ಮಂಗಳೂರು: ಬಿಜೆಪಿ ಯುವ ಮುಖಂಡ ಪ್ರವೀಣ್ ನೆಟ್ಟಾರ್ ಹತ್ಯೆ ಪ್ರಕರಣದ ಬಗ್ಗೆ ಪ್ರಮುಖ ಮೂವರು ಆರೋಪಿಗಳನ್ನು ಮಂಗಳೂರು ಪೊಲೀಸರು ಕೊನೆಗೂ ಬಂಧಿಸಿದ್ದಾರೆ.
ಪ್ರಮುಖ ಆರೋಪಿಗಳಾದ ಶಿಯಾಬ್, ಬಶೀರ್ ಮತ್ತು ರಿಯಾಜ್ ಎಂಬವರನ್ನು ಬಂಧಿಸಲಾಗಿದ್ದು ಈವರೆಗೆ ಈ ಪ್ರಕರಣದಲ್ಲಿ ಬಂಧಿತರ ಸಂಖ್ಯೆ 10 ಕ್ಕೆ ಏರಿದೆ.
ಪ್ರಮುಖ ಮೂವರು ಆರೋಪಿಗಳು ಆರು ಜಿಲ್ಲೆಯಲ್ಲಿ ಈವರೆಗೆ ಕಣ್ತಪ್ಪಿಸಿ ಓಡಾಟ ನಡೆಸುತ್ತಿದ್ದು, ಬೆಳ್ಳಾರೆ ಆಸುಪಾಸಿನವರೇ ಈ ಕೃತ್ಯದಲ್ಲಿ ಭಾಗಿಯದವರು ಎಂದು ತಿಳಿದುಬಂದಿದೆ. ಹಂತಕರು ಸಾಕಷ್ಟು ವ್ಯವಸ್ಥಿತ ತಯಾರಿ ನಡೆಸಿ ಸಂಚು ರೂಪಿಸಿ ಪ್ರವೀಣ್ ಹತ್ಯೆ ನಡೆಸಿದ್ದಾರೆ. ಹತ್ಯೆಗೆ ಬೈಕ್ ನೀಡಿದ್ದ ಆರೋಪಿ ಸುಳ್ಯದ ಕಬೀರ್ನನ್ನು ಆಗಸ್ಟ್ 9ರಂದು ಬಂಧಿಸಲಾಗಿದೆ. ತನ್ನ ಪರಿಚಯಸ್ಥನ ಬೈಕ್ ಪಡೆದಿದ್ದ ಕಬೀರ್, ಅದನ್ನು ಹಂತಕರಿಗೆ ನೀಡಿದ್ದ ಎಂಬುದು ತನಿಖೆಯಲ್ಲಿ ಬಯಲಾಗಿದೆ.
ಸದ್ಯ ಪ್ರಕರಣ ಪ್ರಮುಖ ಆರೋಪಿಗಳನ್ನು ಮಂಗಳೂರು ಪೊಲೀಸರು ಬಂಧಿಸಿದ್ದಾರೆ.
Comments are closed.