ಕರಾವಳಿ

ಸಂತೋಷ್ ಸೂಸೈಡ್ ಕೇಸ್: ಪಂಚನಾಮೆ ಆರಂಭ, ವಿವಿಧ ಆಯಾಮಗಳಲ್ಲಿ ತನಿಖೆ- ಐಜಿಪಿ ದೇವಜ್ಯೋತಿ ರೇ

Pinterest LinkedIn Tumblr

ಉಡುಪಿ: ಸಚಿವ ಕೆ.ಎಸ್. ಈಶ್ವರಪ್ಪ ಅವರ ಮೇಲೆ 40 ಪರ್ಸೆಂಟ್ ಕಮಿಷನ್ ಆರೋಪ ಮಾಡಿದ ಬಳಿಕ ಉಡುಪಿಯ ಶಾಂಭವಿ ಲಾಡ್ಜ್’ನಲ್ಲಿ ಆತ್ಮಹತ್ಯೆ ಮಾಡಿಕೊಂಡ ಸ್ಥಿತಿಯಲ್ಲಿ ಪತ್ತೆಯಾಗಿದ್ದ ಬೆಳಗಾವಿ ಮೂಲದ ಗುತ್ತಿಗೆದಾರ ಸಂತೋಷ್ ಪಾಟೀಲ್ ಪ್ರಕರಣಕ್ಕೆ ಸಂಬಂಧಿಸಿದಂತೆ ಐಜಿಪಿ ದೇವಜ್ಯೋತಿ ರೇ ಪ್ರತಿಕ್ರಿಯೆ ನೀಡಿದ್ದಾರೆ.

ಉಡುಪಿಯಲ್ಲಿ ಮಾತನಾಡಿದ ಅವರು, ದೂರಿನ ಪ್ರಕಾರ ಕೆ.ಎಸ್ ಈಶ್ವರಪ್ಪ ಮತ್ತು ಇಬ್ಬರು ಆಪ್ತರ ಮೇಲೆ ಎಫ್ ಐಆರ್ ದಾಖಲು ಮಾಡಿದ್ದೇವೆ. ನಾವು ಈ ಮೊದಲೇ ಅಸಹಜ ಸಾವು ಪ್ರಕರಣ ದಾಖಲು ಮಾಡಿದ್ದೆವು ನಂತರ ಎಫ್ಐಆರ್ ಪ್ರಕಾರ ಆತ್ಮಹತ್ಯೆ ಪ್ರಚೋದನೆಯಡಿ ಪ್ರಕರಣ ದಾಖಲಾಗಿದೆ.

ಪಂಚನಾಮೆ ಪ್ರಕ್ರಿಯೆ ಕೆಲಕ್ಷಣಗಳ ಹಿಂದೆ ಆರಂಭವಾಗಿದ್ದು ಹತ್ತಿರದ ಸಂಬಂಧಿಕರ ಮುಂಭಾಗದಲ್ಲೇ ಎಲ್ಲಾ ಪರಿಶೀಲನೆ ಮಾಡ್ತಾ ಇದ್ದೇವೆ. ಡಿಜಿಟಲ್ ಮತ್ತು ಸಾಂದರ್ಭಿಕ ಸ್ಥಳದಲ್ಲಿ ಇರುವಂತ ಎಲ್ಲ ವಸ್ತುಗಳನ್ನು ವಶಪಡಿಸಿಕೊಳ್ಳುತ್ತಿದ್ದೇವೆ. ಕೆಎಂಸಿ ಮತ್ತು ಮಂಗಳೂರಿನ ಫೋರೆನ್ಸಿಕ್ ತಜ್ಞರು ಇದ್ದಾರೆ. ಇನ್ನು 3ರಿಂದ 4 ಗಂಟೆಗಳ ಕಾಲ ಪ್ರಕ್ರಿಯೆ ನಡೆಯಬಹುದು. ನಾವು ಎಲ್ಲಾ ರೀತಿಯ ಸೂಕ್ತ ತನಿಖೆಗಳನ್ನು ಮಾಡುತ್ತೇವೆ. ಸಂತೋಷ್ ಕುಟುಂಬಸ್ಥರು ಬಹಳ ನೊಂದಿದ್ದಾರೆ ಬೇಸರದಲ್ಲಿ ಇದ್ದಾರೆ ಅಪ್ಸೆಟ್ ಆಗಿದ್ದಾರೆ ಎಂದು ಪಶ್ಚಿಮ ವಲಯ ಐಜಿಪಿ ದೇವಜ್ಯೋತಿ ರೇ ಹೇಳಿಕೆ ನೀಡಿದ್ದಾರೆ.

Comments are closed.