ಶಿವಮೊಗ್ಗ: ಶಾಲಾ ವಿದ್ಯಾರ್ಥಿಗಳ ಹಿಜಾಬ್- ಕೇಸರಿ ಶಾಲು ಗಲಾಟೆ ಇದೀಗ ಶಿವಮೊಗ್ಗದಲ್ಲಿ ತೀವ್ರ ಸ್ವರೂಪ ಪಡೆದುಕೊಂಡಿದೆ. ಶಿವಮೊಗ್ಗದ ಬಾಪೂಜಿನಗರ ದಲ್ಲಿರುವ ಸರ್ಕಾರಿ ಪದವಿ ಕಾಲೇಜಿನ ಹೊರಭಾಗದಲ್ಲಿ ಪರಸ್ಪರ ಕಲ್ಲುತೂರಾಟ ನಡೆದಿದೆ.
ಶಲ್ಯಧಾರಿ ವಿದ್ಯಾರ್ಥಿಗಳ ಗುಂಪಿನ ಕಡೆ ಅನ್ಯಕೋಮಿನ ಯುವಕರು ಕಲ್ಲು ತೂರಿದ ಘಟನೆ ನಡೆದಿದ್ದು, ಇದಕ್ಕೆ ಪ್ರತಿಯಾಗಿ ಮತ್ತೊಂದು ಯುವಕರ ಗುಂಪು ಕಲ್ಲು ತೂರಿದೆ. ಶಲ್ಯಧಾರಿ ಯುವಕರು ಕಲ್ಲು ತೂರಿದವರನ್ನು ಅಟ್ಟಾಡಿಸಿಕೊಂಡು ಹೋಗಿದ್ದಾರೆ.
ಪರಿಸ್ಥಿತಿ ಕೈ ಮೀರುವುದನ್ನು ಅರಿತ ಪೊಲೀಸರು ಲಾಠಿ ಬೀಸಿದ್ದಾರೆ. ಎಸ್ ಪಿ ಲಕ್ಷ್ಮಿಪ್ರಸಾದ್ ಖುದ್ದು ಲಾಠಿ ಹಿಡಿದಿದ್ದಾರೆ. ನ್ಯಾಷನಲ್ ಕಾಲೇಜು ಆವರಣದ ಎಚ್ ಎಸ್ ರುದ್ರಪ್ಪ ಕಾಲೇಜು ಬಳಿಯೂ ಕಲ್ಲುತೂರಾಟ ನಡೆಸಲಾಗಿದೆ.ಕಲ್ಲು ತೂರಾಟ ನಡೆಸಿದ ವಿದ್ಯಾರ್ಥಿಗಳನ್ನು ಪೊಲೀಸರು ವಶಕ್ಕೆ ಪಡೆದ್ದಾರೆ.
Comments are closed.