ಉಡುಪಿ: ಉಡುಪಿ ಜಿಲ್ಲಾಡಳಿತ ಉಕ್ರೇನ್‌ನಲ್ಲಿ ವಾಸಿಸುತ್ತಿರುವ ಉಡುಪಿ ಜಿಲ್ಲೆಯ ಜನರ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಇದರ ಪ್ರಕಾರ ಜಿಲ್ಲೆಯ 4 ಜನರು ಉಕ್ರೇನ್‌ನಲ್ಲಿ ನೆಲೆಸಿದ್ದಾರೆ. ನಾಲ್ವರೂ ಕೂಡಾ ಎಂಬಿಬಿಎಸ್ ವಿದ್ಯಾರ್ಥಿಗಳಾಗಿದ್ದಾರೆ.
(ಉಡುಪಿ ಡಿಸಿ ಕೂರ್ಮಾರಾವ್)
ಕೆಮ್ಮಣ್ಣು ಮೂಲದ ಗ್ಲೆನ್‌ವಿಲ್ ಫೆರ್ನಾಂಡಿಸ್ ಅವರು ಉಕ್ರೇನ್‌ನಲ್ಲಿರುವ ಟೌನ್ ನ್ಯಾಷನಲ್ ಮೆಡಿಕಲ್ ಯೂನಿವರ್ಸಿಟಿಯಲ್ಲಿ ಓದುತ್ತಿದ್ದಾರೆ. ಕಲ್ಯಾಣಪುರದ ಅನಿಫ್ರೆಡ್ ರಿಡ್ಲಿ ಡಿಸೋಜಾ(20), ಬ್ರಹ್ಮಾವರದ ರೋಹನ್ ಧನಂಜಯ್ ಬಾಗ್ಲಿ(24) ಅವರು ಖಾರ್ಕಿವ್ ನ್ಯಾಷನಲ್ ಮೆಡಿಕಲ್ ಯುನಿವರ್ಸಿಟಿಯಲ್ಲಿ ಓದುತ್ತಿದ್ದಾರೆ. ಮತ್ತು ಮ್ರಾನಾಲ್ (19) ಎಂಬವರು ಕಹೈಮ್ಕಿವ್‌ದಲ್ಲಿರುವ ಇವಾನೊ-ಫ್ರಾನ್ ಕಿವ್ಸ್ಕ್ ನ್ಯಾಷನಲ್ ಯೂನಿವರ್ಸಿಟಿಯಲ್ಲಿ ಓದುತ್ತಿದ್ದಾರೆ.
ಇವರಲ್ಲದೆ ಉಕ್ರೇನ್‍ನಲ್ಲಿ ಜಿಲ್ಲೆಯ ನಾಗರಿಕರು ಸಿಲುಕಿಕೊಂಡಲ್ಲಿ ಅವರನ್ನು ಸುರಕ್ಷಿತವಾಗಿ ಕರೆ ತರಲು ಕೇಂದ್ರ ಹಾಗೂ ರಾಜ್ಯ ಸರ್ಕಾರದಿಂದ ನೆರವು ಅಗತ್ಯವಿದ್ದರೆ ಆ ಕುರಿತಂತೆ ಜಿಲ್ಲಾಡಳಿತಕ್ಕೆ ಅಗತ್ಯ ಮಾಹಿತಿ ನೀಡಲು ಕೋರಲಾಗಿದೆ.
ಈ ಕುರಿತು ಉಡುಪಿ ಜಿಲ್ಲೆಯ ಜಿಲ್ಲಾಧಿಕಾರಿಯವರ ಕಚೇರಿಯ ಕಂಟ್ರೋಲ್ ರೂಂ ನಂಬರ್- 1077 ಗೆ ಕರೆ ಮಾಡಬಹುದು ಅಥವಾ ಹತ್ತಿರದ ತಹಶೀಲ್ದಾರರ ಕಚೇರಿ ಅಥವಾ ಜಿಲ್ಲಾಧಿಕಾರಿಯವರ ಕಚೇರಿಗೆ ಮಾಹಿತಿ ನೀಡುವಂತೆ ಕೋರಲಾಗಿದೆ.
Comments are closed.