(ವರದಿ- ಯೋಗೀಶ್ ಕುಂಭಾಸಿ)
ಕುಂದಾಪುರ: ಜಮೀರ್ ಅಹಮದ್ ಎನ್ನುವ ಶಾಸಕರು ಹೇಳುವ ತರದ ವ್ಯಕ್ತಿಗಳು ನಮ್ಮಲ್ಲೂ ಇದ್ದಾರೆ. ಕಲ್ಲು ಹೊಡೆದರೆ, ಬೆಂಕಿ ಹಚ್ಚಿದರೆ ಅವರಿಗೆ ಓದು ಬರಹ ಬರಲ್ಲ, ಏನೂ ಗೊತ್ತಿಲ್ಲ ಎಂದು ಜಮೀರ್ ಹೇಳುತ್ತಾರೆ. ಅಂತವರು ನಮ್ಮಲ್ಲೂ ಇದ್ದಾರೆ. ಇವರಿಗೆ ಅ ಆ ಇ ಬರೋದಿಲ್ಲ. ನಾವು ಅದರಿಂದ ನೊಂದು, ಹಿಂಸೆಪಟ್ಟು ಹಿಂದೂ ಧರ್ಮದ ಪರ ಕೆಲಸ ಮಾಡುವುದು ನಿಲ್ಲಿಸುವುದಿಲ್ಲ, ಯಾರ ಮೇಲೂ ಹಗೆ ಸಾಧಿಸುವುದಿಲ್ಲ ಎಂದು ಎಂದು ರಿಷಿಕುಮಾರ (ಕಾಳಿ) ಸ್ವಾಮೀಜಿ ಹೇಳಿದ್ದಾರೆ.
ಉಡುಪಿ ಜಿಲ್ಲೆ ಬೈಂದೂರು ತಾಲೂಕಿನ ಕೊಲ್ಲೂರಿನಲ್ಲಿ ಸೋಮವಾರ ಮಾತನಾಡಿದ ಅವರು, ಮಸಿ ಬಳಿದವರಿಗೆ ಏನು ಮಾಡಲಾಗುವುದಿಲ್ಲ. ಕೊಲ್ಲೂರು ಕ್ಷೇತ್ರದಲ್ಲಿ ನಿಂತು ಹೇಳುತ್ತಿದ್ದು ಬಂದವರೆಲ್ಲ ಕುಡಿದು ಬಂದು ತೂರಾಡಿದ್ದರು. ಕೆಂಪೇಗೌಡ, ಕುವೆಂಪು ಬಗ್ಗೆ ಮಾತಾಡಿದ್ದಾರೆ ಎಂದು ಹೇಳಿದ್ದಾರೆ. ಯಾವುದೇ ಕ್ಲಿಪ್ಪಿಂಗ್ ನೀಡಿ ಎಂದರೆ ನೀಡಿಲ್ಲ. ಸುಮ್ಮನೇ ಉದ್ದೇಶಪೂರ್ವಕವಾಗಿ ಮಾಡಿದ ಕೆಲಸದ ಬಗ್ಗೆ ಚರ್ಚೆ ಮಾಡುತ್ತಾ ಹೋದರೆ ಮುಂದೆ ಹೋಗಲು ಆಗುವುದಿಲ್ಲ. ಮಸಿ ಬಳಿದರೆ ಸ್ನಾನ ಮಾಡಿ ಸರಿಪಡಿಸಿಕೊಳ್ಳಬಹುದು. ಆದರೆ ಚಾಕು ಚುಚ್ಚಿದರೆ ಏನು ಮಾಡುವುದು? ಸರಕಾರ ಎಲ್ಲವನ್ನೂ ಗಮನಿಸುತ್ತಿದ್ದು ಅದರ ಕೆಲಸ ಮಾಡುತ್ತದೆ ಎಂದರು.
