ಕರಾವಳಿ

ಬೈಂದೂರಿನ ಶಿರೂರು ಟೋಲ್ ಫ್ಲಾಜಾದಲ್ಲಿ ಅಂಬುಲೆನ್ಸ್ ಪಲ್ಟಿ; ಮೂವರು ದಾರುಣ ಮೃತ್ಯು, ಓರ್ವ ಗಂಭೀರ( Video)

Pinterest LinkedIn Tumblr

ಕುಂದಾಪುರ: ಉತ್ತರಕನ್ನಡ ಜಿಲ್ಲೆ ಹೊನ್ನಾವರದಿಂದ ರೋಗಿಗಳನ್ನು ಸಾಗಿಸುತ್ತಿದ್ದ ಅಂಬುಲೈನ್ಸ್ ಚಾಲಕನ ನಿಯಂತ್ರಣ ತಪ್ಪಿ ಟೋಲ್ ಫ್ಲಾಜಾ ಬಳಿ ಪಲ್ಟಿಯಾದ ಘಟನೆ ಬೈಂದೂರು ತಾಲೂಕಿನ ಶಿರೂರು ಟೋಲ್ ಬಳಿ ಬುಧವಾರ ಸಂಜೆ ನಡೆದಿದೆ. ಈ ದುರ್ಘಟನೆಯಲ್ಲಿ ಮೂವರು ಮೃತಪಟ್ಟಿದ್ದು ಓರ್ವ ಗಂಭೀರವಾಗಿ ಗಾಯಗೊಂಡಿದ್ದಾರೆ ಎಂದು ತಿಳಿದುಬಂದಿದೆ. ಕುಂದಾಪುರ ಸರ್ಕಾರಿ ಆಸ್ಪತ್ರೆ ಈಗಾಗಾಲೇ ಗಾಯಾಳುವಿಗೆ ಚಿಕಿತ್ಸೆ ನೀಡಲಾಗುತ್ತಿದೆ.

ಹೊನ್ನಾವರದಿಂದ ಕುಂದಾಪುರಕ್ಕೆ ರೋಗಿಗಳನ್ನು ಸಾಗಿಸುತ್ತಿದ್ದ ಅಂಬುಲೈನ್ಸ್ ಅತೀ ವೇಗದಿಂದ ಟೋಲ್ ಬಳಿ ನಿಯಂತ್ರಣ ತಪ್ಪಿ ಪಲ್ಟಿಯಾಗಿದೆ. ಆಂಬುಲೆನ್ಸ್ ವಾಹನ ಬರುತ್ತಿರುವ ಸೂಚನೆಯಿದ್ದ ಕಾರಣ ಟೋಲ್ ಸಿಬಂದಿಗಳು ಬ್ಯಾರಿಕೆಡ್ ತೆರವು ಮಾಡಿ ಸುಗಮ ಸಂಚಾರಕ್ಕೆ ಅನುವು‌ ಮಾಡಕೊಡುತ್ತಿರುವಾಗಲೇ ಅಂಬುಲೆನ್ಸ್ ಪಲ್ಟಿಯಾಗಿ ಟೋಲ್ ಬಳಿ ಕಂಬಕ್ಕೆ ಡಿಕ್ಕಿ ಹೊಡೆದಿದ್ದು ಇದರಲ್ಲಿ ಮೂವರು ಸಾವನ್ನಪ್ಪಿ ಓರ್ವ ಗಂಭೀರ ಗಾಯಗೊಂಡಿದ್ದು ಕುಂದಾಪುರ ಆಸ್ಪತ್ರೆಗೆ ಸಾಗಿಸಲಾಗಿದೆ.

ಬೈಂದೂರು ಪೊಲೀಸರು ಸ್ಥಳಕ್ಕೆ ಭೇಟಿ ನೀಡಿದ್ದಾರೆ. ಹೆಚ್ಚಿನ ವಿವರ ಇನ್ನಷ್ಟೇ ಲಭ್ಯವಾಗಬೇಕಿದೆ.

Comments are closed.