ಉಡುಪಿ: ಗುತ್ತಿಗೆದಾರ ಸಂತೋಷ್ ಪಾಟೀಲ್ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ತೀವ್ರಗೊಂಡಿದೆ. ಇದೊಂದು ಹೈ ಪ್ರೊಫೈಲ್ ಪ್ರಕರಣವಾದ ಕಾರಣ ಖುದ್ದು ಉಡುಪಿ ಎಸ್ಪಿ ಹೊಟೇಲಿನಲ್ಲಿ ಮೊಕ್ಕಾಂ ಹೂಡಿ ತನಿಖೆಯ ನೇತೃತ್ವ ವಹಿಸಿದ್ದಾರೆ.
ಪ್ರಕರಣದ ಬಗ್ಗೆ ಉಡುಪಿ ಎಸ್ಪಿ ವಿಷ್ಣುವರ್ಧನ್ ಪ್ರತಿಕ್ರಿಯಿಸಿದ್ದು, ಸಂತೋಷ್ ಪಾಟೀಲ್ ಮೃತಪಟ್ಟಿರುವುದು ಕಂಡುಬಂದಿದೆ. ಅವರ ಇಬ್ಬರು ಸ್ನೇಹಿತರನ್ನು ವಿಚಾರಣೆಗೆ ಒಳಪಡಿಸಿದ್ದೇವೆ. ಮಂಗಳೂರಿನಿಂದ ಎಫ್ಎಸ್ಎಲ್ ಟೀಮ್ ಬರುತ್ತಿದೆ.
ಮೃತರ ಸಂಬಂಧಿಕರು ಬರುತ್ತೇವೆ ಎಂದು ಹೇಳಿದ್ದಾರೆ.
ಸಂಬಂಧಿಕರು ಬಂದ ನಂತರ ಮುಂದಿನ ಕ್ರಮ ತೆಗೆದುಕೊಳ್ಳುತ್ತೇವೆ ಎಂದು ಹೇಳಿದ್ದಾರೆ.
ಲಾಡ್ಜಿನ ಕೊಠಡಿಯನ್ನು ಸೀಲ್ ಮಾಡಲಾಗಿದೆ ಎಂದು ಹೇಳಿರುವ ಎಸ್ಪಿ ವಿಷ್ಣುವರ್ದನ್
ಎಫ್ಎಸ್ಎಲ್ ನವರು ಮತ್ತು ಕುಟುಂಬಸ್ಥರು ಬಂದ ನಂತರ ರೂಮ್ ಓಪನ್ ಮಾಡುತ್ತೇವೆ. ಸಾವಿಗೆ ನಿಖರ ಕಾರಣ ಏನು ಎಂಬುದು ಎಫ್ ಎಸ್ ಎಲ್ ಬಂದ ನಂತರವೇ ಗೊತ್ತಾಗಲಿದೆ. ಉಡುಪಿಯಲ್ಲೇ ಮರಣೋತ್ತರ ಪರೀಕ್ಷೆ ಮಾಡುತ್ತೇವೆ. ಸಂಬಂಧಿಕರು ಬಂದನಂತರ ಮರಣೋತ್ತರ ಪರೀಕ್ಷೆ ನಡೆಯಲಿದೆ.
ಸಂಬಂಧಿಕರು ಘಟನಾ ಸ್ಥಳಕ್ಕೆ ಬರುತ್ತೇವೆ ಎಂದು ಮಾಹಿತಿ ನೀಡಿದ್ದಾರೆ.ಸಂಬಂಧಿಕರು ಬರುವ ತನಕ ನಾವು ಯಾವುದೇ ವಿಧಿ ವಿಧಾನ ಮಾಡುವುದಿಲ್ಲ ಎಂದು ಎಸ್ಪಿ ಮಾಹಿತಿ ನೀಡಿದ್ದಾರೆ.
Comments are closed.