ಉಡುಪಿ: ಇಲ್ಲಿನ ಸರಕಾರಿ ತಾಯಿ ಮಕ್ಕಳ ಹೆರಿಗೆ ಆಸ್ಪತ್ರೆಯಲ್ಲಿ ಮಹಿಳೆಯೊಬ್ಬರು ಮೂರು ಮಕ್ಕಳಿಗೆ ಜನ್ಮ ನೀಡಿದ್ದಾರೆ.
ಜುಲೈ 7 ರಂದು ಉಡುಪಿಯ ಸರಕಾರಿ ತಾಯಿ ಮತ್ತು ಮಕ್ಕಳ ಹೆರಿಗೆ ಆಸ್ಪತ್ರೆಯ ಡಾ. ಕವಿತಾ ಭಟ್, ಡಾ. ರಜನಿ ಕಾರಂತ್ ಡಾ ಸೂರ್ಯನಾರಾಯಣ ಡಾ. ಗಣಪತಿ ಹೆಗಡೆ ಹಾಗೂ ಡಾ. ಮಹದೇವ್ ಭಟ್ ಅವರನ್ನು ಒಳಗೊಂಡ ತಜ್ಞ ವೈದ್ಯರ ತಂಡ ಯಶಸ್ವಿಯಾಗಿ 27 ವರ್ಷ ಪ್ರಾಯದ ಸಿದ್ದಿ ಜನಾಂಗ ಮೂಲದ ಗರ್ಭಿಣಿಗೆ ಸಿಸೇರಿಯನ್ ಹೆರಿಗೆ ಮಾಡಿದ್ದು ತ್ರಿವಳಿ ಮಕ್ಕಳ ಜನಿಸಿವೆ.
ತಾಯಿ ಮೂಲತಃ ಉತ್ತರಕನ್ನಡ ಜಿಲ್ಲೆಯ ಅಂಕೋಲದವರಾಗಿದ್ದು ಸದ್ಯ ತಾಯಿ ಮತ್ತು ತ್ರಿವಳಿಗೆ ಆರೋಗ್ಯವಾಗಿದ್ದಾರೆ ಎಂದು ಆಸ್ಪತ್ರೆಯ ಮೂಲಗಳು ತಿಳಿಸಿದೆ.
Comments are closed.