ಕುಂದಾಪುರ: ವಿಶ್ವ ಮಹಿಳಾ ದಿನಾಚರಣೆಯನ್ನು ಲಯನ್ಸ್ ಕ್ಲಬ್ ಕುಂದಾಪುರ ಅಮೃತಧಾರಾ ವತಿಯಿಂದ ಕುಂಭಾಸಿ ಕೊರಗ ಕಾಲನಿಯಲ್ಲಿ ಬುಡಕಟ್ಟು ಜನಾಂಗದ ಮಹಿಳೆಯರೊಂದಿಗೆ ಆಚರಿಸಲಾಯಿತು.
ಬಾಲ್ಯದಿಂದಲೂ ಬುಟ್ಟಿಗಳನ್ನು ನೇಯ್ದು ಸ್ವಾಭಿಮಾನದ ಜೀವನವನ್ನು ಸಾಗಿಸುತ್ತಿರುವ ಶ್ರೀಮತಿ ಲಚ್ಚು ಇವರು ನೇಯ್ದ ಬುಟ್ಟಿಗಳು ಶ್ರೀ ಕ್ಷೇತ್ರ ಆನೆಗುಡ್ಡೆ ಸೇರಿದಂತೆ ಎಲ್ಲಾ ದೇವಾಲಯಗಳಲ್ಲಿ ಕಾಣುವ ಹಣ್ಣು ಕಾಯಿ ಬಟ್ಟಿಗಳು ಇವರು ನೇಯ್ದ ಬುಟ್ಟಿಗಳೇ ಆಗಿವೆ. ಇವರನ್ನು ಲಯನ್ಸ್ ಕ್ಲಬ್ ವತಿಯಿಂದ ಶಾಲು ಹೊದಿಸಿ ಸೀರೆಫಲಪುಷ್ಷ ನೀಡಿ ಗೌರವಿಸಿ ವಿಶಿಷ್ಠವಾಗಿ ಆಚರಿಸಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಲಯನ್ಸ್ ಕ್ಲಬ್ ಅಧ್ಯಕ್ಷೆ ಸರಸ್ವತಿ ಗಣೇಶ್ ಪುತ್ರನ್ ಸಾಮಾಜಿಕ ಅನಿಷ್ಟಗಳ ಹೋಗಲಾಡಿಸಿ ಬುಡಕಟ್ಟು ಸಮಾಜದ ಮಹಿಳೆಯರನ್ನು ಮುಖ್ಯವಾಹಿನಿಗೆ ತರಲು ಸಂಘ-ಸಂಸ್ಥೆಗಳು ಹಾಗೂ ಸರಕಾರ ಪ್ರಾಮಾಣಿಕ ಪ್ರಯತ್ನ ಮಾಡಬೇಕು ಎಂದು ಅಭಿಪ್ರಾಯಪಟ್ಟರು.
ಕುಂದಾಪುರ ಕೊರಗ ಶ್ರೇಯೋಭಿವೃದ್ಧಿ ಅಧ್ಯಕ್ಷ ಗಣೇಶ ಕೊರಗ ಶುಭಾಶಂಸನೆಗೈದರು. ಕೊರಗ ಸಂಘಟನೆಯ ಮುಖಂಡರುಗಳಾದ ಶೇಖರ್ ಮರವಂತೆ ಗಣೇಶ್ ಬಾರ್ಕೂರು, ಮಕ್ಕಳ ಮನೆ ಕುಂಭಾಶಿಯ ಮೇಲ್ವಿಚಾರಕಿ ವಿನೀತಾ, ಕುಂಭಾಶಿ ಗ್ರಾಪಂ ಸದಸ್ಯೆ ರಾಜಶ್ರೀ ಮೊದಲಾದವರು ಉಪಸ್ಥಿತರಿದ್ದರು.
ಸಮಶ್ರೀ ಧನ್ಯ ಸ್ವಾಗತಿಸಿದರು. ಆಶಾಲತಾ ಶೆಟ್ಟಿ ವಂದಿಸಿದರು. ಕಾರ್ಯದರ್ಶಿ ಜಯಶೀಲ ಕಾಮತ್ ಕಾರ್ಯಕ್ರಮ ನಿರೂಪಿಸಿದರು.
Comments are closed.