ಕರಾವಳಿ

ಹಿಜಾಬ್‌ ವಿವಾದದಲ್ಲಿ ಸುದ್ದಿಯಾದ ಕುಂದಾಪುರ ಆರ್‌.ಎನ್‌ ಶೆಟ್ಟಿ ಕಾಲೇಜ್ ಪ್ರಾಂಶುಪಾಲರಿಗೆ ಕೊಲೆ ಬೆದರಿಕೆ; ಆರೋಪಿ ಬಂಧನ

Pinterest LinkedIn Tumblr

ಕುಂದಾಪುರ: ಹಿಜಾಬ್‌ ಪ್ರಕರಣದ ವಿಚಾರದಲ್ಲಿ ಕುಂದಾಪುರ ಆರ್‌.ಎನ್‌ ಶೆಟ್ಟಿ ಕಾಲೇಜಿನ ಪ್ರಾಂಶುಪಾಲರಿಗೆ ಕೊಲೆ ಬೆದರಿಕೆ ಹಾಕಿದ ಆರೋಪದಲ್ಲಿ ಪೊಲೀಸರು ಓರ್ವ ಆರೋಪಿಯನ್ನು ಬಂಧಿಸಿದ್ದಾರೆ.

ಕೋಲಾರ ಕೆಜಿಎಫ್ ರಾಬರ್ಟ್ಸನ್ ಪೇಟೆ ನಿವಾಸಿ ಮೊಹಮ್ಮದ್ ಶಬೀರ್ ಬಂಧಿತ ಆರೋಪಿ.

ಬಂಧಿತ ಆರೋಪಿಯು ನಗರದ ಆರ್‌ಎನ್‌ ಶೆಟ್ಟಿ ಕಾಲೇಜಿನ ಪ್ರಾಂಶುಪಾಲರಿಗೆ ಇಂಟರ್‌ ನೆಟ್‌ ಕರೆ ಮಾಡಿ ಹಿಜಾಬ್ ಹಾಕಲು ಅವಕಾಶ ನೀಡದಿದ್ದರೆ ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದ ಎನ್ನಲಾಗಿದ್ದು ಈ ಬಗ್ಗೆ ಕುಂದಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಆ ಕರೆಯ ಜಾಡು ಹಿಡಿದು ಕೋಲಾರಕ್ಕೆ ಹೋಗಿ ಆರೋಪಿಯನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.

ಈ ಬಗ್ಗೆ ಕುಂದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ತನಿಖೆ ನಡೆಸುತ್ತಿದ್ದಾರೆ.

Comments are closed.