿಗೊಳಿಸಲಾಗಿದೆ.
Comments are closed.