ಬೆಂಗಳೂರು: ರಾಜ್ಯಸಭೆ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿ ಗೆಲವು ಸಾಧಿಸಿದ ಹಿರಿಯ ನಟ, ರಾಜಕಾರಣಿ ಜಗ್ಗೇಶ್ ಮಂತ್ರಾಲಯ ಶ್ರೀ ರಾಘವೇಂದ್ರ ಸ್ವಾಮಿ ಸನ್ನಿಧಿಗೆ ಪತ್ನಿಯೊಂದಿಗೆ ಭೇಟಿ ನೀಡಿದರು.
ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಫೋಟೋ ಹಂಚಿಕೊಂಡಿರುವ ಜಗ್ಗೇಶ್ ಅವರು, ‘ಮಂತ್ರಾಲಯ ರಾಯರ ಬೃಂದಾವನದಲ್ಲಿ ರಾಜ್ಯಸಭಾ ಸರ್ಟಿಫಿಕೇಟ್ ಪ್ರತಿ ಇಟ್ಟು ರಾಯರು ಹಾಗು ಶ್ರೀಗಳ ಆಶೀರ್ವಾದ ಪಡೆದೆ. ಬಸ್ ಟಿಕೆಟ್ ಗು ಕಾಸಿಲ್ಲದ ಕಾಲದಿಂದ ರಾಯರ ಸೇವೆ ಮಾಡುತ್ತಿದ್ದ ಈ ಪುಟ್ಟ ಭಕ್ತನ ರಾಯರು ಹರಸಿ ಬೆಳೆಸಿದರು.. ನನ್ನಂತೆ ಎಲ್ಲಾ ಅದೃಷ್ಟ ರಾಯರು ತಮ್ಮ ಭಕ್ತರಿಗೆ ನೀಡಿ ಹರಸಲಿ..ಸರ್ವೆಜನಃಸುಖಿನೋಭವಂತು.ಶುಭ ಭಾನುವಾರ’ ಎಂದು ಬರೆದುಕೊಂಡಿದ್ದಾರೆ.
Comments are closed.