ಅನ್ಯ ಧರ್ಮೀಯರ ಅಂಗಡಿಗಳು ನಮ್ಮ ದೇವಾಲಯಗಳ ಜಾಗದಲ್ಲಿ ಇರಬಾರದು ಎಂಬುದು 2002ರಲ್ಲಿ ಅಂದಿನ ಸಿಎಂ ಎಸ್.ಎಂ ಕೃಷ್ಣ ಅವರ ಕಾಲದಲ್ಲಿ ಮಾಡಿದ ಕಾನೂನು. ಅದನ್ನು ತೆಗೆಯಿರಿ, ಇದನ್ನು ತೆಗೆಯಿರಿ ಎಂದು ಈವರೆಗೆ ನಾವು ಕೇಳಿರಲಿಲ್ಲ.ಅವರೇ ಕೆಲವು ಸಮಸ್ಯೆ ಸೃಷ್ಟಿಸಿಕೊಂಡು ಸರಕಾರ, ನ್ಯಾಯಾಲಯದ ಆದೇಶ ಮೀರಿ ಅಂಗಡಿ ಬಾಗಿಲು ಮುಚ್ಚಿ ಧೋರಣೆ ತೋರಿದ್ದು ಆ ಬಳಿಕ ನಾವು ದೇವಾಲಯದಿಂದ ಅನ್ಯಧರ್ಮೀಯರ ಅಂಗಡಿ ದೇವಸ್ಥಾನದ ಆವರಣದಿಂದ ದೂರವಿರಲಿ ಎಂದು ಪ್ರತಿಕ್ರಿಯೆ ನೀಡಿದ್ದೇವೆ. ಮಾಂಸ, ಬಜ್ಜಿ ತಿಂದು ಪವಿತ್ರ ಕ್ಷೇತ್ರದಲ್ಲಿ ಅಂಗಡಿ ಇಟ್ಟರೇ ದೈವ ದೇವರುಗಳ ವ್ಯವಸ್ಥೆಗೆ ಹಿಂಸೆಯಾಗುತ್ತದೆ. ದೇವಸ್ಥಾನದ ನಿಗದಿತ ಆವರಣದ ಹೊರಗೆ ದೂರದಲ್ಲಿ ಅಂಗಡಿ ಇಡುವ ಬಗ್ಗೆ ತಕಾರರು ಇಲ್ಲ ಎಂದರು.
ಅಜಾನ್ ಬಳಕೆಗೂ ಹಾಗೂ ಮಠಮಂದಿರಗಳಲ್ಲಿ ಧ್ವನಿವರ್ಧಕ ಬಳಕೆ ವಿಚಾರದಲ್ಲಿ ಬಹಳಷ್ಟು ವ್ಯತ್ಯಾಸವಿದೆ. ಹಾಗೆಯೇ ಯಕ್ಷಗಾನದಲ್ಲಿ ಮೈಕ್ ಬಳಸಿದರೂ ಕೂಡ ಸೀಮೀತವಾಗಿ ಪ್ರೇಕ್ಷಕರಿಗೆ ಕೇಳುವಂತೆ ಹಾಗೂ ದೇವಸ್ಥಾನಗಳಲ್ಲೂ ಕೂಡ ನಿಗದಿತ ಪ್ರಮಾಣದ ಧ್ವನಿವರ್ಧಕ ಬಳಸಲಾಗುತ್ತದೆ. ಬೆಂಗಳೂರಿನ ನಗರದಲ್ಲಿ ನೂರು ಮೀಟರ್ ವ್ಯಾಪ್ತಿಯೊಳಗೆ ಬಹಳಷ್ಟು ಮಸೀದಿಗಳಿದೆ. ಅಲ್ಲಿ ಧ್ವನಿವರ್ಧಕ ಪರಿಮಿತಿ ಕಡಿಮೆ ಮಾಡುವುದು ಕಷ್ಟಸಾಧ್ಯ. ಬಾಲಗಂಗಾಧರನಾಥ್ ಸ್ವಾಮೀಜಿ ಮೇಲ್ಸೇತುವೆ ಮೇಲೆ ನಿಂತು ನೋಡಿದರೆ ಬೆಂಗಳೂರು ಚಿತ್ರಣ ಗೊತ್ತಾಗುತ್ತದೆ. ಮೈಕ್ ವಿಚಾರದಲ್ಲಿ ನಗರ ಪ್ರದೇಶ ರೋಧನೆ ಅನುಭವಿಸುತ್ತಿದೆ. ಆದೇಶದ ಬಳಿಕ ಅವರು ನಿಗದಿತ ವೇಳೆ ಧ್ವನಿವರ್ಧಕ ಬಳಕೆ ನಿಲ್ಲಿಸಿದ್ದು ಸ್ವಾಗತಾರ್ಹ ವಿಚಾರ ಎಂದರು.
ಇನ್ನು ಬೈಂದೂರು ವಿಧಾನಸಭಾ ಕ್ಷೇತ್ರದಲ್ಲಿ ಈ ಹಿಂದೆಂದೂ ಕಾಣದ ಅಭಿವೃದ್ಧಿ ಆಗಿರುವುದು ಕೇಳಿ ಸಂತಸವಾಗಿದೆ. ಮೂಕಾಂಬಿಕಾ ಕ್ಷೇತ್ರದಲ್ಲಿ ಬಹಳಷ್ಟು ಅಭಿವೃದ್ಧಿ ಆಗಿದೆ. ಕೆಲಸ ಮಾಡುವರನ್ನು ಆಯ್ಕೆ ಮಾಡಿ. ಕಳಪೆ ಕಾಮಗಾರಿ ವಿರುದ್ಧ ಧ್ವನಿ ಎತ್ತುವ ಶಾಸಕ ಬಿ.ಎಂ ಸುಕುಮಾರ ಶೆಟ್ಟಿಯಂತವರು ನಾಡಿಗೆ ಬೇಕಾಗಿದೆ ಎಂದರು.
Comments are closed.