ಉಡುಪಿ: ದೇವಸ್ಥಾನದಲ್ಲಿ ಸಂಪ್ರದಾಯದಂತೆ ‘ಪ್ರದೋಷ ಪೂಜೆ’ ನಡೆಯುತ್ತದೆ ಹೊರತು ಸಲಾಂ ಮಂಗಳಾರತಿ ಅಲ್ಲ ಎಂದು ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಸ್ಥಾನ ಆಡಳಿತ ಮಂಡಳಿ ಅಧ್ಯಕ್ಷ ಕೆರಾಡಿ ಚಂದ್ರಶೇಖರ್ ಶೆಟ್ಟಿ ಅವರು ಸ್ಪಷ್ಟಪಡಿಸಿದ್ದಾರೆ.
ಪ್ರದೋಷ ಪೂಜೆಯನ್ನು ಸ್ಥಳೀಯವಾಗಿ ಕೆಲವರು ‘ಸಲಾಂ ಮಂಗಳಾರತಿ’ ಎಂದು ಕರೆಯುತ್ತಾರೆ. ಆದರೆ ಅಧಿಕೃತವಾಗಿ ಇದಕ್ಕೆ ಒಪ್ಪಿಗೆ ಸಿಕ್ಕಿಲ್ಲ ಮತ್ತು ದೇವಸ್ಥಾನದ ಆದೇಶದಲ್ಲಿ ಅದು ಇಲ್ಲ ಚಂದ್ರಶೇಖರ್ ಶೆಟ್ಟಿ ಅವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಈ ಆಚರಣೆಗೆ ಕೆಲವರು ‘ಸಲಾಂ ಮಂಗಳಾರತಿ’ ಎಂದು ಕರೆದಿದ್ದಕ್ಕೆ ವಿವಾದ ಸೃಷ್ಟಿಯಾದ ಹಿನ್ನೆಲೆಯಲ್ಲಿ ಶೆಟ್ಟಿ ಅವರು ಸ್ಪಷ್ಟನೆ ನೀಡಿದ್ದಾರೆ.
Comments are closed.