ಆರೋಗ್ಯ

ಅಂತಾರಾಷ್ಟ್ರೀಯ ಯೋಗ ದಿನಾಚರಣೆ; ಮೈಸೂರಿನಲ್ಲಿ ಸಾವಿರಾರು‌ ಮಂದಿಯೊಂದಿಗೆ ಯೋಗ ಮಾಡಿದ ಪ್ರಧಾನಿ ಮೋದಿ

Pinterest LinkedIn Tumblr

ಮೈಸೂರು: ವಿಶ್ವದಲ್ಲಿ ರೋಗ ಮುಕ್ತಿಗೆ ಯೋಗಾಸನವೇ ಆಧಾರವಾಗಿದೆ. ಪ್ರತಿನಿತ್ಯ ಪ್ರಾಣಾಯಾಮ, ಯೋಗ ಮಾಡೋದನ್ನು ರೂಢಿಸಿಕೊಳ್ಳಿ ಎಂದು ಪ್ರಧಾನಿ‌ ನರೇಂದ್ರ ಮೋದಿ ಹೇಳಿದ್ದಾರೆ.

8ನೇ ಅಂತಾರಾಷ್ಟ್ರೀಯ ಯೋಗ ದಿನಾಚರಣೆಯಲ್ಲಿ ಮಾತನಾಡಿದ ಅವರು, ದೇಶದ ಜನತೆಗೆ ಯೋಗ ದಿನಾಚರಣೆ ಶುಭಾಶಯಗಳು. ಕರ್ನಾಟಕ ಸಾಂಸ್ಕೃತಿಕ ರಾಜಧಾನಿ ಮೈಸೂರು, ಯೋಗ ಭೂಮಿ.. ಇಲ್ಲಿ ಕಂಡ ಯೋಗದ ಬೆಳಕು ಇವತ್ತು ವಿಶ್ವದ ಎಲ್ಲೆಡೆ ಪಸರಿಸಿದೆ. ಇಂದು ಯೋಗ ವಿಶ್ವಕ್ಕೆ ಆರೋಗ್ಯದ ಮಹತ್ವವನ್ನು ತಿಳಿಸುತ್ತಿದೆ. ಮೈಸೂರು ಭಾರತದ ಆಧ್ಯಾತ್ಮಿಕ ಕೇಂದ್ರವಾಗಿದೆ. ಈ ಮೊದಲು ಯೋಗವನ್ನು ಕೇವಲ ಮನೆಗಳಲ್ಲಿ ಮಾತ್ರ ಮಾಡಲಾಗುತ್ತಿತ್ತು. ಯೋಗ ವ್ಯಕ್ತಿಗೆ ಮಾತ್ರವಲ್ಲ, ವಿಶ್ವ ಮಾನವೀಯತೆ ಬೇಕಿದೆ. ಕೊರೋನಾ ಸಾಂಕ್ರಾಮಿಕ ರೋಗ ಸಮಯದಲ್ಲೂ ಕೂಡ ಯೋಗ ದಿನದ ಉತ್ಸಾಹ ಕಡಿಮೆ ಆಗಿರಲಿಲ್ಲ. ಇಂದು ಯೋಗ ದಿನಾಚರಣೆ ತನ್ನದೇ ಆದ ಮಹತ್ವವನ್ನು ಪಡೆದುಕೊಂಡಿದೆ ಎಂದರು.

ಯೋಗವು ನಮಗೆ ಶಾಂತಿಯನ್ನು ತರುತ್ತದೆ. ಯೋಗದಿಂದ ಶಾಂತಿಯು ಕೇವಲ ವ್ಯಕ್ತಿಗಳಿಗೆ ಮಾತ್ರವಲ್ಲ. ಯೋಗದಿಂದ ನಮ್ಮ ಸಮಾಜಕ್ಕೆ ಶಾಂತಿ ಸಿಗುತ್ತದೆ. ಯೋಗವು ನಮ್ಮ ರಾಷ್ಟ್ರಗಳಿಗೆ ಮತ್ತು ಜಗತ್ತಿಗೆ ಶಾಂತಿಯನ್ನು ತರುತ್ತದೆ. ಮತ್ತು ಯೋಗವು ನಮ್ಮ ವಿಶ್ವಕ್ಕೆ ಶಾಂತಿಯನ್ನು ತರುತ್ತದೆ ಎಂದು ತಿಳಿಸಿದರು.

ಯೋಗ ನಮ್ಮ ಬದುಕಿಗೆ ಪ್ರೇರಣೆಯಾಗಿದೆ. ದೇಶದ 75 ಐತಿಹಾಸಿಕ ಕೇಂದ್ರ ಸ್ಥಳಗಳಲ್ಲಿ ಯೋಗ ದಿನಾಚರಣೆ ಆಚರಿಸಲಾಗುತ್ತಿದೆ. ಯೋಗ ಜೀವನ ಒಂದು ಭಾಗವಲ್ಲ, ಇಂದು ಯೋಗ ಜೀವನ ಶೈಲಿಯೇ ಆಗಿದೆ. ಅಂತಾರಾಷ್ಟ್ರೀಯ ಮಟ್ಟದಲ್ಲೂ ಗಾರ್ಡಿಯನ್ ರಿಂಗ್ ಆಫ್ ಯೋಗ ಮಾಡಲಾಗುತ್ತಿದೆ. ಜಗತ್ತಿನ ಹಲವು ದೇಶಗಳಲ್ಲಿ ಸೂರ್ಯೋದಯದೊಂದಿಗೆ ಯೋಗ ದಿನಾಚರಣೆ ಆಚರಿಸಲಾಗುತ್ತಿದೆ. ಯೋಗ ಕ್ಷೇತ್ರದಲ್ಲಿ ಹೊಸ ಹೊಸ ಪ್ರಯತ್ನಗಳು ನಡೆಯುತ್ತಿದೆ. ಇದಕ್ಕಾಗಿ ಆಯುಷ್ಮಾನ್ ಇಲಾಖೆಯಲ್ಲಿ ಸ್ಟಾರ್ಟ್​​ಅಪ್ ಕೂಡ ತರಲಾಗಿದೆ ಎಂದರು.

ಕಾರ್ಯಕ್ರಮದಲ್ಲಿ ಪ್ರಧಾನಿ ಜೊತೆ ಮಹಾರಾಜರಾದ ಯಧುವೀರ್, ಸಿಎಂ ಬಸವರಾಜ ಬೊಮ್ಮಾಯಿ, ರಾಜ್ಯಪಾಲರು, ಉಸ್ತುವಾರಿ ಸಚಿವರು ಹಾಗೂ ಆಯುಷ್ ಇಲಾಖೆಯ ಸಚಿವರು ಹಾಗೂ ಸುಮಾರು ಸಾವಿರಾರು‌ ಮಂದಿ ಪಾಲ್ಗೊಂಡಿದ್ದರು.

Comments are closed.