ಕರಾವಳಿ

ಉಡುಪಿ ಹಿರಿಯಡ್ಕದಲ್ಲಿ ಬೈಕ್ ಕದ್ದ ಆರೋಪಿಯನ್ನು 2 ಗಂಟೆಯೊಳಗೆ ಬಂಧಿಸಿದ ಪೊಲೀಸರು..!

Pinterest LinkedIn Tumblr

ಉಡುಪಿ: ಮೋಟರ್ ಸೈಕಲ್ ಕದ್ದು ಪರಾರಿಯಾಗಿದ್ದ ಆರೋಪಿಯನ್ನು ಹಿರಿಯಡ್ಕ ಠಾಣೆಗೆ ಪೊಲೀಸರು ಬಂಧಿಸಿರುವ ಘಟನೆ ನಡೆದಿದೆ.

ಬಂಧಿತ ಆರೋಪಿಯನ್ನು ಶಿವಮೊಗ್ಗ ಜಿಲ್ಲೆಯ ಆದಿ ಚುಂಚನಗಿರಿ ಹೈಸ್ಕೂಲು ಬಳಿಯ ನಿವಾಸಿ ಕುಮಾರ ಯಾನೆ ಟೈಲರ್ ಕುಮಾರ್ (37) ಎಂದು ಗುರುತಿಸಲಾಗಿದೆ.

ಆತ್ರಾಡಿ ಕಾಂಪ್ಲೆಕ್ಸ್ ನ ಮಹಾದೇವಿ ಸ್ಟೋರ್‌ನ ಎದುರು ಅದರ ಮಾಲಕ ಪ್ರಸನ್ನ ಕುಮಾರ್ ರವರು ತನ್ನ ಮೋಟಾರು ಸೈಕಲನ್ನು ನಿಲ್ಲಿಸಿ ಅಂಗಡಿಯಲ್ಲಿ ವ್ಯಾಪಾರ ಮಾಡಿಕೊಂಡಿರುವಾಗ, ಮೋಟಾರು ಸೈಕಲನ್ನು ಓರ್ವ ವ್ಯಕ್ತಿ ಕಳವು ಮಾಡಿ ಹಿರಿಯಡ್ಕ ಕಡೆಗೆ ಹೋಗಿದ್ದು, ಈ ಬಗ್ಗೆ ಹಿರಿಯಡ್ಕ ಠಾಣೆಗೆ ಪ್ರಸನ್ನ ಕುಮಾರ್ ರವರು ದೂರು ನೀಡಿದ ಮೇರೆಗೆ ಕೂಡಲೇ ಕಾರ್ಯಪ್ರವೃತ್ತರಾದ ಹಿರಿಯಡ್ಕ ಪೊಲೀಸರು ಅಂಜಾರು ಗ್ರಾಮದ ಓಂತಿಬೆಟ್ಟು ಎಂಬಲ್ಲಿ ನಾಕಾಬಂಧಿ ನಿರ್ಮಿಸಿ ವಾಹನ ತಪಾಸಣೆ ನಡೆಸುತ್ತಿರುವಾಗ ಒರ್ವ ಮೋಟಾರ್ ಸೈಕಲ್‌ ಸವಾರ ಆತ್ರಾಡಿ ಕಡೆಯಿಂದ ಸವಾರಿ ಮಾಡಿಕೊಂಡು ಬರುತ್ತಿದ್ದು ಆತನಲ್ಲಿ ಮೋಟಾರ್‌ ಸೈಕಲ್‌ ನಿಲ್ಲಿಸುವಂತೆ ಪೊಲೀಸರು ಸೂಚನೆ ನೀಡಿದರೂ ಆತನು ಮೋಟಾರ್‌ ಸೈಕಲ್ ನಿಲ್ಲಿಸದೆ ಪರಾರಿಯಾಗಲು ಪ್ರಯತ್ನಿಸಿದ್ದು, ಮೋಟಾರ್‌ ಸೈಕಲ್‌ನ್ನು ಪೊಲೀಸರು ಅಡ್ಡಗಟ್ಟಿ ಆತನನ್ನು ವಿಚಾರಿಸಿದಾಗ ಕಳವು ಮಾಡಿರುವುದನ್ನು ಒಪ್ಪಿಕೊಂಡಿದ್ದಾನೆ ಎನ್ನಲಾಗಿದೆ.

ಉಡುಪಿ ಎಸ್ಪಿ ವಿಷ್ಣುವರ್ಧನ, ಹೆಚ್ಚುವರಿ ಎಸ್ಪಿ ಸಿದ್ದಲಿಂಗಪ್ಪ ಮಾರ್ಗದರ್ಶನದಲ್ಲಿ, ಉಡುಪಿ ಉಪ ವಿಭಾಗದ ಪೊಲೀಸ್ ಉಪಾಧೀಕ್ಷಕ ಸುಧಾಕರ ನಾಯ್ಕ್, ಬ್ರಹ್ಮಾವರ ಪೊಲೀಸ್ ವೃತ್ತನಿರೀಕ್ಷಕ ಅನಂತ ಪದ್ಮನಾಭರವರ ನೇತೃತ್ವದಲ್ಲಿ ಹಿರಿಯಡ್ಕ ಪೊಲೀಸ್ ಠಾಣಾ ಪಿಎಸ್‌ಐ ಅನಿಲ್ ಬಿ ಎಮ್, ಪ್ರೊಫೆಶನರಿ ಪಿಎಸ್ಐ ಮಂಜುನಾಥ, ರವಿ, ಎಎಸ್ಐ ಗಂಗಪ್ಪ, ಪರಮೇಶ್ವರ, ಸಿಬ್ಬಂದಿಗಳಾದ ದಯಾನಂದ ಪ್ರಭು, ರಘು, ಕಾರ್ತಿಕ್, ಸಂತೋಷ್, ಶಿವರಾಜ್, ಭೀಮಪ್ಪ ಜಯಲಕ್ಷ್ಮೀ ಬ್ರಹ್ಮಾವರ ಪೊಲೀಸ್ ಠಾಣೆಯ ಪ್ರವೀಣ , ವೆಂಕಟರಮಣ, ಅಜ್ಮಲ, ಸಂತೋಷ, ಇತರರು ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.

Comments are closed.