ಕುಂದಾಪುರ: ಇಂಗ್ಲೆಂಡ್ ಬರ್ಮಿಂಗ್ಹ್ಯಾಮ್ನಲ್ಲಿ ನಡೆದ ಕಾಮನ್ವೆಲ್ತ್ ಭಾರ ಎತ್ತುವ ಸ್ಪರ್ದೆಯಲ್ಲಿ ಕಂಚಿನ ಪದಕ ಪಡೆದ ಗುರುರಾಜ್ ಭಾನುವಾರ ಹುಟ್ಟೂರಿಗೆ ಆಗಮಿಸಿದ್ದು ತಂದೆ-ತಾಯಿ ಅಪ್ಪುಗೆಯ ಮೂಲಕ ಬರ ಮಾಡಿಕೊಂಡರು.ಪತ್ನಿ ಸಮೇತ ಬಂದ ಗುರುರಾಜ್ ಅವರ ಮನೆಯವರು ಆರತಿ ಎತ್ತಿ ಒಳಗೆ ಕರೆದುಕೊಂಡರು. ಇಡೀ ಮನೆಯಲ್ಲಿ ಸಂಭ್ರಮ ಸಡಗರ ಕಂಡುಬಂದರೆ, ಪಟಾಕಿ ಸಿಡಿಸಿ ಸಿಹಿ ಹಂಚಿ ಊರವರು, ಮನೆಯವರು ಸಂಭ್ರಮಿಸಿದರು.
‘ಈಗ ನಾ ಎಲ್ಲಿ ಹೋದರೂ ಗುರು ತಂದೆ ಬಂದ್ರು ಎಂದು ಗುರುತಿಸುತ್ತಾರೆ. ನಿಮ್ಮ ಮಗ ದೇಶಕ್ಕಾಗಿ ಪದಕ ತಂದ ಎಂದು ಖುಷಿ ಪಡುತ್ತಾಋ. ಅದಲ್ಲೆ ಕೇಂಡು ಖುಷಿಯಾಗಿತ್ತು. ಪದಕ ತರುವ ಮೂಲಕ ನಮ್ಮನೆ ಹೆಸರು ಎತ್ತರಕ್ಕೆ ಕೊಂಡೊಯ್ದಿದ್ದಾನೆ. ಹೆಮ್ಮಪಡುವ ಮಗ ಇದ್ನಲ್ಲಾ ಎನ್ನೋದು ನಮ್ಮ ಬದುಕಿನ ದೊಡ್ಡ ಹೆಮ್ಮೆಯ ವಿಷಯ ಎನ್ನುತ್ತಾರೆ ಗುರುರಾಜ್ ತಂದೆ ಮಹಾಬಲ ಪೂಜಾರಿ.
ಕೊನೆ ಕ್ಷಣದವರೆಗೆ ಪದಕ ನಿರೀಕ್ಷಿಸಿರಲಿಲ್ಲ..
ಕಾಡಿದ ಜ್ವರಕ್ಕೆ ವೈಟ್ಲಾಸ್ ಆಯಿತು. ಪದೇ ಪದೇ ಕೈ ಕಾಲಿಗೆ ಆದ ಗಾಯ.. ಮೂರನೇ ಪ್ರಯತ್ನದ ತನಕ ಪದಕ ನಿರೀಕ್ಷೆಯೇ ಇರಲಿಲ್ಲ. ಆದರೆ ಕೊನೆ ಪ್ರಯತ್ನಕ್ಕೆ ಹೋಗುವ ಮುನ್ನಾ ಗುರು ಇದು ಕೊನೇ ಛಾನ್ಸ್.. ನಾಲ್ಕುವರ್ಷದ ನಿನ್ನ ಪರಿಶ್ರಮ, ನಿನ್ನ ಕನಸು ನಿಮ್ಮವರ ನಿರೀಕ್ಷೆಯ ಕೊನೆಯ ಹಂತದಲ್ಲಿದ್ದೀಯ. ಕೊನೆ ಅವಕಾಶ ಮಿಸ್ ಮಾಡಿಕೊಂಡರೆ ನಾಲ್ಕು ವರ್ಷದ ಪರಿಶ್ರಮ ವ್ಯರ್ಥವಾಗುತ್ತದೆ. ಎತ್ತಿಬಿಡು ಗುರು ಕೈಚೆಲ್ಲಬೇಡಾ ಎಂದ ಕೋಚ್ ಹೇಳಿದ ಒಂದೇಒಂದು ಮಾತು ಕಂಚಿನ ಪದಕ ಸಿಗಲು ಪ್ರೇರಣೆ. ಮನೆಯವರ ಹಾರೈಕೆ ದೇಶವಾಸಿಗಳ ಪ್ರೀತಿ. ಹಿಂದಿನ ಕಾಮನ್ವೆಲ್ತ್ ಚಿನ್ನದ ಸಾಧನೆಯ ಹಿನ್ನೆಲೆಯಲ್ಲಿ ಸಮಸ್ತ ಭಾರತೀಯರು ಇಟ್ಟಿದ್ದ ಭರವಸೆ ಕಂಚಿನ ರೂಪದಲ್ಲಿ ಸಾಕಾರಗೊಂಡಿತು. ಈ ಒಂದು ಕ್ಷಣಕ್ಕಾಗಿ ಕಾದಿದ್ದು ಸಾರ್ಥಕವಾಯಿತು ಎಂದರು. ಮೊದಲಬಾರಿ ದೇಶಕ್ಕೆ 61 ಕೆಜಿ ವಿಭಾಗದಲ್ಲಿ ಪದಕ ಸಿಕ್ಕಿತ್ತಲ್ಲ ಎನ್ನುವ ಹೆಮ್ಮೆಯಿದೆ. ಗುರಿ, ಸಾಧಿಸಬೇಕು ಛಲ, ನಿರಂತರ ಅಭ್ಯಾಸ, ಏಕಾಗೃತೆ, ದೈಹಿಕ ಕ್ಷಮತೆ ಕಾಪಾಡಿಕೊಳ್ಳುವುದರ ಮೂಲಕ ಪ್ರಯತಿಸಿದರು. ಸಾಧನೆ ಒಲಿಯುತ್ತದೆ ಎನ್ನೋದ ಯುವ ಸಮಾಜ ಅರ್ಥ ಮಾಡಿಕೊಂರೆ ಸಾಧನೆ ಮಾಡಬಹುದು ಎನ್ನೋದು ಗುರುರಾಜ್ ಯುವ ಸಮಾಜಕ್ಕೆ ನೀಡಿದ ಸಲಹೆ.
