ಕರಾವಳಿ

ಕೆಂಪುಕೋಟೆಯ ಮೇಲೆ ಭಗವಾಧ್ವಜ ಹಾರಿಸಿಯೇ ಸಿದ್ದ: ಬಿಜೆಪಿ ಶಾಸಕ ಹರೀಶ್ ಪೂಂಜಾ ವಿವಾದಾತ್ಮಕ ಹೇಳಿಕೆ

Pinterest LinkedIn Tumblr

ಮಂಗಳೂರು: ಕೆಂಪುಕೋಟೆಯ ಮೇಲೆ ಭಗವಾಧ್ವಜ ಹಾರಿಸಿಯೇ ಸಿದ್ದ ಎಂದು ತುಳು ಭಾಷೆಯಲ್ಲಿ ಬಿಜೆಪಿ ಶಾಸಕ ಹರೀಶ್ ಪೂಂಜಾ ಮಾಡಿರುವ ಭಾಷಣದ ವಿಡಿಯೋ ತುಣುಕು ವೈರಲ್ ಆಗಿದೆ.

ದಕ್ಷಿಣ ಕನ್ನಡ ಬೆಳ್ತಂಗಡಿ ಕ್ಷೇತ್ರದ ಬಿಜೆಪಿ ಶಾಸಕ ಹರೀಶ್ ಪೂಂಜಾ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ಕಾಂಗ್ರೆಸ್ ಕುಮ್ಮಕ್ಕಿನಿಂದ ಹಿಂದೂ ಕಾರ್ಯಕರ್ತ ಹತ್ಯೆ ಆಗಿದೆ. ಕೆಂಪುಕೋಟೆ ಮೇಲೆ ಭಗವಾದ್ವಜ ಹಾರಿಸ್ತೀವಿ ಎಂದು ಹರೀಶ್ ಪೂಂಜಾ ಹೇಳಿಕೆ ನೀಡಿದ್ದಾರೆ.

ಕೆ.ಎಸ್. ಈಶ್ವರಪ್ಪ ಈ ಹೇಳಿಕೆ ನೀಡಿದ್ದಕ್ಕೆ ಅಧಿವೇಶನ ಮೊಟಕುಗೊಳಿಸಿದ್ದರು ಆದರೆ, ಕೆಂಪುಕೋಟೆಯ ಮೇಲೆ ಭಗವಾಧ್ವಜ ಹಾರಿಸೋದು ಸಿದ್ದ. ರಾಷ್ಟ್ರಧ್ವಜದ ಕೆಳಗೆ ಭಗವಾಧ್ವಜವನ್ನ ಹಾರಿಸುತ್ತೇವೆ. ಭಗವಾಧ್ವಜ ಹಾರಿಸೋದನ್ನ ಯಾರಿಂದಲೂ ತಪ್ಪಿಸಲಾಗಲ್ಲ ಎಂದು ಬಿಜೆಪಿ ಶಾಸಕ ಹರೀಶ್ ಪೂಂಜಾ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ಶಿವಮೊಗ್ಗದ ಹರ್ಷ ಹತ್ಯೆ ಖಂಡಿಸಿ ಹಿಂದೂ ಜನಜಾಗೃತಿ ಸಮಿತಿ ನಡೆಸಿದ ಪ್ರತಿಭಟನೆಯಲ್ಲಿ ಹೇಳಿಕೆ ನೀಡಲಾಗಿದೆ ಎಂಬ ಮಾಹಿತಿ ಲಭಿಸಿದೆ.

ತುಳು ಭಾಷೆಯಲ್ಲಿ ಹರೀಶ್ ಪೂಂಜಾ ಮಾಡಿದ ಭಾಷಣದ ತುಣುಕು ವೈರಲ್ ಆಗಿದೆ. ಕಾಂಗ್ರೆಸ್ ಷಡ್ಯಂತ್ರ, ಪ್ರೇರಣೆ ಮತ್ತು ಕುಮ್ಮಕ್ಕಿನಿಂದ ಹಿಂದೂ ಕಾರ್ಯಕರ್ತನ ಹತ್ಯೆ ಆಗಿದೆ. ಕೆಂಪುಕೋಟೆಯ ಮೇಲೆ, ರಾಷ್ಟ್ರಧ್ವಜದ ಕೆಳಗೆ ಭಗವಾಧ್ಬಜ ಹಾರಿಸುವುದನ್ನು ಯಾವ ಪಕ್ಷದಿಂದಲೂ ತಪ್ಪಿಸಲು ಸಾಧ್ಯವೇ ಇಲ್ಲ. ಇದು ಭಾರತೀಯ ಜನತಾ ಪಾರ್ಟಿ ಮತ್ತು ಹಿಂದೂ ಸಮಾಜದ ಸಂಕಲ್ಪ. ದೇಶಕ್ಕೆ ಸ್ವಾತಂತ್ರ್ಯ ಸಿಗಲು ಬಾಲಗಂಗಾಧರ ತಿಲಕರು ಭಗವಾಧ್ವಜ ಎದುರಿಟ್ಟು ಹೋರಾಟ ಮಾಡಿದ್ದರು. ಅದಕ್ಕೂ ಮೊದಲು ಹಿಂದೂ ಸಮಾಜದ ಶಕ್ತಿಯಾಗಿದ್ದ ಶಿವಾಜಿ ಮಹಾರಾಜರ ಶಕ್ತಿಯೂ ಭಗವಾಧ್ವಜ ಆಗಿತ್ತು ಎಂದು ಪೂಂಜಾ ಹೇಳಿದ್ದಾರೆ.

Comments are closed.