ಬೆಳಗಾವಿ: ಗುತ್ತಿಗೆದಾರ ಸಂತೋಷ್ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿ ಸಂತೋಷ್ ಮನೆಗೆ ಕಾಂಗ್ರೆಸ್ ನಾಯಕರು ಭೇಟಿ ನೀಡಿದ್ದಾರೆ. ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸುರ್ಜೇವಾಲ, ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್, ವಿಪಕ್ಷ ನಾಯಕ ಸಿದ್ದರಾಮಯ್ಯ, ಈಶ್ವರ್ ಖಂಡ್ರೆ, ಎಂ.ಬಿ ಪಾಟೀಲ್, ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ಮೊದಲಾದವರು ಭೇಟಿಯಾಗಿ ಸಂತೋಷ್ ಪತ್ನಿ ಹಾಗೂ ತಾಯಿಗೆ ಸಾಂತ್ವನ ಹೇಳಿದ್ದಾರೆ.
ಭೇಟಿ ಬಳಿಕ ಕೈ ನಾಯಕರು ಸುದ್ದಿಗೋಷ್ಠಿ ನಡೆಸಿದ್ದಾರೆ. ಸಂತೋಷ್ ತಾಯಿ, ಪತ್ನಿ ಈ ಬಗ್ಗೆ ಎಲ್ಲಾ ಮಾಹಿತಿ ನೀಡಿದ್ದಾರೆ. ರಾಜ್ಯದಲ್ಲಿ ಮುಂದೆ ಇಂತಹ ಘಟನೆ ನಡೆಯಬಾರದು. ಪ್ರಧಾನಿಗೂ ದೂರು ನೀಡಿದ್ದರೂ ಸಂತೋಷ್‌ಗೆ ನ್ಯಾಯ ಸಿಕ್ಕಿಲ್ಲ. ನಿಮಗೆ ನ್ಯಾಯ ಕೊಡಿಸುವುದಾಗಿ ನಾವು ಭರವಸೆ ನೀಡಿದ್ದೇವೆ. ಕೂಡಲೇ ಸಚಿವ ಕೆ.ಎಸ್. ಈಶ್ವರಪ್ಪರನ್ನು ಬಂಧಿಸಲಿ ಎಂದು ಡಿ.ಕೆ. ಶಿವಕುಮಾರ್ ಹೇಳಿದ್ದಾರೆ. ಭ್ರಷ್ಟಾಚಾರ ಕಾಯ್ದೆಯಡಿ ಕೇಸ್ ದಾಖಲಿಸಿ ಬಂಧಿಸಲು ಆಗ್ರಹ ವ್ಯಕ್ತಪಡಿಸಿದ್ದಾರೆ.
ಸಂತೋಷ್ ಕುಟುಂಬಕ್ಕೆ 1 ಕೋಟಿ ರೂ. ಪರಿಹಾರ ನೀಡಲಿ. ಸಂತೋಷ್ ಪತ್ನಿ ಜಯಶ್ರೀಗೆ ಸರ್ಕಾರಿ ನೌಕರಿ ಕೊಡಲಿ. ತಾತ್ಕಾಲಿಕವಾಗಿ ನಾವು ಜಯಶ್ರೀಗೆ ನೌಕರಿ ನೀಡುತ್ತೇವೆ. ಕೆಪಿಸಿಸಿಯಿಂದ ಸಂತೋಷ್ ಕುಟುಂಬಕ್ಕೆ 11 ಲಕ್ಷ ರೂ. ನೀಡ್ತೇವೆ. ಕೂಡಲೇ ಸಂತೋಷ್ ಮಾಡಿಸಿದ್ದ ಕಾಮಗಾರಿ ಬಿಲ್ ಪಾವತಿಸಲಿ ಎಂದು ಬೆಳಗಾವಿಯಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಒತ್ತಾಯ ಮಾಡಿದ್ದಾರೆ.
