ಕರ್ನಾಟಕ

ಸನ್ನಡತೆ ಆಧಾರದ ಮೇಲೆ ಜೀವಾವಾಧಿ ಶಿಕ್ಷೆ ಅನುಭವಿಸುತ್ತಿರುವ 166 ಕೈದಿಗಳ ಬಿಡುಗಡೆ: ಗೃಹ ಸಚಿವ ಆರಗ

Pinterest LinkedIn Tumblr

ಬೆಂಗಳೂರು: ರಾಜ್ಯದ ವಿವಿಧ ಕಾರಾಗೃಹಗಳಲ್ಲಿ ಜೀವಾವಧಿ ಶಿಕ್ಷೆಯನ್ನು ಅನುಭವಿಸುತ್ತಿರುವ ಒಟ್ಟು 166 ಕೈದಿಗಳನ್ನು ಬಿಡುಗಡೆ ಮಾಡಲಾಗುತ್ತಿದೆ.

ಸನ್ನಡತೆ ಆಧಾರದ ಮೇಲೆ ಘನತೆವೆತ್ತ ರಾಜ್ಯಪಾಲರು ಅವಧಿಪೂರ್ವ ಬಿಡುಗಡೆ ಮಾಡಲು ಅನುಮೋದನೆ ನೀಡಿದ್ದಾರೆ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಅವರು ವಿಧಾನಸಭೆಗೆ ತಿಳಿಸಿದರು.

ದಿನಾಂಕ 03/08/2021ರಂದು ನೀಡಿರುವ ಆದೇಶದಂತೆ ಬಾಕಿ ಉಳಿದಿರುವ 89 ಜೀವಾವಧಿ ಶಿಕ್ಷಾ ಕೈದಿಗಳ ಪ್ರಕರಣಗಳನ್ನು ಹಾಗೂ ಜುಲೈ 2021ರಲ್ಲಿ ಜರುಗಿದ ಸ್ಥಾಯಿ ಸಲಹಾ ಮಂಡಳಿ ಸಭೆಗಳಲ್ಲಿ ಶಿಫಾರಸುಗೊಂಡಿರುವ ಪ್ರಕರಣಗಳು ಸೇರಿದಂತೆ ಎಲ್.ಸಿ.ಆರ್ ಸಮಿತಿಯಲ್ಲಿ ಪರಿಶೀಲಿಸಿದ ನಂತರ ಒಟ್ಟು ಅರ್ಹ ಪ್ರಕರಣದ 166 ಜೀವಾವಧಿ ಶಿಕ್ಷಾ ಕೈದಿ ಪ್ರಕರಣಗಳನ್ನು ಸನ್ನಡತೆಯ ಆಧಾರದ ಮೇಲೆ ಉಳಿದ ಶಿಕ್ಷಾ ಅವಧಿಯನ್ನು ಮಾಫಿ ನೀಡುವುದರ ಮೂಲಕ ಅವಧಿಪೂರ್ವ ಬಿಡುಗಡೆಗೊಳಿಸಲು ಸಚಿವ ಸಂಪುಟದ ಮುಂದೆ ಮಂಡಿಸಿ ತದನಂತರ ರಾಜ್ಯಪಾಲರ ಅನುಮೋದನೆಗೆ ಸಲ್ಲಿಸಲಾಗಿತ್ತು.

2022ರ ಮಾರ್ಚ್ 2ರಂದು ರಾಜ್ಯಪಾಲರು ಸನ್ನಡತೆ ಆಧಾರದ ಮೇಲೆ ಬಿಡುಗಡೆಗೊಳಿಸಿದ್ದಾರೆ ಎಂದು ಸಚಿವ ಆರಗ ಜ್ಞಾನೇಂದ್ರ ವಿಧಾನಸಭೆಯಲ್ಲಿ ತಿಳಿಸಿದರು.

 

Comments are closed.