Kuwait

ತುಡರ್ ಕಲಾವಿದರಿಂದ ಓಮಾನ್ ನಲ್ಲಿ ಬಯ್ಯ ಮಲ್ಲಿಗೆ ನಾಟಕಕ್ಕೆ ಮುಹೂರ್ತ

Pinterest LinkedIn Tumblr

ಕುವೈತ್: ಓಮಾನ್ ದೇಶದಲ್ಲಿ ಎಲ್ಲಾ ಕಲಾವಿದೆರನ್ನು ಒಟ್ಟಿಗೆ ಸೇರಿಸಿ ಪ್ರಾರಂಭ ಮಾಡಿದ ಕಲಾವಿದೆರ ಒಂದು ಸಂಸ್ಥೆ ತುಡರ್ ಕಲಾವಿದೆರ್.. ಭಾರತೀಯ ಸಾಮಾಜಿಕ ವೇಧಿಕೆ ತುಳು ವಿಭಾಗ ಇವರ ಸಹಕಾರದೊಂದಿಗೆ ಓಮಾನ್ನಲ್ಲಿರುವ ಎಲ್ಲಾ ತುಳು ಬಾಂದವರನ್ನು ಒಟ್ಟಿಗೆ ಸೇರಿಸಿಕೊಂಡು ಕಳೆದ ಶುಕ್ರವಾರದಂದು ಒಂದು ನಾಟಕ ಮಾಡುವ ಸಲುವಾಗಿ ಅದರ ಮುಹೂರ್ಥ ಕಾರ್ಯಕ್ರಮವನ್ನು ನೆರವೇರಿಸಿದರು.

ಅಕ್ಟೋಬರ್ 28ನೇ ತಾರೀಕಿನಂದು ಓಮಾನ್ನಲ್ಲಿ ಡಾ: ಸಂಜೀವ ದಂಡಕೇರಿ ಬರೆದಿರುವ ಇಪ್ಪತ್ತು ಸಾವಿರಕ್ಕೂ ಜಾಸ್ತಿ ಪ್ರದರ್ಶನ ಕಂಡಂತಹ ಶ್ರೇಷ್ಠ ಅಭಿನಯದ ನಾಟಕ ಬಯ್ಯ ಮಲ್ಲಿಗೆ ಪ್ರದರ್ಶನಗೊಳ್ಳಲಿದೆ. ಈ ನಾಟಕವನ್ನು ಅಭಿನಯ ಮಾಡಿ ತೋರಿಸಲಿದ್ದಾರೆ ತುಡರ್ ಕಲಾವಿದರು.

ಮುಹೂರ್ತ ಕಾರ್ಯಕ್ರಮಕ್ಕೆ ಅತಿಥಿಯಾಗಿ ಬಂದು ದೀಪ ಬೆಳಗಿಸಿ ಕಾರ್ಯಕ್ರಮ ಉದ್ಘಾಟಿಸಿದವರು ಗಣೇಶ್ ಶೆಟ್ಟಿ, ಶ್ರೀಯುತ ಎಸ್.ಕೆ.ಪೂಜಾರಿ, ಎಸ್.ಡಿ.ಟಿ.ಪ್ರಸಾದ್, ದೇವಾನಂದ್ ಅಮಿನ್. ಇವರೊಂದಿಗೆ ಓಮಾನ್ನಲ್ಲಿರುವ ಸುಮಾರ್ ಜನ ಕಲಾ ಪೋಷಕರು ಪಾಲ್ಗೊಂಡಿದ್ದರು.. ಓಮಾನ್ ನಲ್ಲಿ ಬಯ್ಯ ಮಲ್ಲಿಗೆ ನಾಟಕವನ್ನು ಶ್ರೀಯುತ ದಯಾನಂದ್ ಪಾಲನ್ ನಿರ್ದೇಶನ ಮಾಡಲಿದ್ದಾರೆ.

ಸುಧೀರ್ ಶೆಟ್ಟಿ ಕಾರ್ಯಕ್ರಮ ನಿರೂಪಣೆ ಮಾಡಿ ಬಂದಿರುವ ಎಲ್ಲಾ ಅತಿಥಿಗಳನ್ನು ಪ್ರೀತಿಯಿಂದ ಸ್ವಾಗತಿಸಿದರು. ರಮಾನಂದ್ ಶೆಟ್ಟಿ ಕಾರ್ಯಕ್ರವನ್ನು ನಿರೂಪಿಸಿ, ಎಲ್ಲಾ ಕಲಾ ಪೋಷಕರನ್ನು ವಂದಿಸಿದರು.

Comments are closed.