ಕಿರುಕುಳದಿಂದಲೇ ಸಂತೋಷ್ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಸಂತೋಷ್ ತುಂಬಾ ಧೈರ್ಯವಂತ, ಬಿಜೆಪಿಗೆ ಆಸ್ತಿಯಾಗಿದ್ದ. ಕಿರುಕುಳದಿಂದ ಬೇಸತ್ತು ಸಿಎಂ ಭೇಟಿಗೆ ಉಡುಪಿಗೂ ಹೋಗಿದ್ದ. ಕಿರುಕುಳದಿಂದಲೇ ಸಂತೋಷ್ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಇದಕ್ಕೆ ಗುತ್ತಿಗೆದಾರರ ಸಂಘದ ಅಧ್ಯಕ್ಷ ಕೆಂಪಣ್ಣ ಹೇಳಿಕೆ ಸಾಕ್ಷಿ. ನಾವ್ಯಾರೂ ರಾಜಕೀಯ ಮಾಡುತ್ತಿಲ್ಲ ಎಂದು ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.
ಸಂತೋಷ್ ಆತ್ಮಹತ್ಯೆಗೆ ಸಚಿವ ಈಶ್ವರಪ್ಪ ನೇರ ಕಾರಣ. ಕೂಡಲೇ ಸಚಿವ ಕೆ.ಎಸ್. ಈಶ್ವರಪ್ಪರನ್ನು ಬಂಧಿಸಲಿ. 40 ಪರ್ಸೆಂಟ್ ಕಮಿಷನ್ ಕೇಳಿದ್ದ ಬಗ್ಗೆ ಉಲ್ಲೇಖ ಮಾಡಲಾಗಿದೆ. ಭ್ರಷ್ಟಾಚಾರ ಕಾಯ್ದೆಯಡಿ ಕೇಸ್ ದಾಖಲಿಸಿ ಬಂಧಿಸಲಿ. ಈಶ್ವರಪ್ಪರನ್ನು ಬಂಧಿಸಿ ನಿಷ್ಪಕ್ಪಪಾತ ತನಿಖೆ ನಡೆಸಲಿ ಎಂದು ಸಂತೋಷ್ ಮನೆಗೆ ಭೇಟಿ ಬಳಿಕ ಸಿದ್ದರಾಮಯ್ಯ ಒತ್ತಾಯ ಮಾಡಿದ್ದಾರೆ.
ಸಂತೋಷ್‌ರದ್ದು ಆತ್ಮಹತ್ಯೆಯಲ್ಲ, ಇದು ನೇರಾನೇರ ಕೊಲೆ. ಕರ್ನಾಟಕದಲ್ಲಿ ಬಿಜೆಪಿಯಿಂದ ಅವರದ್ದೇ ಕಾರ್ಯಕರ್ತರ ಲೂಟಿ ಮಾಡಲಾಗುತ್ತಿದೆ. ಬಿಜೆಪಿ ಕಾರ್ಯಕರ್ತನ ಹತ್ಯೆಯಾಗಿದ್ದರೂ ಸರ್ಕಾರ ಬೆಂಬಲ ಇದೆ. ಆರೋಪಿ ಈಶ್ವರಪ್ಪ ಬೆಂಬಲಕ್ಕೆ ಸಿಎಂ, ಸರ್ಕಾರ ನಿಂತಿದೆ. ಭ್ರಷ್ಟಾಚಾರದಲ್ಲಿ ಸಿಎಂ ಬೊಮ್ಮಾಯಿ ಸಹ ಶಾಮೀಲಾಗಿದ್ದಾರೆ. ಆರೋಪಿ ಸಚಿವ ಈಶ್ವರಪ್ಪರನ್ನು ಕೂಡಲೇ ಜೈಲಿಗೆ ಹಾಕಲಿ ಎಂದು ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸುರ್ಜೇವಾಲಾ ಹೇಳಿದ್ದಾರೆ.
Comments are closed.