ಕರಾವಳಿ

ಉಡುಪಿ ಪರ್ಕಳದ ಮನೆ ಮೇಲೆ ಉರುಳಿದ ಕಂಟೈನರ್; ತಪ್ಪಿದ ಭಾರೀ ಅನಾಹುತ

Pinterest LinkedIn Tumblr

ಉಡುಪಿ: ಇಲ್ಲಿನ ಪರ್ಕಳದಲ್ಲಿ ರವಿವಾರ ತಡರಾತ್ರಿ ಕಂಟೈನರ್ ಲಾರಿಯೊಂದು ರಸ್ತೆ ಬದಿಯ ಮನೆಯೊಂದಕ್ಕೆ ಪಲ್ಟಿಯಾದ ಘಟನೆ ಪರ್ಕಳದಲ್ಲಿ ನಡೆದಿದೆ.

ಈ ಭಾಗದಲ್ಲಿ ರಸ್ತೆ ವಿಸ್ತರಣೆ ಹಾಗೂ ಎನ್‌ಎಚ್‌ 169ಎ ಕಾಂಕ್ರೀಟ್‌ ಕಾಮಗಾರಿ ನಡೆಯುತ್ತಿರುವುದರಿಂದ ಕಂಟೈನರ್‌ ಚಾಲಕ ಹಠಾತ್‌ ವಕ್ರರೇಖೆಯನ್ನು ಗಮನಿಸದ ಕಾರಣ ವಾಹನದ ನಿಯಂತ್ರಣ ತಪ್ಪಿ ರಸ್ತೆ ಬದಿಯ ಮನೆಯ ಮೇಲೆ ಉರುಳಿದೆ. ಅದೃಷ್ಟವಶಾತ್ ಮನೆ ಖಾಲಿಯಾಗಿದ್ದ ಹಿನ್ನೆಲೆಯಲ್ಲಿ ಅಪಾಯ ತಪ್ಪಿದಂತಾಗಿದೆ. ಕಂಟೇನರ್ ಚಾಲಕ ಗಾಯಗಳಿಲ್ಲದೆ ಪಾರಾಗಿದ್ದಾರೆ.

ಕಂಟೈನರ್ ಪರ್ಕಳದಿಂದ ಗೋವಾ ಕಡೆಗೆ ಕಾಗದಗಳನ್ನು ಸಾಗಿಸುತ್ತಿತ್ತು. ಪರ್ಕಳ-ಮಣಿಪಾಲ ರಸ್ತೆಯಲ್ಲಿ ದಿಢೀರ್ ತಿರುವು ಇದ್ದ ಕಾರಣ ಚಾಲಕರಿಗೆ ವಾಹನವನ್ನು ನಿಯಂತ್ರಿಸಲು ಸಾಧ್ಯವಾಗಲಿಲ್ಲ.

ಸ್ಥಳೀಯ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

Comments are closed.