ಬೆಂಗಳೂರು: ಅತ್ತಿಬೆಲೆ ಪೊಲೀಸರಿಂದ ಮುಂಬೈನ ನಟೋರಿಯಸ್ ಗ್ಯಾಂಗ್ಸ್ಟರ್ ಓರ್ವನನ್ನು ಬಂಧಿಸಲಾಗಿದೆ.
ಗ್ಯಾಂಗ್ಸ್ಟರ್ ಅಬ್ದುಲ್ ಅಜೀಜ್ ಖಾನ್ ಪೊಲೀಸರ ಬಲೆಗೆ ಬಿದ್ದಿದ್ದಾನೆ. ಕೊಲೆ, ದರೋಡೆ, ಬೆದರಿಕೆ, ಡ್ರಗ್ಸ್ ಪ್ರಕರಣಗಳು ಸೇರಿ ಒಟ್ಟು 37 ಪ್ರಕರಣಗಳಲ್ಲಿ ಭಾಗಿಯಾಗಿದ್ದ ಅಬ್ದುಲ್ ಅಜೀಜ್ ಖಾನ್ ಬಂಧಿಸಲಾಗಿದೆ.
ನಗರದ ಅತ್ತಿಬೆಲೆ ರೆಸ್ಟೋರೆಂಟ್ನಲ್ಲಿ ಅಡಗಿದ್ದ ವೇಳೆ ಖಚಿತ ವರ್ತಮಾನ ಪಡೆದ ಪೊಲೀಸರು ಈ ಕ್ಷಿಪ್ರ ದಾಳಿ ನಡೆಸಿ ಸೆರೆ ಹಿಡಿಯಲಾಗಿದೆ. ಗ್ಯಾಂಗ್ಸ್ಟರ್ ಬಳಿ ಪಿಸ್ತೂಲ್, ನಾಲ್ಕು ಜೀವಂತ ಗುಂಡು ವಶಕ್ಕೆ ಪಡೆಯಲಾಗಿದೆ. 15 ಸಿಮ್ ಕಾರ್ಡ್ಗಳು, 6 ಮೊಬೈಲ್ ಫೋನ್ಗಳನ್ನು ವಶಕ್ಕೆ ಪಡೆಯಲಾಗಿದೆ.
Comments are closed.