ಮುಂಬೈ: ಕರ್ನಾಟಕದ ಯುವತಿ ಸಿನಿ ಶೆಟ್ಟಿ‘ಮಿಸ್ ಇಂಡಿಯಾ-2022’ ಸ್ಪರ್ಧೆಯಲ್ಲಿ ವಿಜೇತರಾಗಿದ್ದಾರೆ. ಭಾನುವಾರ ಮುಂಬೈನಲ್ಲಿ ನಡೆದ ಸ್ಪರ್ಧೆಯಲ್ಲಿ ಉಡುಪಿ ಮೂಲದ ಸಿನಿ ಶೆಟ್ಟಿ ವಿಜೇತರಾಗಿದ್ದು, ರಾಜಸ್ಥಾನದ ರುಬಲ್ ಶೆಖಾವತ್ ಹಾಗೂ ಉತ್ತರ ಪ್ರದೇಶದ ಶಿನಾತಾ ಚೌಹಾಣ್ 1ನೇ ಹಾಗೂ 2ನೇ ರನ್ನರ್ ಅಪ್ ಆದರು.
ಉಡುಪಿ ಮೂಲದ 21 ವರ್ಷದ ಸಿನಿ, ಮುಂಬೈನಲ್ಲಿ ಹುಟ್ಟಿಬೆಳೆದಿದ್ದು ಭರತನಾಟ್ಯ ಕಲಾವಿದೆಯಾಗಿದ್ದಾರೆ. ಇವರು ಮುಂದೆ ಮಿಸ್ ವರ್ಲ್ಡ್ ಸ್ಪರ್ಧೆಯಲ್ಲಿ ಭಾರತವನ್ನು ಪ್ರತಿನಿಧಿಸಲಿದ್ದಾರೆ. ಮಿಸ್ ಇಂಡಿಯಾ ಸ್ಪರ್ಧೆಗೆ ಮಲೈಕಾ ಅರೋರಾ, ನೇಹಾ ಧೂಪಿಯಾ, ಡಿನೋ ಮೊರಿಯಾ, ಮಿಥಾಲಿ ರಾಜ್ ಮುಂತಾದವರು ಜೂರಿಗಳಾಗಿದ್ದರು.
ಸಿನಿ ಶೆಟ್ಟಿ…
ಸಿನಿ ಶೆಟ್ಟಿ ಮುಂಬೈನಲ್ಲಿ ಜನಿಸಿದರು. ಆದರೆ ಕರ್ನಾಟಕದ ಉಡುಪಿ ಜಿಲ್ಲೆ ಮೂಲದವರು ಮತ್ತು ಪ್ರಸ್ತುತ ಚಾರ್ಟರ್ಡ್ ಫೈನಾನ್ಷಿಯಲ್ ಅನಾಲಿಸ್ಟ್ ವೃತ್ತಿಪರ ಕೋರ್ಸ್ ಮಾಡುತ್ತಿದ್ದಾರೆ. ನೃತ್ಯ ಎಂದರೆ ಇವರಿಗಿಷ್ಟ. ನಾಲ್ಕನೇ ವಯಸ್ಸಿನಲ್ಲಿ ನೃತ್ಯ ಮಾಡಲು ಪ್ರಾರಂಭಿಸಿದ್ದು, ಹದಿನಾಲ್ಕು ವರ್ಷದವರಿದ್ದಾಗ ಅರಂಗೇತ್ರಂ ಮತ್ತು ಭರತನಾಟ್ಯವನ್ನು ಪೂರ್ಣಗೊಳಿಸಿದರು.
Comments are closed.