ಶಿವಮೊಗ್ಗ: ಯಾರಿಗೂ ಇರಿಸು ಮುರಿಸು ಆಗಬಾರದು ಎಂಬ ಹಿನ್ನೆಲೆ ನಾಳೆ (ಏ.15) ಸಚಿವ ಸ್ಥಾನಕ್ಕೆ ರಾಜಿನಾಮೆ ನೀಡಲಿರುವೆ ಎಂದು ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಸಚಿವ ಕೆ.ಎಸ್ ಈಶ್ವರಪ್ಪ ತಿಳಿಸಿದ್ದಾರೆ.
ನಾಳೆ ಸಂಜೆ ಮುಖ್ಯಮಂತ್ರಿಗಳ ಬಳಿ ತೆರಳಿ ರಾಜಿನಾಮೆ ಸಲ್ಲಿಸುವೆ ಎಂದು ಈಶ್ವರಪ್ಪ ಶಿವಮೊಗ್ಗದಲ್ಲಿ ನಡೆಸುತ್ತಿರುವ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.
ನಾನು ಒಂದು ಒಂದೇ ತಪ್ಪು ಮಾಡಿಲ್ಲ. ನನ್ನ ತಪ್ಪಿದ್ದರೆ ಸಾಬೀತಾಗಲಿ. ಬೊಮ್ಮಾಯಿಯವರ ಸಚಿವ ಸಂಪುಟದಲ್ಲಿ ಸಚಿವನಾಗಿ ಪ್ರಾಮಾಣಿಕವಾಗಿ ಕೆಲಸ ಮಾಡಿರುವೆ. ನನ್ನಿಂದ ಯಾರಿಗೂ ಮುಜುಗರ, ಕಳಂಕ ಬೇಡ ಎಂದು ಈ ತೀರ್ಮಾನಕ್ಕೆ ಬಂದಿರುವೆ. ಈಮೊದಲೇ ರಾಜಿನಾಮೆ ನೀಡುತ್ತಿದ್ದೆ. ಆದರೆ ಕೆಲ ವಿಚಾರದಿಂದ ನಿನ್ನೆ ಕೊಟ್ಟಿರಲಿಲ್ಲ. ಆರೋಪ ಮುಕ್ತನಾಗುವೆ. ನಾನು ನಂಬಿದ ಚೌಡೇಶ್ವರಿ ದೇವಿ ಕಾಯುತ್ತಾಳೆ ಎಂದವರು ಹೇಳಿದ್ದಾರೆ.
ಸಚಿವ ಕೆ.ಎಸ್ ಈಶ್ವರಪ್ಪ ಮೇಲೆ ಮೊನ್ನೆಯಷ್ಟೇ ಉಡುಪಿಯಲ್ಲಿ ಆತ್ಮಹತ್ಯೆಗೆ ಶರಣಾದ ಗುತ್ತಿಗೆದಾರ ಬೆಳಗಾವಿ ಮೂಲದ ಸಂತೋಷ್ ಪಾಟೀಲ್ ಲಂಚದ ಆರೋಪ ಮಾಡಿದ್ದು ಆತ್ಮಹತ್ಯೆಗೆ ಸಚಿವರೇ ಕಾರಣ ಎಂದು ವಾಟ್ಸಾಪ್ ಮೂಲಕ ಡೆತ್ ನೋಟ್ ಬರೆದು ರವಾನಿಸಿದ್ದರು. ಸಚಿವ ಈಶ್ವರಪ್ಪ ರಾಜಿನಾಮೆ ಹಾಗೂ ಬಂಧನದ ಬಗ್ಗೆ ಕಾಂಗ್ರೆಸ್ ಈವರೆಗೂ ಪ್ರತಿಭಟನೆ ನಡೆಸುತ್ತಿದೆ.
Comments are closed.