ಉಡುಪಿ: ಮೆಹಂದಿ ಕಾರ್ಯಕ್ರಮದಲ್ಲಿ ಕುಣಿಯುತ್ತಿದ್ದ ವ್ಯಕ್ತಿ ಕುಸಿದು ಬಿದ್ದು ಮೃತಪಟ್ಟ ಘಟನೆ ಉಡುಪಿಯ ಅಂಬಾಗಿಲು ಪುತ್ತೂರು ಬಳಿ ನಡೆದಿದೆ.
ಮೃತ ವ್ಯಕ್ತಿಯನ್ನು ಅಂಬಾಗಿಲು ನಿವಾಸಿ ಗಣಪತಿ ಆಚಾರ್ಯ (56) ಎಂದು ಗುರುತಿಸಲಾಗಿದೆ.
ತನ್ನ ಮನೆಯ ಬಳಿ ನಡೆಯುತ್ತಿದ್ದ ಮೆಹಂದಿ ಕಾರ್ಯಕ್ರಮದಲ್ಲಿ ಎಲ್ಲರೂ ಕುಣಿಯುತ್ತ ಸಂಭ್ರಮದಲ್ಲಿದ್ದಾಗಲೇ ಕುಣಿದು ದಣಿದು ಸುಸ್ತಾಗಿ ನಿಂತ ಗಣಪತಿ ಆಚಾರ್ಯ ಅವರು ಹಾಗೇ ಅಲ್ಲಿ ಪಕ್ಕದಲ್ಲಿದ್ದ ಕುರ್ಚಿಯ ಮೇಲೆ ಕುಳಿತರು.
ಕೆಲವೇ ಕ್ಷಣಗಳಲ್ಲಿ ಪಕ್ಕದಲ್ಲಿದ್ದ ಇನ್ನೊಬ್ಬರ ಮೇಲೆ ಒರಗುತ್ತಾ ಕೆಳಕ್ಕೆ ಬಿದ್ದಿದ್ದು, ಕೂಡಲೇ ಅವರನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ ಅಷ್ಟರಲ್ಲಾಗಲೇ ಅವರು ಮೃತಪಟ್ಟಿರುವುದಾಗಿ ವೈದ್ಯರು ತಿಳಿಸಿದ್ದಾರೆ.
Comments are closed.