ಕರಾವಳಿ

ಮಾರ್ಚ್ 5 ರಿಂದ 8 ರವರೆಗೆ ಸೂಟರ್‌ಪೇಟೆ ಶ್ರೀ ಕೋರ್‍ದಬ್ಬು ದೈವಸ್ಥಾನದಲ್ಲಿ ವರ್ಷಾವಧಿ ನೇಮೋತ್ಸವ

Pinterest LinkedIn Tumblr

ಮಂಗಳೂರು : ಭೂತಾರಾಧನೆಯ ವಿಶಿಷ್ಟ ಪರಂಪರೆಯನ್ನು ಉಳಿಸಿಕೊಂಡಿರುವ ಅತೀ ಪುರಾತನ ಬಬ್ಬುಸ್ವಾಮಿ ಕ್ಷೇತ್ರಗಳಲ್ಲಿ ಒಂದಾಗಿರುವ ಸೂಟರ್‌ಪೇಟೆ ಶ್ರೀ ಕೋರ್‍ದಬ್ಬು ದೈವಸ್ಥಾನದ ವರ್ಷಾವಧಿ ನೇಮೋತ್ಸವ ಮಾರ್ಚ್ 5 ರಿಂದ 8 ರವರೆಗೆ ನಡೆಯಲಿದೆ.

ಮಾರ್ಚ್ 5ರಂದು ಬೆಳಿಗ್ಗೆ ಹೋಮ, ನಂತರ ಶ್ರೀ ಬಬ್ಬುಸ್ವಾಮಿ, ಪಂಜುರ್ಲಿ, ಗುಳಿಗ ದೈವಗಳ ದರ್ಶನ ಸೇವೆಯೊಂದಿಗೆ ಭಂಡಾರ ಏರುವುದು, ಮಧ್ಯಾಹ್ನ ಸ್ಥಳದ ಗುಳಿಗ ದೈವದ ನೇಮ, ರಾತ್ರಿ ಭಗವಾನ್ ಶ್ರೀ ಬಬ್ಬುಸ್ವಾಮಿ ಹಾಗೂ ತನ್ನಿಮಾನಿಗ ನೇಮೋತ್ಸವ ನಡೆಯಲಿದೆ.

ಮಾರ್ಚ್ 6 ರಂದು ಸಂಜೆ ರಾಹುಗುಳಿಗ ನೇಮ, ರಾತ್ರಿ ಶ್ರೀ ಪಂಜುರ್ಲಿ, ಗುಳಿಗ ನೇಮೋತ್ಸವ.
ಮಾರ್ಚ್  7 ರಂದು ಮಧ್ಯಾಹ್ನ ಧರ್ಮದೈವದ ನೇಮ, ರಾತ್ರಿ ಸುಬ್ಬಿಗುಳಿಗ ಹಾಗೂ ಸುಬ್ಯಮ್ಮ ನೇಮೋತ್ಸವ ನಡೆಯಲಿದೆ.

ಮಾರ್ಚ್ 8ರಂದು ಮಧ್ಯಾಹ್ನ ಸಂಕಳೆ ಗುಳಿಗ ನೇಮ, ರಾತ್ರಿ ಶ್ರೀ ಕೊರಗಜ್ಜ ನೇಮ ಹಾಗೂ ಭಂಡಾರ ಇಳಿಯುವುದು.

ಶ್ರೀ ಸತ್ಯನಾರಾಯಣ ಪೂಜೆ: ಮಾರ್ಚ್ 4 ರಂದು ವರ್ಷಂಪ್ರತಿ ನಡೆಯುವಂತೆ ಸಾರ್ವಜನಿಕ ಶ್ರೀ ಸತ್ಯನಾರಾಯಣ ಪೂಜೆಯು ಧರ್ಮದರ್ಶಿ ಶ್ರೀ ಭಾಸ್ಕರ ಐತಾಳ್‌ರವರ ಪೌರೋಹಿತ್ಯದಲ್ಲಿ ಸಂಜೆ 6ಗಂಟೆಗೆ ನಡೆದು, ರಾತ್ರಿ ಸಾರ್ವಜನಿಕ ಅನ್ನಸಂತರ್ಪಣೆ ನಡೆಯಲಿದೆ.

ನಂತರ ವಿಜಯ ಫ್ರೆಂಡ್ಸ್ ಸರ್ಕಲ್, ಸೂಟರ್‌ಪೇಟೆ ಇದರ ಪ್ರಾಯೋಜಕತ್ವದಲ್ಲಿ ನೃತ್ಯ ಗಾನ ಸಿಂಚನ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ. ನಾಲ್ಕು ದಿನಗಳ ನೇಮೋತ್ಸವದಂದು ಪ್ರತೀ ದಿನ ಶ್ರೀ ಕ್ಷೇತ್ರದಲ್ಲಿ ಮಹಾ ಅನ್ನಸಂತರ್ಪಣೆ ನಡೆಯಲಿದೆ ಎಂದು ದೈವಸ್ಥಾನದ ಗುರಿಕಾರರಾದ ಶ್ರೀ ಎಸ್.ರಾಘವೇಂದ್ರ ಇವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Comments are closed.