UAE

ದುಬೈಯಲ್ಲಿ ಏ.17 ರಂದು ಡಿ.ಕೆ.ಎಸ್.ಸಿ ಯು.ಎ.ಇ ರಾಷ್ಟೀಯ ಸಮಿತಿ ವತಿಯಿಂದ ಬೃಹತ್ ಜಲಾಲಿಯ ಮಜ್ಲಿಸ್, ಇಫ್ತಾರ್ ಕೂಟ

Pinterest LinkedIn Tumblr

ದುಬೈ: ಡಿ.ಕೆ.ಎಸ್.ಸಿ ಯು.ಎ.ಇ ರಾಷ್ಟೀಯ ಸಮಿತಿ ವತಿಯಿಂದ ರಮಝಾನ್ ತಿಂಗಳಲ್ಲಿ ವರ್ಷಪ್ರತಿ ನಡೆಸುತ್ತಾ ಬರುತ್ತಿರುವ ಬೃಹತ್ ಇಫ್ತಾರ್ ಕೂಟವು ಏಪ್ರಿಲ್ 17 ರಂದು ಆದಿತ್ಯವಾರ ಅಸರ್ ನಮಾಝಿನ ನಂತರ ಘಂಟೆ 4.15 ಕ್ಕೆ ಸರಿಯಾಗಿ ಸಯ್ಯದ್ ತ್ವಾಹ ಬಾಪಾಕಿ ತಂಘಳ್ ರವರ ದುಃವಾ ದೊಂದಿಗೆ ಉಸ್ತಾದ್ ಇಬ್ರಾಹಿಂ ಸಖಾಫಿ ಕೆದಂಬಾಡಿ, ಉಸ್ತಾದ್ ಅಬ್ದುಲ್ ರಶೀದ್ ಹನೀಫಿ ಹಾಗು ಇನ್ನಿತರ ಸಾದಾತುಗಳು ಹಾಗು ಉಲಮಾಗಳವರ ನೇತೃತ್ವದಲ್ಲಿ ಮಹತ್ತರವಾದ ಜಲಾಲಿಯ ಮಜ್ಲಿಸ್ ನಡೆಯಲಿದ್ದು ರಮ್ಲಾನ್ ಮುಖ್ಯ ಪ್ರಭಾಷಣವು ಉಸ್ತಾದ್ ಮಹ್ಬೂಬುರ್ರಹ್ಮಾನ್ ಸಖಾಫಿ ಕಿನ್ಯ ರವರಿಂದ ನಡೆಯಲಿದೆ.

ಕಾರ್ಯಕ್ರಮವು ರಾಷ್ಟೀಯ ಸಮಿತಿ ಅಧ್ಯಕ್ಷರಾದ ಅಬ್ದುಲ್ ರಹಿಮಾನ್ ಸಜಿಪ ರವರ ಅದ್ಯಕ್ಷತೆಯಲ್ಲಿ ಡಿ.ಕೆ.ಎಸ್.ಸಿ ರಾಷ್ಟೀಯ ಸಮಿತಿ ಸಲಹೆಗಾರದ ಹಾಜಿ ಮೊಯಿದಿನ್ ಕುಟ್ಟಿ ಕಕ್ಕಿಂಜೆ, ಹಾಜಿ ಇಕ್ಬಾಲ್ ಕಣ್ಣಂಗಾರ್, ಹಾಜಿ.ಎಂ.ಇ.ಮೂಳೂರು, ಹಾಜಿ ಅಬ್ದುಲ್ ರಜಾಕ್ ದೀವ, ಹಾಜಿ ಅಬೂಸ್ವಾಲೀಹ್, ಹಾಜಿ. ಹಸನಬ್ಬ ಕೊಳ್ನಾಡ್, ಅಬ್ಬು ಹಾಜಿ ಕಿನ್ಯ, ಹಾಜಿ ಅಬ್ದುಲ್ಲಾ ಬೀಜಾಡಿ ಅವರುಗಳ ಉಪಸ್ಥಿತಿಯಲ್ಲಿ ಡಿ.ಕೆ.ಎಸ್.ಸಿ ರಾಷ್ಟೀಯ ಸಮಿತಿ, ಯುನಿಟ್ ಪದಾಧಿಕಾರಿಗಳ ಉಪಸ್ಥಿತಿಯಲ್ಲಿ ನಡೆಯಲಿದೆ.

ಕಾರ್ಯಕ್ರಮದಲ್ಲಿ ವಿವಿಧ ಸಂಘ ಸಂಸ್ಥೆಗಳ ನೇತಾರರು, ಉದ್ಯಮಿಗಳು, ಡಿ.ಕೆ.ಎಸ್.ಸಿ ಹಿತೈಷಿಗಳು, ಉಲಮಾಗಳು ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.

ಕಾರ್ಯಕ್ರಮವು ದುಬೈ ಅಲ್ ಗ್ವಿಸಸ್ ಲುಲು ಹೈಪರ್ ಮಾರ್ಕೆಟ್ ಹಿಂಬದಿಯಲ್ಲಿರುವ ಶಾಲಾ ಝೋನ್ ಬಳಿಯ WOODLEM PARK SCHOOL ನ ಆಡಿಟೋರಿಯಂ ನಲ್ಲಿ ಕ್ಲಪ್ತ ಸಮಯ ಅಸರ್ ನಮಾಝಿನ ಬಳಿಕ (4.15) ಕ್ಕೆ ನಡೆಯಲಿದ್ದು ಕುಟುಂಬ ಸಮೇತ ಈ ಮಹತ್ತರವಾದ ರಮ್ಲಾನ್ ತಿಂಗಳಲ್ಲಿ ನಡೆಯಲಿರುವ ಜಲಾಲಿಯ ಮಜ್ಲಿಸ್ ಹಾಗು ಇಫ್ತಾರ್ ಕೂಟಕ್ಕೆ ಆಗಮಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕಾಗಿ ಡಿ.ಕೆ .ಎಸ್.ಸಿ ಯು.ಎ.ಇ ಇಫ್ತಾರ್ ಕಮಿಟಿ ಚೆಯರ್ಮೆನ್ ಅಬ್ದುಲ್ ಲತೀಫ್ ತಿಂಗಳಾಡಿ ಜನರಲ್ ಕನ್ವಿನರ್ ಅಬ್ದುಲ್ ನವಾಜ್ ಕೋಟೆಕ್ಕಾರ್ ಹಾಗು ಪದಾಧಿಕಾರಿಗಳು ಹಾಗು ರಾಷ್ಟೀಯ ಸಮಿತಿ ಪದಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.

Comments are closed.