ಕರಾವಳಿ

ಸರ್ವರ ಬೆಂಬಲದಿಂದ ಭಾರತೀಯ ರೆಡ್ ಕ್ರಾಸ್ ಸೊಸೈಟಿಗೆ ಉತ್ತಮ ಶಾಖೆ ಪ್ರಶಸ್ತಿ:ಸಿ.ಎ ಶಾಂತಾರಾಮ್ ಶೆಟ್ಟಿ

Pinterest LinkedIn Tumblr

ಮಂಗಳೂರು : ಭಾರತೀಯ ರೆಡ್‌ಕ್ರಾಸ್ ಸಂಸ್ಥೆ, ದ.ಕ ಜಿಲ್ಲಾ ಶಾಖೆ ಇದರ ವಾರ್ಷಿಕ ಮಹಾಸಭೆಯು ದ.ಕ ಜಿಲ್ಲಾಧಿಕಾರಿ ಕಛೇರಿ ಸಭಾಂಗಣದಲ್ಲಿ ನಡೆಯಿತು. ಈ ಸಭೆಯ ಅಧ್ಯಕ್ಷತೆಯನ್ನು ಜಿಲ್ಲಾ ಪಂಚಾಯತ್ ಕಾರ್ಯನಿರ್ವಹಣಾಧಿಕಾರಿ ಹಾಗೂ ರೆಡ್‌ಕ್ರಾಸ್‌ನ ಉಪಾಧ್ಯಕ್ಷರಾದ ಡಾ.ಕುಮಾರ, ಐ‌ಎ‌ಎಸ್ ಇವರು ವಹಿಸಿಕೊಂಡಿದ್ದರು.

ಪ್ರಸ್ತುತ ಇರುವ ಆಡಳಿತ ಮಂಡಳಿಯ ಮೂರು ವರ್ಷದ ಅವಧಿ ಮುಗಿದಿದ್ದು, ಸರ್ವ ಸದಸ್ಯರಲ್ಲಿ ಚರ್ಚಿಸಿ, ಪ್ರಜಾಪ್ರಭುತ್ವತೆ ಮತ್ತು ಪಾರದರ್ಶಕತೆಯನ್ನು ಗಮನದಲ್ಲಿಟ್ಟುಕೊಂಡು ಸಭೆಯ ಅಧ್ಯಕ್ಷರಾದ ಡಾ.ಕುಮಾರ ಅವರು ಮುಂದಿನ ಆಡಳಿತ ಮಂಡಳಿಯ ಪ್ರಕ್ರಿಯಕ್ಕೆ 45 ದಿನಗಳೊಳಗೆ ಚುಣಾವಣೆ ಆಗಬೇಕೆಂದು ಘೋಷಿಸಿದರು.

ಆಡಳಿತ ಮಂಡಳಿಯ ನಿರ್ಗಮನ ಛೇರ್ಮನ್ ಸಿ.ಎ ಶಾಂತಾರಾಮ್ ಶೆಟ್ಟಿ ಇವರು ಮಾತಾನಾಡಿ, ರೆಡ್‌ಕ್ರಾಸ್ ಸದಸ್ಯರ ತನು ಮನ ಧನದ ಬೆಂಬಲದಿಂದ ಕಳೆದ ಮೂರು ವರ್ಷಗಳಿಂದ ಉತ್ತಮ ಶಾಖೆ ಪ್ರಶಸ್ತಿಯನ್ನು ನಮ್ಮ ಜಿಲ್ಲಾ ರೆಡ್‌ಕ್ರಾಸ್ ಸಂಸ್ಥೆಗೆ ಲಭಿಸಿದ್ದು, ಇದಕ್ಕೆಲ್ಲಾ ಕಾರಣ ಭೂತರು ರೆಡ್‌ಕ್ರಾಸ್ ಸದಸ್ಯರು, ರಕ್ತದಾನಿಗಳು, ರಕ್ತದಾನ ಶಿಬಿರ ಆಯೋಜಕರು ಮತ್ತು ಸ್ವಯಂ ಸೇವಕರಾಗಿರುತ್ತಾರೆ ಎಂದರು.

ಶತಮಾನೋತ್ಸವ ಕಟ್ಟಡವು ಕಾಮಗಾರಿ ಹಂತದಲ್ಲಿದ್ದು ಇದನ್ನು ಸಂಪೂರ್ಣ ಹಾಗೂ ಸುಸಜ್ಜಿತವಾಗಿ ಮಾಡಲು ಮುಂದೆ ಆಯ್ಕೆಯಾಗುವ ಆಡಳಿತ ಮಂಡಳಿಗೆ ಸಂಪೂರ್ಣ ಸಹಾಯ ಮಾಡುವುದಾಗಿ ಹೇಳಿದರು.

ಸಮಾರಂಭದ ಆದ್ಯಕ್ಷತೆಯನ್ನು ವಹಿಸಿದ್ದ ಡಾ. ಕುಮಾರ ಮಾತನಾಡಿ, ರೆಡ್‌ಕ್ರಾಸ್‌ನ ನಿತ್ಯ ನಿರಂತರ ಕಾರ್ಯ ಚಟುವಟಿಕೆಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸುತ್ತಾ ರೆಡ್‌ಕ್ರಾಸ್ ಸಂಸ್ಥೆ ಇನ್ನೂ ಬೆಳೆಯಲಿ ಹಾಗೂ ಶತಮಾನೋತ್ಸವ ಕಟ್ಟಡವು ಶೀಘ್ರದಲ್ಲಿ ಶುಭಾರಂಭವಾಗಲಿ ಮತ್ತು ಹೆಚ್ಚು ಹೆಚ್ಚು ಸದಸ್ಯರನ್ನು ರೆಡ್‌ಕ್ರಾಸ್ ಸಂಸ್ಥೆಗೆ ನೋಂದಣೆ ಮಾಡಿಕೊಳ್ಳಬೇಕೆಂದು ಸರ್ವ ಸದಸ್ಯರಿಗೆ ಮನವಿ ಮಾಡಿದರು.

ವೇದಿಕೆಯಲ್ಲಿ ವೈಸ್ ಛೇರ್ಮನ್ ಬಿ. ನಿತ್ಯಾನಂದ ಶೆಟ್ಟಿ, ಕೋಶಾಧಿಕಾರಿ ಆರ್ಚಿಬಾಲ್ಡ್ ಮಿನೇಜಸ್, ಗೌರವ ಕಾರ್ಯದರ್ಶಿ ಕುಸುಮಾಧರ್ ಬಿ.ಕೆ ಉಪಸ್ಥಿತರಿದ್ದರು.

Comments are closed.