ಕುಂದಾಪುರ: ಕುಂದೇಶ್ವರ ಯುವಜನ ಸಭಾ ಹಾಗೂ ಗಣೇಶೋತ್ಸವ ಸಮಿತಿ ಇವರ ವತಿಯಿಂದ ಕುಂದೇಶ್ವರ ದೇವಸ್ಥಾನದಲ್ಲಿ ಮಹಾರುದ್ರಯಾಗ ಸಂಪನ್ನಗೊಂಡಿತು.
ಮಹಾರುದ್ರ ಯಾಗದ ಅಂಗವಾಗಿ ಪುತ್ತೂರು ಜಗದೀಶ ಆಚಾರ್ಯ ಮತ್ತು ಅವರ ಬಳಗದ ವತಿಯಿಂದ ಸೋಮವಾರ ರಾತ್ರಿ ನಡೆದ ಸಂಗೀತ ಕಾರ್ಯಕ್ರಮದ ಸಭಾ ವೇದಿಕೆಯಲ್ಲಿ ಶ್ರೀ ಕುಂದೇಶ್ವರ ದೇವಸ್ಥಾನದ ಅಭಿವೃದ್ಧಿಯಲ್ಲಿ ವಿಶೇಷ ಮುತುವರ್ಜಿ ವಹಿಸಿ ಕೆಲಸ ಮಾಡುತ್ತಿರುವ ದೇವಸ್ಥಾನದ ವ್ಯವಸ್ಥಾಪನ ಸಮಿತಿ ಅಧ್ಯಕ್ಷರಾದ ಕೃಷ್ಣಾನಂದ ಚಾತ್ರ ದಂಪತಿಗಳನ್ನು ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ಸಂಸ್ಥೆಯ ಅಧ್ಯಕ್ಷರಾದ ಸಚಿನ್ ನಕ್ಕತ್ತಾಯ, ಉಪಾಧ್ಯಕ್ಷರಾದ ಗಣೇಶ್ ಕುಂದೇಶ್ವರ, ಕೋಶಾಧಿಕಾರಿ ಗಣೇಶ, ಸಲಹೆಗಾರರಾದ ಹೃದಯ ಶೆಟ್ಟಿ ಮತ್ತಿತರು ಉಪಸ್ಥಿತರಿದ್ದರು.
Comments are closed.