ಕರಾವಳಿ

ಯೋಗಿ ಆದಿತ್ಯನಾಥ್ ಜೀ ಭೇಟಿಯಾದ ಬೈಂದೂರು ಶಾಸಕ ಸುಕುಮಾರ ಶೆಟ್ಟಿ; ಕೊಲ್ಲೂರು ಕ್ಷೇತ್ರ, ಯಡಮೊಗೆ ಹಲವರಿ ಮಠಕ್ಕೆ ಆಹ್ವಾನ

Pinterest LinkedIn Tumblr

ಉಡುಪಿ: ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಜೀ ಅವರನ್ನು ಬೈಂದೂರು ಶಾಸಕ ಬಿ.ಎಂ ಸುಕುಮಾರ ಶೆಟ್ಟಿ ಭೇಟಿಯಾದರು.

2018 ರ ಚುನಾವಣಾ ಸಂದರ್ಭದಲ್ಲಿ ಬೈಂದೂರು ಕ್ಷೇತ್ರಕ್ಕೆ ಚುನಾವಣಾ ಪ್ರಚಾರಕ್ಕೆ ಆಗಮಿಸಿದ್ದ ಯೋಗಿಜಿಯವರನ್ನು ಬೈಂದೂರು ಕ್ಷೇತ್ರದ ಶಾಸಕ ಬಿಎಂ ಸುಕುಮಾರ್ ಶೆಟ್ಟಿ ಅವರು ಉತ್ತರ ಪ್ರದೇಶದ ಕಛೇರಿಯಲ್ಲಿ ಭೇಟಿ ಮಾಡಿ ಅವರೊಂದಿಗೆ ಸಮಾಲೋಚನೆ ನಡೆಸಿದರು.

ಇದೇ ವೇಳೆ ಯೋಗಿಯವರನ್ನು ಕೊಲ್ಲೂರು ಶ್ರೀ ಮೂಕಾಂಬಿಕಾ ಕ್ಷೇತ್ರಕ್ಕೆ ಮತ್ತು ಯಡಮೊಗೆ ಗ್ರಾಮದ ಹಲವರಿ ಮಠಕ್ಕೆ ಶಾಸಕ ಬಿ.ಎಂ ಸುಕುಮಾರ ಶೆಟ್ಟಿ ಆಹ್ವಾನಿಸಿದರು.

Comments are closed.