ಬರಮಾಡಿಕೊಂಡ ಶಾಸಕ…
ಹುಟ್ಟೂರಿಗೆ ಆಗಮಿಸುತ್ತಿದ್ದು ಗುರುರಾಜ್ ಅವರನ್ನು ವಂಡ್ಸೆ ನೆಂಪುವಿನಲ್ಲಿ ಬೈಂದೂರು ಶಾಸಕ ಬಿ.ಎಂ.ಸುಕುಮಾರ್ ಶೆಟ್ಟಿ ಸ್ವಾಗತಿಸಿ ಮಾತನಾಡಿ, ಗುರುರಾಜ್ ನಮ್ಮೂರ ಹುಡುಗ ಎನ್ನುವುದಕ್ಕೆ ನಮಗೆ ಹೆಮ್ಮೆಯಾದರೆ, ಅತ್ಯಂತ ಗ್ರಾಮೀಣ ಭಾಗದ ಜಗದೆತ್ತರಕ್ಕೆ ಎತ್ತರಿಸಿದ ಗುರುರಾಜ್ ಸಾಧನೆ ಎಲ್ಲರೂ ಹೆಮ್ಮೆ ಪಡುವ ವಿಷಯ. ಕೊಲ್ಲೂರು ಪ್ರೌಢ ಹಾಗೂ ಪಿಯುಸಿಗೆ ಸೇರಿದ ನಂತರ ಗುರುರಾಜ್ ಬದುಕಲ್ಲಿ ಹೊಸ ತಿರುವು ಸಿಕ್ಕಿತು. ಪ್ರಯತ್ನ ಪಟ್ಟರೆ ಗ್ರಾಮಿಣ ಭಾಗದ ವಿದ್ಯಾರ್ಥಿಗಳು ಸಾಧನೆ ಮಾಡುಬಹುದು ಎನ್ನುವುದ ಎರಡು ಕಾಮನ್ವೆಲ್ತ್ ಪದಕದ ಮೂಲಕ ಸಬೀತ ಗುರುರಾಜ್ ಮಾಡಿದ್ದಾರೆ. ಮುಂದಿನ ಕಾಮನ್ವೆಲ್ತ್ ಸ್ಪರ್ಧೆಯಲ್ಲಿ ಚಿನ್ನದ ತರುವ ಎಲ್ಲಾ ಪ್ರಯತ್ನ ಮಾಡುವಂತಾಗಲಿ ಎಂದರು.
ಜಿಲ್ಲಾ ಕ್ರೀಡಾಧಿಕಾರಿ ರೋಶನ್ ಕುಮಾರ್ ಶೆಟ್ಟಿ, ಗುರುರಾಜ್ಗೆ ಆರಂಭದ ತರಬೇತಿ ನೀಡಿದ ಕೊಲ್ಲೂರು ಪ್ರೌಢಶಾಲೆ ದೈಹಿಕ ಶಿಕ್ಷಕ ಸುಕೇಶ್ ಶೆಟ್ಟಿ, ಬಿಜೆಪಿ ಮಂಡಲ ಅಧ್ಯಕ್ಷ ದೀಪಕ್ ಕುಮಾರ್ ಶೆಟ್ಟಿ, ಗುರುತಂದೆ ಮಹಾಬಲ ಪೂಜಾರಿ, ತಾಯಿ, ಪತ್ನಿ ಹಾಗೂ ಕುಟುಂಬದವರು ಇದ್ದರು.
ಕುಂದಾಪುರದ ನ್ಯೂ ಹಕ್ರ್ಯೂಲಸ್ ಜಿಮ್ & ಫಿಟ್ ನೆಸ್ ಸೆಂಟರ್ನಲ್ಲಿ ಸತೀಶ್ ಖಾರ್ವಿ ಅವರು ಗುರುರಾಜ ಪೂಜಾರಿಯವರನ್ನು ಅಭಿನಂದಿಸಿದರು. ಬಳಿಕ ಪೊಲೀಸ್ ಇಲಾಖೆಯಿಂದ ಗೌರವಿಸಲಾಯಿತು. ನಂತರ ವೈಭವದ ಮೆರವಣಿಗೆ ಹುಟ್ಟೂರು ಚಿತ್ತೂರು ಗ್ರಾಮದ ವಂಡ್ಸೆ ಸಮೀಪದ ಜೆಡ್ಡುವಿನತ್ತ ತೆರಳಿದ್ದು ಮಾರ್ಗಮದ್ಯೆ ತಲ್ಲೂರು ಮೊದಲಾದೆಡೆ ಅಭಿನಂದಿಸಲಾಯಿತು.
Comments are closed.