ಕರಾವಳಿ

ಉಪ್ಪಿನಕುದ್ರು ಶಿಲ್ಪಾ ದೇವಾಡಿಗ ಆತ್ಮಹತ್ಯೆ ಕೇಸ್: ಆರೋಪಿ ಅಜೀಝ್‌ ಅರೆಸ್ಟ್

Pinterest LinkedIn Tumblr

ಕುಂದಾಪುರ: ತಾಲೂಕಿನ ತಲ್ಲೂರು ಗ್ರಾ.ಪಂ ವ್ಯಾಪ್ತಿಯ ಉಪ್ಪಿನಕುದ್ರು ಶಿಲ್ಪಾ ದೇವಾಡಿಗ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿ, ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಆರೋಪಿ ದಂಪತಿಗಳ ಪೈಕಿ ಅಜೀಝ್‌ ಎಂಬಾತನನ್ನು ಕುಂದಾಪುರ ಪೊಲೀಸರು ಬಂಧಿಸಿದ್ದಾರೆ.

ಶಿಲ್ಪಾ ತಲ್ಲೂರಿನ ಜವಳಿ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದಳು. ಟ್ಯುಟೋರಿಯಲ್ ಹೋಗುವ ಸಮಯದಲ್ಲೇ ಶಿಲ್ಪಾ ಸ್ನೇಹ ಬೆಳೆಸಿಕೊಂಡಿದ್ದು ಪ್ರೇಮದ ನಾಟಕವಾಡಿದ್ದ ಅಜೀಝ್ ಆಕೆಯನ್ನು ಲೈಂಗಿಕವಾಗಿ ಬಳಸಿಕೊಂಡು ವಿಡಿಯೋ, ಫೋಟೋಗಳನ್ನು ಮಾಡಿಕೊಂಡಿದ್ದ. ಬಳಿಕ ಮತಾಂತರವಾಗಿ ಮದುವೆ ಮಾಡುಕೊಳ್ಳುವಂತೆ ಶಿಲ್ಪಾಗೆ ಒತ್ತಾಯ ಮಾಡಿದ್ದ ಎನ್ನಲಾಗಿದ್ದು ಕಳೆದ ವಾರ ಶಿಲ್ಪಾ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಳು. ಬಳಿಕ ಮಣಿಪಾಲ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ಫಲಿಸದೆ ಶಿಲ್ಪಾ ಸಾವನ್ನಪ್ಪಿದ್ದಳು.

ಶಿಲ್ಪಾ ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಆರೋಪದಲ್ಲಿ ಅಜೀಝ್ ಹಾಗೂ ಆತನ ಪತ್ನಿ ಸಲ್ಮಾ ವಿರುದ್ದ ಮೃತಳ ಸಹೋದರ ನೀಡಿದ ದೂರಿನಂತೆ ಆತ್ಮಹತ್ಯೆ ಪ್ರಚೋದನೆ ಪ್ರಕರಣ ದಾಖಲಾಗಿತ್ತು.

Comments are closed.